Site icon Vistara News

Actor Prabhas: ನಟ ವಿಷ್ಣು ಮಂಚು ʻಕಣ್ಣಪ್ಪ’ ಚಿತ್ರದಲ್ಲಿ ಪ್ರಭಾಸ್‌?

Actor Prabhas

ನಟ ಮೋಹನ್ ಬಾಬು ಮಗ ವಿಷ್ಣು ಮಂಚು (Vishnu Manchu) ಅವರು `ಕಣ್ಣಪ್ಪ’ನ (Kannappa Movie) ಕುರಿತಾದ ಸಿನಿಮಾದಲ್ಲಿ ನಿರತರಾಗಿದ್ದಾರೆ. ಈ ಚಿತ್ರವನ್ನು ನಟ, ರಾಜಕಾರಣಿ ಡಾ. ಮೋಹನ್ ಬಾಬು ನಿರ್ಮಿಸುತ್ತಿದ್ದಾರೆ. ಮುಖೇಶ್ ಕುಮಾರ್ ಸಿಂಗ್ (Mukesh Kumar Singh) ನಿರ್ದೇಶನದ ಈ ಚಿತ್ರ ಇದೀಗ ಹೊಸ ಸುದ್ದಿಯೊಂದಿಗೆ ಬಂದಿದೆ. ಪ್ಯಾನ್-ಇಂಡಿಯನ್ ಸ್ಟಾರ್ ಪ್ರಭಾಸ್ (Actor Prabhas) ಕಣ್ಣಪ್ಪ ಚಿತ್ರದಲ್ಲಿ ಮಹತ್ವದ ಪಾತ್ರಕ್ಕೆ ಸಹಿ ಹಾಕಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ವಿಷ್ಣು ಮಂಚು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹರ ಹರ ಮಹಾದೇವ ಎಂದು ಬರೆಯುವ ಮೂಲಕ ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ, ಪೋಸ್ಟ್‌ ಮೂಲಕ ತಮ್ಮ ಈ ಪ್ರಾಜೆಕ್ಟ್‌ನಲ್ಲಿ ಪ್ರಭಾಸ್ ಇರುವುದರ ಬಗ್ಗೆ ಪರೋಕ್ಷವಾಗಿ ಖಚಿತಪಡಿಸಿದ್ದಾರೆ. ಪ್ರಭಾಸ್ ಜತೆಗೆ ಇತರ ಪ್ರತಿಷ್ಠಿತ ನಟರು ಚಿತ್ರತಂಡಕ್ಕೆ ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ. ಅವಾ ಎಂಟರ್‌ಟೈನ್‌ಮೆಂಟ್ (Ava Entertainment) ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ (24 Frames Factory) ಜಂಟಿಯಾಗಿ ನಿರ್ಮಿಸಿರುವ ಈ ಪ್ರಾಜೆಕ್ಟ್ ಶೀಘ್ರದಲ್ಲೇ ಚಿತ್ರೀಕರಣವನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಮಣಿಶರ್ಮಾ ಮತ್ತು ಸ್ಟೀಫನ್ ದೇವಸಿ ಅವರ ಪ್ರತಿಭಾವಂತ ಜೋಡಿ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದೆ.

ʻಕಣ್ಣಪ್ಪ’ ಸಿನಿಮಾ ವ್ಯಕ್ತಿಯ ಅಚಲವಾದ ಭಕ್ತಿಯ ಮೇಲೆ ಬೆಳಕು ಚೆಲ್ಲುವ ಸಿನಿಮಾ ಆಗಿದೆ. ನಾಸ್ತಿಕನಾದ ಕಣ್ಣಪ್ಪ ಮಹಾನ್ ಶಿವನ ಆರಾಧಕನಾಗಿ ಬದಲಾದ ವಿಸ್ಮಯಕಾರಿ ಕತೆಯನ್ನು ಸಿನಿಮಾ ಒಳಗೊಂಡಿದೆ. ಈ ಚಿತ್ರವು ಶಿವನ ಭಕ್ತನಾಗಿದ್ದ ಭಕ್ತ ಕಣ್ಣಪ್ಪನ ಜೀವನವನ್ನು ಆಧರಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Actor Prabhas: ಚಂದ್ರಯಾನ 3 ಯಶಸ್ಸಿನ ನಂತರ ಭಾರಿ ಟ್ರೋಲ್‌ ಆಯ್ತು ಆದಿಪುರುಷ್‌

ಬಾಲಿವುಡ್ ನಟಿ ನೂಪುರ್ ಸನೋನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ಕಣ್ಣಪ್ಪ’ ಸಿನಿಮಾವು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಕಾಳಹಸ್ತಿಯಲ್ಲಿ ಸಿನಿಮಾದ ಮುಹೂರ್ತ ಮಾಡಲಾಗಿತ್ತು.

ಡಾ. ರಾಜ್‌ಕುಮಾರ್ ‘ಬೇಡರ ಕಣ್ಣಪ್ಪ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ ‘ಶಿವ ಮೆಚ್ಚಿನ ಕಣ್ಣಪ್ಪ’ ಚಿತ್ರದಲ್ಲಿ ಶಿವರಾಜ್‌ಕುಮಾರ್ ಮಿಂಚಿದ್ದರು. ಇದೇ ಕಥೆಯಲ್ಲಿ ವಿಷ್ಣು ಮಂಚು ನಟಿಸುತ್ತಿದ್ದಾರೆ. ತೆಲುಗಿನಲ್ಲೂ ಕೃಷ್ಣಂರಾಜು ‘ಭಕ್ತ ಕಣ್ಣಪ್ಪ’ ಚಿತ್ರದಲ್ಲಿ ನಟಿಸಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕಣ್ಣಪ್ಪ’ ನಿರ್ಮಾಣ ಮಾಡಲು ಸಿದ್ಧತೆ ನಡೆಯುತ್ತಿದೆ.

Exit mobile version