Site icon Vistara News

Actor Prabhas: ಸಲಾರ್‌ ಸಿನಿಮಾ ಕೆಲಸ ಮಾಡಿದವರಿಗೆ ಭರ್ಜರಿ ಉಡುಗೊರೆ ಕೊಟ್ಟ ಪ್ರಭಾಸ್‌!

Actor Prabhas sent a token of gift to

ಬೆಂಗಳೂರು: ಟಾಲಿವುಡ್‌ ನಟ ಪ್ರಭಾಸ್ (Actor Prabhas) ಅವರ ಬಹುನಿರೀಕ್ಷಿತ ಸಿನಿಮಾ ʻಆದಿಪುರುಷ ಜೂನ್‌ 16ರಂದು ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಇದೀಗ ಪ್ರಭಾಸ್‌ ʻಸಲಾರ್‌ʼ ಸಿನಿಮಾ ವಿಚಾರವಾಗಿ ಸಖತ್‌ ಸುದ್ದಿಯಲ್ಲಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಪ್ಯಾನ್-ಇಂಡಿಯಾ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಇದೀಗ ಪ್ರಭಾಸ್‌ ಸಲಾರ್‌ ಸಿನಿಮಾದಲ್ಲಿ ಕೆಲಸ ಮಾಡಿದವರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ಪ್ರಭಾಸ್ ಮತ್ತೊಮ್ಮೆ ಫ್ಯಾನ್ಸ್‌ ಹೃದಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ವರದಿಗಳ ಪ್ರಕಾರ, ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬ ಸದಸ್ಯರ ಖಾತೆಗೆ 10,000 ರೂ. ವರ್ಗಾಯಿಸುವ ಮೂಲಕ ನಟ ತಂಡಕ್ಕೆ ಭರ್ಜರಿ ಉಡುಗೊರೆಯ ನೀಡಿದ್ದಾರೆ. ಪ್ರಭಾಸ್ ಅವರ ಈ ಕಾರ್ಯಕ್ಕೆ ʻʻನಿಜವಾದ ನಾಯಕ” ಎಂದು ನೆಟ್ಟಿಗರು ಕರೆಯುತ್ತಿದ್ದಾರೆ.

ಸಲಾರ್ ಸಿನಿಮಾದಲ್ಲಿ ಪ್ರಭಾಸ್​ರದ್ದು ಅತಿ ಹಿಂಸಾತ್ಮಕ ಪ್ರವೃತ್ತಿಯುಳ್ಳ ವ್ಯಕ್ತಿಯ ಪಾತ್ರವಂತೆ. ಈ ರೀತಿಯ ಪಾತ್ರದಲ್ಲಿ ಈ ಹಿಂದೆ ನಾನು ನಟಿಸಿಲ್ಲ ಎಂದಿರುವ ಪ್ರಭಾಸ್, ಸಲಾರ್​ನಲ್ಲಿ ಎರಡು ಶೇಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್ ಅಲ್ಲದೆ ಸಿನಿಮಾದಲ್ಲಿ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್, ಕನ್ನಡಿಗರಾದ ಪ್ರಮೋದ್, ಮಧು ಗುರುಸ್ವಾಮಿ ಅವರುಗಳು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದ್ದು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಚಾಲ್ತಿಯಲ್ಲಿವೆ.

ಸಲಾರ್​​ನಲ್ಲಿ ಶ್ರುತಿ ಹಾಸನ್ ಅವರು ಆದ್ಯ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಪ್ರಭಾಸ್ ಜತೆ ಅವರು ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ. ಜಗಪತಿ ಬಾಬು ಅವರು ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Salaar Movie: ʻಸಲಾರ್‌ʼ ಚಿತ್ರದಲ್ಲಿ ನಟ ದೇವರಾಜ್‌ ನಿರ್ವಹಿಸುತ್ತಿರುವ ಪಾತ್ರವೇನು?

‘ಸಲಾರ್​’ ಸಿನಿಮಾ ಕನ್ನಡದ ‘ಉಗ್ರಂ’ ಚಿತ್ರದ ರಿಮೇಕ್ ಎಂದು ಹೇಳಲಾಗಿತ್ತು. ಆದರೆ, ಇದನ್ನು ಪ್ರಶಾಂತ್ ನೀಲ್ ಒಪ್ಪಿಕೊಂಡಿಲ್ಲ. ಪ್ರಭಾಸ್ ಅವರು ‘ಸಲಾರ್​’ ಮಾತ್ರವಲ್ಲದೆ ಇನ್ನೂ ಹಲವು ಪ್ರಾಜೆಕ್ಟ್​​ಗಳಲ್ಲಿ ಬ್ಯುಸಿ ಇದ್ದಾರೆ. ಅಲ್ಲದೇ, ಯಶ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಯಾವುದೇ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ.

Exit mobile version