Site icon Vistara News

Actor Prabhas | ಪ್ರಭಾಸ್‌ ಚಿತ್ರದಲ್ಲಿ ಸಂಜಯ್‌ ದತ್‌!

Actor Prabhas

ಬೆಂಗಳೂರು : ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬಾಲಿವುಡ್‌ ನಟ ಸಂಜಯ್‌ ದತ್‌ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಧ್ರುವ ಸರ್ಜಾ ಅಭಿನಯದ ʻಕೆ ಡಿʼ, ಹಾಗೂ ʻಕೆಜಿಎಫ್‌ʼ ನಂತರ ಪ್ರಭಾಸ್ (Actor Prabhas) ಜತೆಗೆ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೆಜಿಎಫ್‌ನಲ್ಲಿ ಅಧೀರನಾಗಿ ಮಿಂಚಿದ ಸಂಜಯ್‌ ದತ್‌, ಇದೀಗ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ಧ್ರುವ ಸರ್ಜಾ ಜತೆ ʻಕೆ ಡಿ’, ನಂತರ ತಮಿಳಿನ ನಟ ವಿಜಯ್ ಸಿನಿಮಾದಲ್ಲೂ ಸಂಜಯ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಮಾರುತಿ ನಿರ್ದೇಶನದ ಹೊಸ ಚಿತ್ರದಲ್ಲಿ ಪ್ರಭಾಸ್ ಈಗಾಗಲೇ ನಟಿಸಿದ್ದು, ಈ ಚಿತ್ರದಲ್ಲಿ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಬಾರಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿಲ್ಲ, ಬದಲಾಗಿ ಬಹುಮುಖ್ಯ ಪಾತ್ರದಲ್ಲಿ ನಟನಿಗೆ ಸಾಥ್ ನೀಡುತ್ತಿದ್ದಾರೆ.

ಇದನ್ನೂ ಓದಿ | Prabhas Birthday | ನಟ ಪ್ರಭಾಸ್​ ಅಭಿಮಾನಿಗಳ ಅವಾಂತರ; ಥಿಯೇಟರ್​ನಲ್ಲಿ ಹೊತ್ತಿ ಉರಿದ ಬೆಂಕಿ, ಸೀಟ್​ಗಳೆಲ್ಲ ಭಸ್ಮ

ಫ್ರಭಾಸ್‌-ಕೃತಿ ಸೇನನ್‌ ಡೇಟಿಂಗ್‌ ವದಂತಿ!
ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್‌ ಮೂಲಕ ಪ್ರಭಾಸ್ ಅವರ ಪ್ರೇಮ ಜೀವನದ ಬಗ್ಗೆಯೂ ಮಾತನಾಡಿದ್ದರೆ. ಈ ಹಿಂದೆ ಅಷ್ಟೇ ನಟ ಪ್ರಭಾಸ್‌ ಹಾಗೂ ಬಾಲಿವುಡ್‌ ನಟಿ ಕೃತಿ ಸೇನನ್‌ ಪ್ರೀತಿಯ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಬಾಲಿವುಡ್‌ನ ಸ್ಟಾರ್ ನಟ ವರುಣ್ ಧವನ್ ಕೆಲವು ದಿನಗಳ ಹಿಂದಷ್ಟೇ ಚಿಕ್ಕದೊಂದು ಹಿಂಟ್ ಕೊಟ್ಟಿದ್ದರು. ಪ್ರಭಾಸ್ ಹೃದಯದಲ್ಲಿ ಒಬ್ಬರು ಡಾರ್ಲಿಂಗ್ ಇದ್ದಾರೆಂದು ಹೇಳಿಕೆ ನೀಡಿದ್ದರು. ಬಳಿಕ ನಟಿ ಈ ಗಾಸಿಪ್‌ಗಳಿಗೆ ಬ್ರೇಕ್‌ ಹಾಕಿದ್ದರು. ಇನ್‌ಸ್ಟಾ ಪೋಸ್ಟ್‌ ಮೂಲಕ ಈ ಸುದ್ದಿಗಳ ವದಂತಿಗಳಿಗೆ ಫುಲ್‌ ಸ್ಟಾಪ್‌ ಇಟ್ಟಿದ್ದರು.

ಇದನ್ನೂ ಓದಿ | Actor Prabhas | ಸಲ್ಮಾನ್‌ ಖಾನ್‌ ಮದುವೆ ಆದ ನಂತರ ನನ್ನ ಮದುವೆ ಎಂದ ನಟ ಪ್ರಭಾಸ್‌!

Exit mobile version