Site icon Vistara News

Actor Prabhas: ಚಿರಂಜೀವಿ ಜನುಮದಿನದಂದೇ ಲೀಕ್‌ ಆಯ್ತು ‘ಕಲ್ಕಿ 2898 ಎಡಿ’ ದೃಶ್ಯ! ಕಾರಣವೇನು?

Actor Prabhas Chiranjeevi

ಬೆಂಗಳೂರು: ಟಾಲಿವುಡ್‌ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi ) ಆಗಸ್ಟ್ 22ರಂದು 68ನೇ ವಸಂತಕ್ಕೆ ಕಾಲಿಟ್ಟರು. ಸಾಮಾಜಿಕ ಜಾಲತಾಣಗಳಲ್ಲಿ ನಟನಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ‘ಮೆಗಾ 157’ ಪ್ರಾಜೆಕ್ಟ್‌ (Mega 157) ಕೂಡ ಅನೌನ್ಸ್‌ ಆಗಿದೆ. ಈ ವಿಶೇಷ ದಿನದಂದು ನಟ ಪ್ರಭಾಸ್ (Actor Prabhas) ಅವರ ‘ಕಲ್ಕಿ 2898 ಎಡಿ’ (Kalki 2898 – AD) ಚಿತ್ರತಂಡ ಚಿರಂಜೀವಿ ಅವರ ಜನುಮದಿನಕ್ಕೆ ವಿಶೇಷ ಗೌರವ ಸೂಚಿಸಿದೆ. ‘ಕಲ್ಕಿ 2898 ಎಡಿ’ ಚಿತ್ರ ಸಿನಿಮಾದ ವಿಡಿಯೊವೊಂದನ್ನು ಶೇರ್‌ ಮಾಡಿಕೊಂಡಿದೆ. ಈ ಮೂಲಕ ಚಿತ್ರತಂಡವೇ ಚಿತ್ರದ ದೃಶ್ಯವನ್ನು ಲೀಕ್‌ ಮಾಡಿದೆಯಾ ಎಂಬ ಅನುಮಾನ ಪ್ರಭಾಸ್‌ ಅಭಿಮಾನಿಗಳಲ್ಲಿ ಮೂಡಿದೆ.

ಚಿರಂಜೀವಿ ಅವರಿಗೆ ಶುಭ ಕೋರಲು ‘ಕಲ್ಕಿ 2898 ಎಡಿ’ ಸಿನಿಮಾ ತಂಡದವರು ನೇರವಾಗಿ ಎಡಿಟಿಂಗ್​ ರೂಮ್​ನಿಂದ ಒಂದು ವಿಡಿಯೊ ಕ್ಲಿಪ್​ ಹರಿಬಿಟ್ಟಿದ್ದಾರೆ. ಅದರಲ್ಲಿ ಪ್ರಭಾಸ್​ ಅವರು ಗ್ಯಾಸ್​ ಕಟರ್​ ಹಿಡಿದುಕೊಂಡು ಪೋಸ್​ ನೀಡಿದ್ದಾರೆ. ಅದು ಚಿರಂಜೀವಿ ನಟನೆಯ ‘ಗ್ಯಾಂಗ್​ ಲೀಡರ್​’ ಸಿನಿಮಾದಿಂದ ಸ್ಫೂರ್ತಿ ಪಡೆದ ದೃಶ್ಯ ಎಂದು ‘ಕಲ್ಕಿ 2898 ಎಡಿ’ ತಂಡ ಹೇಳಿಕೊಂಡಿದೆ. ‘ಮಹಾನಟಿ’ ಖ್ಯಾತಿಯ ನಾಗ್​ ಅಶ್ವಿನ್​ ಅವರು ‘ಕಲ್ಕಿ 2898 ಎಡಿ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ವೈಜಯಂತಿ ಮೂವೀಸ್​’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

ಈಗಾಗಲೇ ‘ಕಲ್ಕಿ 2898 ಎಡಿ’ ಚಿತ್ರತಂಡ ಟೀಸರ್‌ ಹಂಚಿಕೊಂಡಿದೆ. ಈ ಚಿತ್ರದಲ್ಲಿ ಪ್ರಭಾಸ್ ಅವರು ಕಲ್ಕಿ ಅವತಾರ ತಾಳಿದ್ದಾರೆ. ಈ ಸಿನಿಮಾದಲ್ಲಿ ಅನೇಕ ಸೂಪರ್ ಹೀರೊ ಮಾದರಿಯ ಪಾತ್ರಗಳು ಕಾಣಿಸಿವೆ. ದೀಪಿಕಾ ಪಡುಕೋಣೆ ಅವರು ಕೂಡ ‘ಕಲ್ಕಿ 2898-ಎಡಿ’ ಚಿತ್ರದಲ್ಲಿದ್ದಾರೆ. ಇದರಲ್ಲಿ ಅಮಿತಾಭ್ ಬಚ್ಚನ್ ಅವರ ಮುಖವನ್ನು ಮಾತ್ರ ತೋರಿಸಲಾಗಿದೆ. ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Kalki 2898 – AD: ನೀವು ದೊಡ್ಡ ಕಲಾವಿದರು ಎಂದು ಕಮಲ್‌ ಹಾಸನ್‌ರನ್ನು ಹೊಗಳಿದ ಬಿಗ್‌ ಬಿ!

‘ವೈಜಯಂತಿ ಮೂವೀಸ್​’ ಹಂಚಿಕೊಂಡ ಕ್ಲಿಪ್‌

ಈ ತಿಂಗಳ ಆರಂಭದಲ್ಲಿ ಪ್ರಾಜೆಕ್ಟ್‌ ಕೆ ಸಿನಿಮಾ ( ‘ಕಲ್ಕಿ 2898 ಎಡಿ’ ) ಅಮೆರಿಕದ ಸ್ಯಾನ್‌ ಡಿಯಾಗೊದಲ್ಲಿ ಕಾಮಿಕ್‌ ಕಾನ್‌ನ ಭಾಗವಾಗಲಿದೆ ಎಂದು ಘೋಷಿಸಲಾಗಿತ್ತು. ಈ ರೀತಿ ಕಾಮಿಕ್‌ ಕಾನ್‌ಗೆ ಆಯ್ಕೆಯಾದ ಮೊದಲನೇ ಭಾರತೀಯ ಸಿನಿಮಾ ಎನ್ನುವ ಖ್ಯಾತಿಯನ್ನೂ ಇದು ಪಡೆದುಕೊಂಡಿತ್ತು. ಈ ಬಗ್ಗೆ ದೀಪಿಕಾ ಪಡುಕೋಣೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರು. “ಕಾಮಿಕ್ ಕಾನ್‌ಗೆ ಹೋದ ಮೊದಲ ಭಾರತೀಯ ಚಲನಚಿತ್ರದ ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಅಲ್ಲಿ ನಿಮ್ಮನ್ನು ನೋಡೋಣ” ಎಂದು ದೀಪಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.

Exit mobile version