ಬೆಂಗಳೂರು: ಟಾಲಿವುಡ್ ನಟ ಪ್ರಭಾಸ್ (Actor Prabhas) ಅವರ ಮದುವೆ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಚರ್ಚೆಗಳು ಆಗುತ್ತಿರುತ್ತವೆ. ಕೆಲವು ದಿನಗಳ ಹಿಂದೆ ಪ್ರಭಾಸ್ ತಮ್ಮ ಆದಿಪುರುಷ್ ಸಹನಟಿ ಕೃತಿ ಸನೂನ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಇಬ್ಬರೂ ಹಲವಾರು ಸಂದರ್ಭಗಳಲ್ಲಿ ವದಂತಿಗಳನ್ನು ತಳ್ಳಿಹಾಕಿದರು. ಇದೀಗ ಪ್ರಭಾಸ್, ದೊಡ್ಡಮ್ಮ ಶ್ಯಾಮಲಾ ಅವರು ನವರಾತ್ರಿ ಉತ್ಸವದ ಸಂದರ್ಭದ ಪೂಜೆಯಲ್ಲಿ ಭಾಗಿಯಾಗಿದ್ದ ವೇಳೆ ಪ್ರಭಾಸ್ ಮದುವೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ.
ಈ ಹಿಂದೆ ಆದಿಪರುಷ್ ಆದಿಪುರುಷ್ ಪ್ರೀ ರಿಲೀಸ್ ಇವೆಂಟ್ನಲ್ಲಿ ಕಡೆಯದಾಗಿ ಮಾತನಾಡಲು ಆರಂಭಿಸಿದ ನಟ ಪ್ರಭಾಸ್, ಆರಂಭದಲ್ಲಿ ಸಿನಿಮಾದ ಟ್ರೈಲರ್-ಟೀಸರ್ ಇಷ್ಟವಾಯಿತಾ? ಬಹಳ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ ಎಂದರು. ಈ ನಡುವೆ ವೇದಿಕೆ ಮುಂದೆ ನಿಂತಿದ್ದ ಕೆಲವು ಅಭಿಮಾನಿಗಳು ಮದುವೆ ಯಾವಾಗ ಆಗುತ್ತೀರ ಎಂದು ಪ್ರಭಾಸ್ ಅವರನ್ನು ಪ್ರಶ್ನೆ ಮಾಡಿದರು.ಅಭಿಮಾನಿಗಳ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ನಟ ಪ್ರಭಾಸ್, ಮದುವೆಯಾ? ಆಗುತ್ತೇನೆ, ಅರ್ಜೆಂಟ್ ಏನಿದೆ? ಎಲ್ಲ ಕೂಡಿ ಬಂದರೆ ತಿರುಪತಿಯಲ್ಲಿಯೇ ಮದುವೆ ಆಗುತ್ತೇನೆ” ಎಂದಿದ್ದರು. ಆ ಘಳಿಗೆ ಬಂದಿದೆ ಎನ್ನಲಾಗುತ್ತಿದೆ.
ಪ್ರಭಾಸ್ ದೊಡ್ಡಮ್ಮ ಶ್ಯಾಮಲಾ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿ ʻʻಪ್ರಭಾಸ್ ಮದವೆ ಯಾವಾಗ, ಯಾರ ಜತೆ ಗೊತ್ತಿಲ್ಲ. ಮುಂದಿನ ದಸರಾ ಒಳಗೆ ಪ್ರಭಾಸ್ ಮದುವೆ ನೆರವೇರುತ್ತದೆʼʼ ಎಂದು ಶ್ಯಾಮಲಾ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Actor Prabhas: ಪ್ರಭಾಸ್ ಇನ್‌ಸ್ಟಾಗ್ರಾಮ್ ಇದ್ದಕ್ಕಿಂದ್ದಂತೆ ಮಾಯ; ಹ್ಯಾಕ್ ಆಯ್ತಾ? ಡಿಲಿಟ್ ಮಾಡಿದ್ರಾ?
ತೆಲುಗು ನಟ ಪ್ರಭಾಸ್ ಹಾಗೂ ನಟಿ ಅನುಷ್ಕಾ ಶೆಟ್ಟಿ (Prabhas Anushka) ಪ್ರೀತಿ ಮಾಡುತ್ತಿರುವ ವಿಚಾರ ಹಲವು ವರ್ಷಗಳಿಂದಲೂ ದಕ್ಷಿಣ ಭಾರತದಲ್ಲಿ ಜನಜನಿತ. 2009ರಲ್ಲಿ ಬಿಲ್ಲಾ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ ಜೋಡಿ ನಂತರ ಮಿರ್ಚಿ ಮತ್ತು ಬಾಹುಬಲಿ ಸಿನಿಮಾಗಳಲ್ಲಿ ಜೋಡಿಯಾಗಿತ್ತು. ಈ ಜೋಡಿ ತಮ್ಮ ಮಧ್ಯೆ ಇರುವುದು ಸ್ನೇಹ ಮಾತ್ರ ಎಂದು ಅದೆಷ್ಟೇ ಹೇಳಿದರೂ, ಅಭಿಮಾನಿಗಳು ಮಾತ್ರ “ನೀವಿಬ್ಬರು ಬೇಗ ಮದುವೆಯಾಗಿ” ಎಂದು ಕೋರಿಕೊಳ್ಳುತ್ತಲೇ ಇದ್ದರು. ಹಾಗೆಯೇ ಇತ್ತೀಚೆಗೆ ಪ್ರಭಾಸ್ ಹಾಗೂ ಬಾಲಿವುಡ್ ನಟಿ ಕೃತಿ ಸನೊನ್ ನಿಶ್ಚಿತಾರ್ಥವಾಗಲಿದ್ದಾರೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಸ