ಆಂಧ್ರ ಪ್ರದೇಶ: ಪಶ್ಚಿಮ ಗೋದಾವರಿ ಜಿಲ್ಲೆಯ ಅತ್ತಿಲಿ ಗ್ರಾಮದಲ್ಲಿ ಏಪ್ರಿಲ್ 14ರ ರಾತ್ರಿ ಸಹ ಕಾರ್ಮಿಕನೊಬ್ಬ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದಾನೆ. ತಮ್ಮ ನೆಚ್ಚಿನ ನಟರ ಬಗ್ಗೆ ಇಬ್ಬರು ಪೇಂಟರ್‌ಗಳ ನಡುವೆ ಜಗಳ ಉಂಟಾಗಿದೆ. ಅದು ಕೊನೆಗೆ ಒಬ್ಬನ ಹತ್ಯೆಗೆ ಕಾರಣವಾಗಿದೆ. ವರದಿಗಳ ಪ್ರಕಾರ, ವಾಟ್ಸಾಪ್ ಸ್ಟೇಟಸ್ ಕುರಿತು ಇಬ್ಬರ ನಡುವೆ ಜಗಳ ತಾರರಕ್ಕೇರಿ ಯಡವಟ್ಟಾಗಿ ಒಂದು ಜೀವವೇ ಹೋಗಿದೆ. ಹರಿಕುಮಾರ್ ಎಲ್ಲೂರಿನ ಚಿತ್ರನಟ ಪ್ರಭಾಸ್ (Actor Prabhas) ಅಭಿಮಾನಿಗಳ ಸಂಘದ ಕಾರ್ಯದರ್ಶಿಯಾಗಿದ್ದು, ಕಿಶೋರ್ ಪವನ್ ಕಲ್ಯಾಣ್ ಅವರ ಅಭಿಮಾನಿಯಾಗಿದ್ದರು.
ಪೊಲೀಸ್ ಇನ್ಸ್‌ಪೆಕ್ಟರ್ ಸಿ.ಆಂಜನೇಯುಲು ಪ್ರಕಾರ, ಆರೋಪಿ ಹರಿಕುಮಾರ್ ಮತ್ತು ಮೃತ ಕಿಶೋರ್ ಅವರು ಏಲೂರು ನಗರದ ಪೇಂಟರ್ ಆಗಿದ್ದು, ಕೆಲಸ ಅರಸಿ ಅತ್ತಿಲಿಗೆ ಬಂದಿದ್ದರು. ಹರಿಕುಮಾರ್ ಎಲ್ಲೂರಿನ ಚಿತ್ರನಟ ಪ್ರಭಾಸ್ ಅಭಿಮಾನಿಗಳ ಸಂಘದ ಕಾರ್ಯದರ್ಶಿಯಾಗಿದ್ದು, ಕಿಶೋರ್ ಪವನ್ ಕಲ್ಯಾಣ್ ಅವರ ಅಭಿಮಾನಿಯಾಗಿದ್ದರು. ಕೆಲಸದ ನಂತರ ಇಬ್ಬರೂ ಒಟ್ಟಿಗೆ ಮದ್ಯ ಸೇವಿಸಲು ಹೋದಾಗ ಕಿಶೋರ್ ಆರೋಪಿ ಹರಿಕುಮಾರ್ ಅವರ ಪ್ರಭಾಸ್ ಸಂಬಂಧಪಟ್ಟ ವಾಟ್ಸಾಪ್ ಸ್ಟೇಟಸ್ ನೋಡಿ ಪವನ್ ಕಲ್ಯಾಣ್ ಅವರ ಚಿತ್ರಗಳನ್ನು ಹಾಕುವಂತೆ ಒತ್ತಾಯಿಸಿದರು. ಜಗಳ ತೀವ್ರವಾಗಿದ್ದು, ಕಿಶೋರ್ ಹೇಳಿಕೆಯಿಂದ ಆಕ್ರೋಶಗೊಂಡ ಹರಿಕುಮಾರ್ ಕಬ್ಬಿಣದ ರಾಡ್ ಮತ್ತು ಸಿಮೆಂಟ್ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ.
ಇದನ್ನೂ ಓದಿ: RSS: ಇಲ್ಲಿನ ಪರಿಸ್ಥಿತಿಯ ಲಾಭ ಪಡೆದುಕೊಂಡ ಕ್ರೈಸ್ತ ಮಿಷನರಿಗಳು: ಆರೆಸ್ಸೆಸ್ ಮುಖ್ಯಸ್ಥ ಭಾಗವತ್
ತೀವ್ರವಾಗಿ ಗಾಯಗೊಂಡ ಕಿಶೋರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಾಹಿತಿ ಪಡೆದ ಸ್ಥಳೀಯ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದೆ. ಪೊಲೀಸರು ಹರಿಕುಮಾರ್‌ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಕೂಡ ನೆಚ್ಚಿನ ನಟನ ಸಿನಿಮಾ ರಿಲೀಸ್ ವೇಳೆ ಸಂಭ್ರಮಾಚರಣೆಯಲ್ಲಿ ಅಭಿಮಾನಿಗಳು ಜೀವಬಿಟ್ಟಿರುವ ಘಟನೆಗಳು ನಡೆದಿವೆ. ಬ್ಯಾನರ್ ಕಟ್ಟಲು ಹೋಗಿ ಬಿದ್ದು ಸತ್ತವರು, ಥಿಯೇಟರ್ ಮುಂದೆ ಚಲಿಸುತ್ತಿದ್ದ ವಾಹನದ ಮೇಲೆ ಡ್ಯಾನ್ಸ್ ಮಾಡಲು ಹೋಗಿ ಆಯತಪ್ಪಿ ಬಿದ್ದು ಅಭಿಮಾನಿಗಳು ಜೀವ ಚೆಲ್ಲಿರುವ ಘಟನೆಗಳು ವರದಿ ಆಗಿತ್ತು.