Site icon Vistara News

Adipurush Movie: ಆದಿಪುರುಷ್‌ ಪ್ರೀ ರಿಲೀಸ್ ಈವೆಂಟ್; ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಭಾಸ್

actor Prabhas

#image_title

ತಿರುಪತಿ: ಆದಿಪುರುಷ್‌ ಸಿನಿಮಾ ಪ್ರೀ ರಿಲೀಸ್‌ ಈವೆಂಟ್‌ (Adipurush Movie) ಹಿನ್ನೆಲೆಯಲ್ಲಿ ಯಂಗ್ ರೆಬೆಲ್‌ ಸ್ಟಾರ್‌‌ ನಟ ಪ್ರಭಾಸ್‌, ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಮಂಗಳವಾರ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆ ಚಿತ್ರತಂಡದೊಂದಿಗೆ ದೇವಾಲಯಕ್ಕೆ ತೆರಳಿದ್ದ ಪ್ರಭಾಸ್‌, ಸುಪ್ರಭಾತ ಸೇವೆಯಲ್ಲಿ ಪಾಲ್ಗೊಂಡು ತಿಮ್ಮಪ್ಪನ ದರ್ಶನ ಪಡೆದರು.

ನಂತರ ನಟ ಪ್ರಭಾಸ್‌ಗೆ ವೇದ ಪಂಡಿತರು ಆಶೀರ್ವಚನ ನೀಡಿ ತೀರ್ಥ ಪ್ರಸಾದ ನೀಡಿದರು. ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ವತಿಯಿಂದ ಅಧಿಕಾರಿಗಳು ರೇಷ್ಮೆ ವಸ್ತ್ರ ಹೊದಿಸಿ ಸನ್ಮಾನ ಮಾಡಿದರು. ಸಾಂಪ್ರದಾಯಿಕ ಉಡುಪು ಬಿಳಿ ಕುರ್ತಾ ಧರಿಸಿ ಪ್ರಭಾಸ್ ದೇವಾಲಯಕ್ಕೆ ತೆರಳಿದ್ದರು. ಈ ವೇಳೆ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದದ್ದು ಕಂಡು ಬಂತು. ‌

ಇದನ್ನೂ ಓದಿ | 72 Hoorain: ಕಾಶ್ಮೀರ ಫೈಲ್ಸ್, ಕೇರಳ ಸ್ಟೋರಿ ಬಳಿಕ ಮತ್ತೊಂದು ವಿವಾದಾತ್ಮಕ ಸಿನಿಮಾ ’72 ಹೂರೇ’ ತೆರೆಗೆ ಬರಲು ಸಿದ್ಧ

ಮಂಗಳವಾರ (ಇಂದು) ಸಂಜೆ 7 ಗಂಟೆಗೆ ತಿರುಪತಿಯ ತಾರಕರಾಮ ಸ್ಟೇಡಿಯಂನಲ್ಲಿ ಅದ್ಧೂರಿಯಾಗಿ ಆದಿಪುರುಷ್‌ ಪ್ರೀ ರಿಲೀಸ್‌ ಈವೆಂಟ್‌ ನಡೆಯಲಿದೆ. 1 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅಯೋಧ್ಯೆ ರಾಮ ಮಂದಿರ ಮಾದರಿಯಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದ್ದು, 200 ಗಾಯಕರು, ನೃತ್ಯಕಾರರು, ಜೈ ಶ್ರೀರಾಮ್‌ ಹಾಡು ಪ್ರದರ್ಶನ ಮಾಡಲಿದ್ದಾರೆ.

ಜೂನ್‌ 16ಕ್ಕೆ ಆದಿಪುರುಷ್‌ ರಿಲೀಸ್

ಓಂ ರಾವತ್‌ ನಿರ್ದೇಶನದ ಆದಿಪುರುಷ್ ಚಿತ್ರದಲ್ಲಿ ನಟ ಪ್ರಭಾಸ್‌ ರಾಮನಾಗಿ ನಟಿಸಿದ್ದಾರೆ, ಕೃತಿ ಸನೂನ್ ಸೀತೆಯಾಗಿ ಮತ್ತು ಸೈಫ್ ಅಲಿ ಖಾನ್ ರಾವಣನ ಪಾತ್ರವನ್ನು ನಿಭಾಯಿಸಿದ್ದಾರೆ. ಆದಿಪುರುಷದ ಟೀಸರ್ ಕಳೆದ ವರ್ಷ ಬಿಡುಗಡೆಯಾಗಿತ್ತು. ಆದರೆ ವಿಎಫ್‌ಎಕ್ಸ್‌ ಕುರಿತಾಗಿ ನೆಗೆಟಿವ್‌ ಪ್ರತಿಕ್ರಿಯೆಯನ್ನು ಪಡೆಯಿತು. ಜೂನ್‌ 16ರಂದು ಸಿನಿಮಾ ತೆರೆ ಕಾಣುತ್ತಿದ್ದು, ದೊಡ್ಡ ಪರದೆಯಲ್ಲಿ ‘ಆದಿಪುರುಷ್​’ (Adipurush) ಚಿತ್ರವನ್ನು ನೋಡಲು ಫ್ಯಾನ್ಸ್​ ಕಾದಿದ್ದಾರೆ. 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ಪ್ರದರ್ಶನ ಆಗಲಿರುವುದು ವಿಶೇಷ.

ಇದನ್ನೂ ಓದಿ | Adipurush Song : ಬಿಡುಗಡೆಯಾಯ್ತು ಆದಿಪುರುಷ್‌ ಸಿನಿಮಾದ ಮತ್ತೊಂದು ಹಾಡು: ಎಲ್ಲೆಲ್ಲೂ ರಾಮ ಭಜನೆಯೇ

ಸಿನಿಮಾದ ಟೀಸರ್‌ ಬಿಡುಗಡೆಯಾದ ಕೂಡಲೇ ಹಲವು ಚರ್ಚೆಗಳು ಆದವು. ಅಷ್ಟೇ ಅಲ್ಲದೇ ಕಳಪೆ ಗುಣಮಟ್ಟದ ವಿಎಫ್‌ಎಕ್ಸ್‌ಗಾಗಿ ವಿರೋಧವು ವ್ಯಕ್ತವಾಗಿತ್ತು. ಬಳಿಕ ಚಿತ್ರತಂಡ ಸಮಯ ತೆಗೆದುಕೊಂಡು ಒಳ್ಳೆಯ ಗುಣಮಟ್ಟದ ದೃಶ್ಯಗಳನ್ನು ನೀಡುವುದಾಗಿ ಭರವಸೆ ನೀಡಿ ಬಿಡುಗಡೆಯ ದಿನಾಂಕವನ್ನು ಮುಂದೂಡಿತ್ತು. ಇದೀಗ ಜೂನ್‌ 16ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು, ಚಿತ್ರವನ್ನು ವೀಕ್ಷಿಸಲು ಪ್ರಭಾಸ್‌ ಅಭಿಮಾನಿಗಳು ಕಾತರದಿಂದ ಇದ್ದಾರೆ.

Exit mobile version