Site icon Vistara News

Actor Raana | ಏಕ್‌ ಲವ್‌ ಯಾ ಖ್ಯಾತಿಯ ರಾಣಾ ಮತ್ತೆ ಬ್ಯುಸಿ; ಹೊಸ ಕತೆಗೆ ಯುವ ನಟ ರೆಡಿ

Actor Raana

ಬೆಂಗಳೂರು: ʻಏಕ್ ಲವ್ ಯಾ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಅಂಗಳಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ನಟಿ ರಕ್ಷಿತಾ ಸಹೋದರ ರಾಣಾ (Actor Raana) ಅವರ ಇನ್ನೊಂದು ಸಿನಿಮಾ ಸೆಟ್ಟೇರಲಿದ್ದು, ವಿಜಯ್ ಈಶ್ವರ್ ನಿರ್ದೇಶನ ಮಾಡಲಿದ್ದಾರೆ.

ಮೊದಲ ಸಿನಿಮಾದಲ್ಲೇ ರಾಣಾ ಭರವಸೆ ಹುಟ್ಟುಹಾಕಿದ್ದರು. ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಏಕ್ ಲವ್ ಯಾ ಸಿನಿಮಾಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಿರ್ದೇಶಕ ಪ್ರೇಮ್‌ ಜತೆಗೆ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದು ಅನುಭವ ಇರುವ ವಿಜಯ್ ಈಶ್ವರ್ ಜತೆ ರಾಣಾ ಮುಂದಿನ ಸಿನಿಮಾಗೆ ಸಿದ್ಧತೆ ನಡೆಸಿದ್ದಾರೆ.

ವಿಜಯ್ ಈಶ್ವರ್ ಮಾಡಿಕೊಂಡ ಕಥೆ ರಾಣಾಗೂ ಇಂಪ್ರೆಸ್ ಮಾಡಿದೆಯಂತೆ. ವಿಜಯ್‌ ಜತೆ ಕೈ ಜೋಡಿಸಲು ರಾಣಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಪ್ರೇಮ್, ರಕ್ಷಿತಾ ಕೂಡ ವಿಜಯ್ ಈಶ್ವರ್ ಹೇಳಿದ ಕಥೆ ಕೇಳಿ ಥ್ರಿಲ್ ಆಗಿದ್ದಾರಂತೆ. ಇದು ಯಾವ ಸಬ್ಜೆಕ್ಟ್? ರಾಣಾ ಲುಕ್ ಹೇಗಿರಲಿದೆ? ಸಿನಿಮಾದ ತಯಾರಿ ಯಾವ ಹಂತದಲ್ಲಿದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ.

ಇದನ್ನೂ ಓದಿ | Kannada New Movie | ಡ್ಯಾನ್ಸ್ ಮಾಸ್ಟರ್ ಭೂಷಣ್ ಈಗ ಸ್ಯಾಂಡಲ್ ವುಡ್ ಹೀರೋ: ಸಿನಿಮಾ 23ಕ್ಕೆ ತೆರೆಗೆ

Exit mobile version