ಬೆಂಗಳೂರು: ಬಹು ನಿರೀಕ್ಷೆಯ ಚಂದ್ರಯಾನ-3 ಮಿಷನ್ (Chandrayaan 3) ಸಕ್ಸೆಸ್ ಆಗಿದೆ. ಆಗಸ್ಟ್ 23ರಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರಯಾನ-3ರ ( Chandrayaan-3 mission) ಲ್ಯಾಂಡರ್ ನಿಧಾನವಾಗಿ ಚಂದ್ರನ ಮೇಲ್ಮೈ ಮೇಲೆ ಇಳಿದಿದೆ (Lander Soft landing). ಇದರೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹೊಸ ಇತಿಹಾಸ ರಚಿಸಿದೆ. ಚಂದ್ರಯಾನ-3 ಮಿಷನ್‌ನ ಯಶಸ್ಸಿನ ಮಧ್ಯೆ ಪ್ರಭಾಸ್ (Actor Prabhas) ಅಭಿನಯದ ಆದಿಪುರುಷ್ ಮತ್ತೊಮ್ಮೆ ತನ್ನ ಬಜೆಟ್‌ಗಾಗಿ ಟ್ರೋಲ್ ಆಗುತ್ತಿದೆ. ಓಂ ರೌತ್ ನಿರ್ದೇಶನದ ಈ ಸಿನಿಮಾ 600 ಕೋಟಿ ರೂ. ಬಜೆಟ್‌ನಲ್ಲಿ (Adipurush Budget) ನಿರ್ಮಾಣ ಮಾಡಲಾಗಿದೆ. ಚಂದ್ರಯಾನ-3ರ (Chandrayaan-3 Success) ಬಜೆಟ್ 615 ಕೋಟಿ ರೂ. ಎಂದು ವರದಿಯಾಗಿದೆ. ಈ ಕಾರಣಕ್ಕಾಗಿ ಸಿನಿಮಾ ಮತ್ತೆ ಟ್ರೋಲಿಗರ ಕಣ್ಣಿಗೆ ಗುರಿಯಾಗಿದೆ.
ಈ ಬಗ್ಗೆ ನೆಟ್ಟಿಗರು ಮನಬಂದಂತೆ ಕಮೆಂಟ್ ಹಾಕುತ್ತಿದ್ದಾರೆ. “ಸೆಲೆಬ್ರಿಟಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬಾರದು ಎಂಬುದಕ್ಕೆ ಇದೊಂದು ಉದಾಹರಣೆ. ವಿಜ್ಞಾನಿಗಳಿಗೆ ಭದ್ರತೆ ನೀಡಿ ಈ ‘ಸೂಪರ್‌ಸ್ಟಾರ್’ಗಳಿಗಲ್ಲ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ʻʻಇದು ಬೇಸರದ ಸಂಗತಿ. ಆದಿಪುರುಷ್ ಒಳ್ಳೆಯ ಪಾಡಕ್ಟ್ ಕೊನೆಗೂ ಆಗಿಲ್ಲʼʼ ಎಂದು ಕಮೆಂಟ್ ಮಾಡಿದ್ದಾರೆ.
ಚಂದ್ರಯಾನ 3 ಮಿಷನ್ ಕೈಗೊಳ್ಳಲು ಇಸ್ರೊ 615 ಕೋಟಿ ರೂಪಾಯಿ ಖರ್ಚು ಮಾಡಿದೆ. ಮೂಲಗಳ ಪ್ರಕಾರ ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾಗೆ 700 ಕೋಟಿ ರೂ. ಖರ್ಚು ಮಾಡಲಾಗಿದೆ. ಆದಿಪುರುಷ್ ಸಿನಿಮಾಗಿಂತ ಕಡಿಮೆ ವೆಚ್ಚದಲ್ಲಿ ಇಸ್ರೊ ಚಂದ್ರಯಾನ 3 ಉಡಾವಣೆ ಮಾಡುತ್ತಿರುವ ಕಾರಣ ವ್ಯಂಗ್ಯದ ಮೂಲಕ ಆದಿಪುರುಷ್ ಸಿನಿಮಾಗೆ ತಿರುಗೇಟು ಕೊಡಲಾಗಿದೆ.
ಇದನ್ನೂ ಓದಿ: Chandrayaan 3: ಚಂದ್ರಯಾನ 3 ವೆಚ್ಚ ಆದಿಪುರುಷ್ ಸಿನಿಮಾ ಬಜೆಟ್‌ಗಿಂತ ಕಡಿಮೆ; ಬಿಸಿ ಬಿಸಿ ಚರ್ಚೆ ಶುರು
ಹಿಂದೂ ಮಹಾಕಾವ್ಯ ರಾಮಾಯಣ ಮತ್ತು ಚಿತ್ರದಲ್ಲಿನ ಪಾತ್ರಗಳನ್ನು ತಿರುಚಿದ ಆರೋಪದ ಮೇಲೆ ವಿವಾದದ ಮಧ್ಯೆ ಆದಿಪುರುಷ್ ಬಿಡುಗಡೆಯಾಯಿತು.
ನಟ ಪ್ರಭಾಸ್, ಕೃತಿ ಸನೂನ್ ತಾರಾಗಣದ ಆದಿಪುರುಷ್ ಸಿನಿಮಾವನ್ನು ರಾಮಾಯಣವನ್ನು ಆಧರಿಸಿ ಚಿತ್ರಿಸಲಾಗಿದೆ. ಹಾಗಾಗಿ, ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಇದನ್ನು 700 ಕೋಟಿ ರೂ. ವ್ಯಯಿಸಿ ನಿರ್ಮಿಸಲಾಗಿದ್ದು, ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಹಣ ವ್ಯಯಿಸಿದ ಸಿನಿಮಾ ಎಂಬ ಖ್ಯಾತಿಗೂ ಭಾಜನವಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಯಶಸ್ಸು ಕಂಡಿಲ್ಲ. ಬಾಕ್ಸ್ ಆಫೀಸ್‌ನಲ್ಲಿ ಆದಿಪುರುಷ್ ಸಿನಿಮಾ 350 ಕೋಟಿ ರೂ. ಗಳಿಸಿದೆ ಎಂದು ವರದಿಗಳು ತಿಳಿಸಿವೆ.