Site icon Vistara News

Actor Prabhas | ಬಯಲಾಯ್ತಾ ಪ್ರಭಾಸ್‌ ವಿಗ್‌ ಸೀಕ್ರೆಟ್‌: ವಿಡಿಯೊ ವೈರಲ್‌!

Actor Prabhas

ಬೆಂಗಳೂರು: ಸೋಷಿಯಲ್‌ ಮೀಡಿಯಾದಲ್ಲಿ ಕೆಲವು ದಿನಗಳಿಂದ ಟಾಲಿವುಡ್‌ ನಟ ಪ್ರಭಾಸ್‌ (Actor Prabhas) ವಿಗ್‌ ಧರಿಸುತ್ತಾರೆ ಎಂಬ ಗಾಸಿಪ್‌ಗಳು ಹರಿದಾಡಿದ್ದವು. ಮಹೇಶ್‌ ಬಾಬು ಅವರ ರೀತಿಯಲ್ಲಿಯೇ ಪ್ರಭಾಸ್‌ ವಿಗ್‌ ಧರಿಸುತ್ತಾರೆ ಎನ್ನಲಾಗುತ್ತಿತ್ತು. ಇದೀಗ ಪ್ರಭಾಸ್‌ ಅವರ ವಿಡಿಯೊ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನೆಟ್ಟಿಗರೊಬ್ಬರು ಪ್ರಭಾಸ್‌ ಅವರ ವಿಡಿಯೊ ಒಂದು ಶೇರ್‌ ಮಾಡಿಕೊಂಡಿದ್ದು, ಪರ್ಸನಲ್ ಹೇರ್ ಸ್ಟೈಲಿಶ್‌ ಬಂದು ಪ್ರಭಾಸ್ ಕೂದಲು ಸರಿಯಾಗಿ ಬಾಚಿ ಹೋಗುತ್ತಾರೆ. ಬಹಳ ಎಚ್ಚರಿಕೆಯಿಂದ ಪ್ರಭಾಸ್ ಹೇರ್‌ಸ್ಟೈಲ್‌ಗೆ ಫೈನಲ್ ಟಚ್ ಕೊಡುತ್ತಾರೆ. ಅದು ನೋಡಲು ವಿಗ್ ಸರಿಪಡಿಸುವಂತೆ ಇದೆ ಎನ್ನುವುದು ಕೆಲವರ ವಾದ. ಇನ್ನು ಇದಕ್ಕೆ ಪ್ರಭಾಸ್ “ನೆಕ್ಸ್ಟ್ ಟೈಮ್ ಇದನ್ನೆಲ್ಲ ಅಲ್ಲೇ ಮಾಡಿಬಿಡು. ಇಲ್ಲಿ ಬಂದಮೇಲೆ ಮಾಡಬೇಡ” ಎಂದಿದ್ದಾರೆ.

ಇದನ್ನು ನೋಡಿದ ಕೆಲವರು, ಪ್ರಭಾಸ್ ವಿಗ್ ಧರಿಸುವುದು ನಿಜ ಎಂದು ಟ್ರೋಲ್ ಮಾಡುತ್ತಿದ್ದಾರೆ. ‘ಸಾಹೋ’ ಸಿನಿಮಾ ಸಮಯದಿಂದಲೂ ಪ್ರಭಾಸ್ ಹೇರ್‌ಸ್ಟೈಲ್ ಅಸಹಜವಾಗಿಯೇ ಕಾಣುತ್ತಿದೆ ಎಂಬ ಗಾಸಿಪ್‌ಗಳು ಹರಿದಾಡಿದ್ದವು.

ಇದನ್ನೂ ಓದಿ | Actor Prabhas | ಸಲ್ಮಾನ್‌ ಖಾನ್‌ ಮದುವೆ ಆದ ನಂತರ ನನ್ನ ಮದುವೆ ಎಂದ ನಟ ಪ್ರಭಾಸ್‌!

ಸಾರ್ವಜನಿಕ ಸ್ಥಳಗಳಲ್ಲಿ ಪ್ರಭಾಸ್‌ ಕ್ಯಾಪ್‌ ತೊಟ್ಟು ಕಾಣಿಸಿಕೊಳ್ಳುತ್ತಿದ್ದರು. ʻಅನ್‌ಸ್ಟಾಪಬಲ್‌ʼ ಒಟಿಟಿ ಕಾರ್ಯಕ್ರಮದಲ್ಲಿ ಸ್ಟೈಲಿಶ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಹೀಗೆ ನಾನಾ ಕಾರಣಗಳಿಂದ ಪ್ರಭಾಸ್‌ ಅವರನ್ನು ನೆಟ್ಟಿಗರು ಟ್ರೋಲ್‌ ಮಾಡುತ್ತಲೇ ಬರುತ್ತಿದ್ದಾರೆ.

ಇದನ್ನೂ ಓದಿ | Actor Prabhas | ಪ್ರಭಾಸ್‌ ಚಿತ್ರದಲ್ಲಿ ಸಂಜಯ್‌ ದತ್‌!

Exit mobile version