Site icon Vistara News

Actor Prabhas | ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಪ್ರಭಾಸ್‌: ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಪಠಾಣ್‌ ನಿರ್ದೇಶಕ ಸಿದ್ಧಾರ್ಥ್‌ ಆನಂದ್‌

Actor Prabhas

ಬೆಂಗಳೂರು: ತೆಲುಗು ಚಿತ್ರರಂಗದಲ್ಲಿ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಎಂದೇ ಖ್ಯಾತಿ ಪಡೆದಿರುವ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು, ಭಾರೀ ಬಜೆಟ್ ಚಿತ್ರಗಳನ್ನೇ ತಯಾರು ಮಾಡುತ್ತಿದೆ. ಈ ಸಂಸ್ಥೆಯಿಂದ ಮೂಡಿ ಬಂದಿರುವ ʻವಾಲ್ತೇರು ವೀರಯ್ಯʼ ಹಾಗೂ ʻವೀರಸಿಂಹ ರೆಡ್ಡಿʼ ಚಿತ್ರಗಳು ಈ ವಾರ ದೇಶಾದ್ಯಂತ ಬಿಡುಗಡೆ ಆಗಿ, ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಇದರ ಬೆನ್ನಲ್ಲೇ ಹೊಸ ಸುದ್ದಿಯನ್ನು ನೀಡಿದೆ. ಪ್ರಭಾಸ್‌ (Actor Prabhas) ಸಿನಿಮಾಗೆ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಬಂಡವಾಳ ಹೂಡುತ್ತಿದೆ ಎನ್ನಲಾಗಿದೆ.

ʻಪಠಾಣ್‌ ʼಸಿನಿಮಾ ನಿರ್ದೇಶಕ ಸಿದ್ಧಾರ್ಥ್‌ ಆನಂದ್ ಅವರು ನಟ ಪ್ರಭಾಸ್‌ಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಬಾಲಿವುಡ್ ಚಿತ್ರವನ್ನು ಪ್ರಭಾಸ್ ಒಪ್ಪಿಕೊಂಡಿದ್ದಾರೆ. ಈ ಮಾಹಿತಿಯನ್ನು ಚಿತ್ರ ನಿರ್ಮಾಣ ಮಾಡುವ ಮೈತ್ರಿ ಮೂವಿ ಸಂಸ್ಥೆಯೇ ಬಹಿರಂಗ ಪಡಿಸಿದೆ. ಪ್ರಭಾಸ್ ಅವರ ಕೈಯಲ್ಲಿ ನಾಲ್ಕೈದು ದೊಡ್ಡ ಚಿತ್ರಗಳಿವೆ. ‘ಆದಿಪುರುಷ’ ಸಿನಿಮಾ ಮೂಲತಃ ಇದೇ ಸಂಕ್ರಾಂತಿಗೆ ಬಿಡುಗಡೆಯಾಗಬೇಕಿತ್ತು, ಆದರೆ ವಿಎಫ್‌ಎಕ್ಸ್ ಗುಣಮಟ್ಟದ ಕಾರಣದಿಂದ ಮುಂದೂಡಲಾಗಿತ್ತು. ಅದರ ಹೊರತಾಗಿ ʻಸಲಾರ್’ ಚಿತ್ರವನ್ನು ʻಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. ಇದು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಸ್ಪಿರಿಟ್ ಮತ್ತು ಪ್ರಾಜೆಕ್ಟ್ ʻಕೆʼ ಚಿತ್ರಗಳು ಪ್ರಭಾಸ್‌ ಕೈಯಲ್ಲಿವೆ.

ಇದನ್ನೂ ಓದಿ | Actor Prabhas | ಬಯಲಾಯ್ತಾ ಪ್ರಭಾಸ್‌ ವಿಗ್‌ ಸೀಕ್ರೆಟ್‌: ವಿಡಿಯೊ ವೈರಲ್‌!

ಶಾರುಖ್ ಖಾನ್ ನಿರ್ದೇಶನದ ಪಠಾಣ್ ಸಿನಿಮಾವನ್ನು ನಿರ್ದೇಶನ ಮಾಡಿರುವ ಸಿದ್ದಾರ್ಥ ಆನಂದ್, ಪಠಾಣ್ ಚಿತ್ರದ ನಂತರ ಪ್ರಭಾಸ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರಂತೆ. ಹಿಂದಿ ಚಿತ್ರರಂಗದಲ್ಲಿ ಅನೇಕ ಹಿಟ್ ಚಿತ್ರಗಳನ್ನು ಕೊಟ್ಟಿರುವ ಇವರು, ಈ ಬಾರಿ ಪ್ರಭಾಸ್ ಜತೆ ಅದೃಷ್ಟಕ್ಕೆ ಇಳಿಯಲಿದ್ದಾರೆ. 

ಹೃತಿಕ್ ರೋಷನ್ ನಾಯಕನಾಗಿ ನಟಿಸುತ್ತಿರುವ ‘ಫೈಟರ್’ ಸಿನಿಮಾಗೂ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ. ಅದರಲ್ಲಿ ದೀಪಿಕಾ ಪಡುಕೋಣೆ ನಾಯಕಿ. ಆ ಸಿನಿಮಾದ ನಂತರ ಪ್ರಭಾಸ್ ಸಿನಿಮಾ ಸೆಟ್ಟೇರುವ ಸಾಧ್ಯತೆಗಳಿವೆ.

ಇದನ್ನೂ ಓದಿ | Actor Prabhas | ಪ್ರಭಾಸ್‌ ಅಭಿಮಾನಿಗಳ ಪ್ರೀತಿಗೆ ಕ್ರ್ಯಾಶ್‌ ಆಯ್ತು ಆಹಾ ಒಟಿಟಿ!

Exit mobile version