Site icon Vistara News

Actor Rajinikanth: ಈ ಸಲ ಕಪ್‌ ನಮ್ದೆ; ಭವಿಷ್ಯ ನುಡಿದ ರಜನಿಕಾಂತ್‌!

Actor Rajinikanth says he is sure India will win world cup

ಬೆಂಗಳೂರು: ಭಾರತ ವಿಶ್ವಕಪ್ 2023ರ ಟ್ರೋಫಿ ಗೆಲ್ಲುವ ಬಗ್ಗೆ ರಜನಿಕಾಂತ್ (Actor Rajinikanth)  ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ಇತ್ತೀಚೆಗೆ ಮುಂಬೈಗೆ ಬಂದಿದ್ದರು ರಜನಿಕಾಂತ್‌. ಚೆನ್ನೈಗೆ ಹಿಂದಿರುಗಿದ ನಂತರ, ಅವರು ಮಾಧ್ಯಮಗಳೊಂದಿಗೆ ಅನುಭವ ಹಂಚಿಕೊಂಡರು. ಮುಂಬರುವ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಗೆದ್ದೇ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಮಾಧ್ಯಮದ ಮುಂದೆ ಮಾತನಾಡಿದ ರಜನಿಕಾಂತ್, “ಮೊದಲಿಗೆ ನನಗೆ ಆತಂಕವಿತ್ತು. ನಂತರ ಸತತವಾಗಿ ವಿಕೆಟ್‌ಗಳು ಬೀಳುತ್ತಿದ್ದವು. ಆ ಒಂದೂವರೆ ಗಂಟೆಯಲ್ಲಿ ನಾನು ಸಾಕಷ್ಟು ನರ್ವಸ್‌ ಆಗಿದ್ದೆ. ವಿಶ್ವ ಕಪ್ ನಮ್ಮದೇ ಎಂದು ನನಗೆ ನೂರಕ್ಕೆ ನೂರು ಸ್ಪಷ್ಟವಾಗಿದೆʼʼಎಂದರು.

ಮುಂಬೈನಲ್ಲಿ ನಿರ್ಮಾಪಕಿ ಲತಾ ಅವರೊಂದಿಗೆ ಮ್ಯಾಚ್‌ ವೀಕ್ಷಿಸಿದ್ದರು ರಜನಿಕಾಂತ್‌. ಈ ಟೂರ್ನಿಗೆ ವಿಶೇಷ ಅತಿಥಿಯಾಗಿ ರಜನಿಕಾಂತ್‌ ಅವರಿಗೆ ಬಿಸಿಸಿಐ ಗೋಲ್ಡನ್​ ಟಿಕೆಟ್​ ನೀಡಿ ಆಹ್ವಾನಿಸಿತ್ತು. ಬಿಸಿಸಿಐ ಕಾರ್ಯದರ್ಶಿ ಜಯ್​​ ಶಾ ಅವರು ಚೆನ್ನೈನಲ್ಲಿರುವ ರಜನಿ ಮನೆಗೆ ತೆರಳಿ ಈ ಗೋಲ್ಡನ್ ಟಿಕೆಟ್ ನೀಡಿದ್ದರು. ಸಚಿನ್ ತೆಂಡೂಲ್ಕರ್ ಮತ್ತು ಅಮಿತಾಭ್‌ ಬಚ್ಚನ್‌ ಅವರಿಗೆ ಗೋಲ್ಡನ್ ಟಿಕೆಟ್ ಕೊಟ್ಟಿದ್ದರು. ಮಾಧುರಿ ದೀಕ್ಷಿತ್ ಪತಿ ಡಾ ಶ್ರೀರಾಮ್ ನೆನೆಯೊಂದಿಗೆ ಇದ್ದರು. ಫೋಟೊ ಒಂದರಲ್ಲಿ ರಜನಿಕಾಂತ್ ಜತೆ ಪೋಸ್ ಕೊಟ್ಟಿದ್ದಾರೆ.

ಅನುಷ್ಕಾ ಶರ್ಮಾ, ವಿಕ್ಕಿ ಕೌಶಲ್, ಕುನಾಲ್ ಖೇಮು, ಸಚಿನ್ ತೆಂಡೂಲ್ಕರ್, ಕಿಯಾರಾ ಆಡ್ವಾನಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಇತರರು ಸೆಮಿಫೈನಲ್ ಪಂದ್ಯದಲ್ಲಿ ಹಾಜರಿದ್ದರು. ಮೂರು ದಿನಗಳ ಮುಂಬೈ ಪ್ರವಾಸದಲ್ಲಿರುವ ಫುಟ್ಬಾಲ್ ಆಟಗಾರ ಡೇವಿಡ್ ಬೆಕ್‌ಹ್ಯಾಮ್ ಕೂಡ ಭಾರತ ಗೆದ್ದು ಫೈನಲ್‌ಗೆ ಅರ್ಹತೆ ಪಡೆದ ಪಂದ್ಯವನ್ನು ವೀಕ್ಷಿಸಿದರು.

ಇದನ್ನೂ ಓದಿ: Actor Rajinikanth: ʻರಾಘವ ಲಾರೆನ್ಸ್ʼ ಈ ರೀತಿ ವರ್ತಿಸಬಹುದೇ? ರಜನಿಕಾಂತ್‌ ಸುದೀರ್ಘ ಪತ್ರ!

ಭಾನುವಾರ (ನವೆಂಬರ್ 19) ನಡೆಯಲಿರುವ ಐಸಿಸಿ ವಿಶ್ವಕಪ್ ಫೈನಲ್​​ನಲ್ಲಿ ಭಾರತವು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಭಾರತ 10 ಪಂದ್ಯಗಳ ಗೆಲುವಿನ ಹಾದಿಯಲ್ಲಿದ್ದರೆ, ಆಸ್ಟ್ರೇಲಿಯಾ 8 ಪಂದ್ಯಗಳ ಗೆಲುವಿನ ಹಾದಿಯಲ್ಲಿದೆ. ಅಹ್ಮದಾಬಾದ್​ನಲ್ಲಿ ನಡೆಯಲಿರುವ ಪ್ರಶಸ್ತಿ ಫೈಟ್​ನಲ್ಲಿ ತಂಡದ ಗೆಲುವಿನ ಸರಣಿಯೊಂದು ಮುರಿಯಲಿದೆ. ವಿಶ್ವಕಪ್​​ನ ಲೀಗ್ ಹಂತದಲ್ಲಿ, ಭಾರತವು ಆಸ್ಟ್ರೇಲಿಯಾವನ್ನು ಸೋಲಿಸಿತು, ಆದರೆ ಆಸೀಸ್ ನಾಕೌಟ್​​ನಲ್ಲಿ ಸಂಪೂರ್ಣವಾಗಿ ವಿಭಿನ್ನ ರೂಪದಲ್ಲಿದೆ. ಹೀಗಾಗಿ ಎಲ್ಲರ ಕಣ್ಣು ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ಮೇಲೆ ನೆಟ್ಟಿದೆ.

Exit mobile version