Site icon Vistara News

Actor Prabhas : ಸಲಾರ್ ಬೆನ್ನಲ್ಲೇ ಪ್ರಭಾಸ್ ಜತೆ ಪ್ರಶಾಂತ್ ನೀಲ್ ಮತ್ತೊಂದು ಸಿನಿಮಾ! ನಿರ್ಮಾಪಕ ದಿಲ್ ರಾಜು ಹೇಳಿದ್ದೇನು?

#image_title

ಹೈದರಾಬಾದ್‌: ತೆಲುಗು ನಟ ಪ್ರಭಾಸ್‌ (Actor Prabhas) ಹಾಗೂ ಕೆಜಿಎಫ್‌ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಸಲಾರ್‌ ಸಿನಿಮಾ ತಯಾರಿಕೆಯಲ್ಲಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಬಿಗ್‌ ಬಜೆಟ್‌ ಸಿನಿಮಾದ ಕೆಲಸದಲ್ಲಿರುವ ಈ ಜೋಡಿ ಈ ಸಿನಿಮಾದ ನಂತರ ಮತ್ತೊಂದು ಸಿನಿಮಾ ಮಾಡಲು ಸಿದ್ಧವಾಗಿವೆ. ಈ ಸಿನಿಮಾ ತೆಲುಗು ಚಿತ್ರರಂಗದ ಅತ್ಯಂತ ದೊಡ್ಡ ಬಂಡವಾಳದ ಸಿನಿಮಾ ಆಗಿರಲಿದೆ.

ಹೌದು. ಪ್ರಶಾಂತ್‌ ನೀಲ್‌, ಪ್ರಭಾಸ್‌ ಹಾಗೂ ನಿರ್ಮಾಪಕ ದಿಲ್‌ ರಾಜು ಅವರು ಒಟ್ಟಾಗಿಕೊಂಡು ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾಕ್ಕೆ ತಾತ್ಕಾಲಿಕವಾಗಿ ʼರಾವಣಂʼ ಎಂದು ಹೆಸರಿಡಲಾಗಿದೆ. ಈ ಸುದ್ದಿಯನ್ನು ನಿರ್ಮಾಪಕ ದಿಲ್‌ ರಾಜು ಅವರೇ ಖಚಿತಪಡಿಸಿದ್ದಾರೆ. ಬಾಲಿವುಡ್‌ ಮಾಧ್ಯಮವಾಗಿರುವ ಪಿಂಕ್‌ವಿಲ್ಲಾ ಜತೆ ಮಾತನಾಡಿರುವ ಅವರು ಪೌರಾಣಿಕ ಚಿತ್ರಕ್ಕೆ ಪ್ರಭಾಸ್‌ ಮತ್ತು ಪ್ರಶಾಂತ್‌ ಜೋಡಿಯಾಗಲಿದ್ದಾರೆ ಎಂದು ಹೇಳಿದ್ದಾರೆ. ಹಾಗೆಯೇ ಬಂಡವಾಳದ ವಿಚಾರದಲ್ಲೂ ಇದು ತೆಲುಗು ಚಿತ್ರರಂಗದ ಬಹುದೊಡ್ಡ ಸಿನಿಮಾ ಆಗಲಿದೆ ಎಂದು ಮಾಹಿತಿ ಕೊಟ್ಟಿದ್ದಾರೆ.

ಹಾಗೆಯೇ ನಿರ್ಮಾಪಕರಾಗಿರುವ ಪ್ರಶಾಂತ್‌ ನೀಲ್‌ ಅವರು ಈಗಾಗಲೇ ಸ್ಕ್ರಿಪ್ಟ್‌ ಅನ್ನು ಅಂತಿಮಗೊಳಿಸಿದ್ದಾರೆ. ಸದ್ಯ ಪ್ರಭಾಸ್‌ ಅವರೊಂದಿಗೆ ಚಿತ್ರದ ಬಗ್ಗೆ ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಸಲಾರ್‌ ನಂತರ ಪ್ರಶಾಂತ್‌ ಅವರು ಜೂ.ಎನ್‌ಟಿಆರ್‌ ಅವರೊಂದಿಗೆ ಸಿನಿಮಾ ಒಂದನ್ನು ಮಾಡಲಿದ್ದಾರೆ. ಅದಾದ ನಂತರ ಅವರು ಮತ್ತೆ ಪ್ರಭಾಸ್‌ರೊಂದಿಗೆ ಕೆಲಸಕ್ಕೆ ಇಳಿಯಲಿದ್ದಾರೆ ಎಂದು ದಿಲ್‌ ರಾಜು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Salaar Movie: ಪ್ರಭಾಸ್‌ ನಟನೆಯ ಸಲಾರ್‌ ಸೆಪ್ಟೆಂಬರ್ 28ಕ್ಕೆ ತೆರೆಗೆ
ಸಲಾರ್‌ ಚಿತ್ರಕರಣ ಭರದಿಂದ ಸಾಗುತ್ತಿದೆ. ಸಿನಿಮಾದ ಟೀಸರ್‌ ಬಿಡುಗಡೆ ಮಾಡುವುದಕ್ಕಾಗಿ ಸಿನಿತಂಡ ಕೆಲಸ ಮಾಡುತ್ತಿದೆ. ಇನ್ನು ಕೆಲ ವಾರಗಳಲ್ಲಿ ಟೀಸರ್‌ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಚಿತ್ರದಲ್ಲಿ ಪ್ರಭಾಸ್‌ ಅವರ ಜತೆಯಲ್ಲಿ ಪೃಥ್ವಿರಾಜ್‌ ಸುಕುಮಾರನ್‌, ಶ್ರುತಿ ಹಾಸನ್‌, ಜಗಪತಿ ಬಾಬು ಸೇರಿ ಅನೇಕರು ಬಣ್ಣ ಹಚ್ಚಿದ್ದಾರೆ. ಕೆಜಿಎಫ್‌ ಚಿತ್ರಕ್ಕೆ ಸಂಗೀತ ನೀಡಿರುವ ರವಿ ಬಸ್ರೂರು ಅವರು ಈ ಸಿನಿಮಾದ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಪ್ರಭಾಸ್‌ ಅವರು ಸಲಾರ್‌ ಸಿನಿಮಾ ಜತೆಯಲ್ಲಿ ಮಹಾನಟಿ ಸಿನಿಮಾ ಖ್ಯಾತಿಯ ನಾಗ್‌ ಅಶ್ವಿನ್‌ ಅವರು ನಿರ್ದೇಶಿಸುತ್ತಿರುವ ಪ್ರಾಜೆಕ್ಟ್‌ ಕೆ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

Exit mobile version