ಹೈದರಾಬಾದ್: ಆಸ್ಕರ್ ಪ್ರಶಸ್ತಿ ವಿಜೇತ ಆರ್‌ಆರ್‌ಆರ್ ಸಿನಿಮಾದ ನಟ ರಾಮ್‌ಚರಣ್ (Actor Ram Charan) ಅವರು ಸೋಮವಾರ ತಮ್ಮ 38ನೇ ವರ್ಷದ ಜನ್ಮ ದಿನಾಚರಣೆ ಆಚರಿಸಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ದೊಡ್ಡದೊಂದು ಪಾರ್ಟಿ ಮಾಡಿ ತಮ್ಮ ಸಂತಸವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ನಟನ ಪತ್ನಿ ಉಪಾಸನಾ ಭಾಗವಹಿಸಿದ್ದು, ಜೋಡಿಯ ಫೋಟೋಗಳು ವೈರಲ್ ಆಗಿವೆ.
ಇದನ್ನೂ ಓದಿ: Actor Ram Charan : ದಿಲ್ಲಿ ಏರ್‌ಪೋರ್ಟ್‌ನಲ್ಲಿ ಪತ್ನಿಯೊಂದಿಗೆ ಕಾಣಿಸಿಕೊಂಡ ನಟ ರಾಮ್ ಚರಣ್, ಅಭಿಮಾನಿಗಳ ಮುತ್ತಿಗೆ
ರಾಮ್‌ಚರಣ್ ಮತ್ತು ಉಪಾಸನಾ ತಮ್ಮ ಮೊದಲನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಗರ್ಭಿಣಿಯಾಗಿರುವ ಉಪಾಸನಾ ಪಾರ್ಟಿಗೆ ನೀಲಿ ಬಣ್ಣದ ಡ್ರೆಸ್ ಹಾಗೂ ಅದಕ್ಕೆ ಸರಿಹೊಂದುವಂತಹ ಫ್ಲಾಟ್ ಸ್ಲಿಪ್ಪರ್ ಧರಿಸಿ ಬಂದಿದ್ದರು. ರಾಮ್‌ಚರಣ್ ಕಪ್ಪು ಪ್ಯಾಂಟ್, ಶರ್ಟ್ ಮತ್ತು ಶೂನಲ್ಲಿ ಮಿಂಚುತ್ತಿದ್ದರು.
ಈ ಜೋಡಿಯ ವಿಡಿಯೊವನ್ನು ಬಾಲಿವುಡ್‌ನ ಮಾಧ್ಯಮಗಳು ಹಂಚಿಕೊಂಡಿವೆ. ಅದಕ್ಕೆ ಆರ್‌ಆರ್‌ಆರ್ ಅಭಿಮಾನಿಗಳು, ರಾಮ್‌ಚರಣ್ ಅಭಿಮಾನಿಗಳು ಕಾಮೆಂಟ್‌ಗಳ ಸುರಿಮಳೆ ಸುರಿಸಿದ್ದಾರೆ. “ಜೂ.ರಾಮ್‌ಚರಣ್ ಬರುತ್ತಿದ್ದಾರೆ”, “ಮುದ್ದಾದ ಜೋಡಿ”, “ಮೇಡ್ ಫಾರ್ ಈಚ್ ಅದರ್” ಎನ್ನುವಂತಹ ಹಲವಾರು ಕಾಮೆಂಟ್‌ಗಳು ಬಂದಿವೆ.
ಇದನ್ನೂ ಓದಿ: Oscars 2023: ಆಸ್ಕರ್‌ಗೆ ನಾಮನಿರ್ದೇಶನ, ಭಾರತಕ್ಕೆ ಒಲಿಂಪಿಕ್ ಪಡೆದಷ್ಟೇ ಹೆಮ್ಮೆ: ರಾಮ್ ಚರಣ್
ರಾಮ್‌ಚರಣ್ ಬರ್ತ್‌ಡೇ ಪಾರ್ಟಿಗೆ ಆರ್‌ಆರ್‌ಆರ್ ನಿರ್ದೇಶಕ ಎಸ್.ಎಸ್.ರಾಜಮೌಳಿ, ಸಿನಿಮಾದ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ, ನಟ ವಿಜಯದೇವರಕೊಂಡ, ನಾಗಾರ್ಜುನ, ನಾಗಚೈತನ್ಯ, ಅಖಿಲ್ ಅಕ್ಕಿನೇನಿ, ನಾಗ ಬಾಬು ಸೇರಿದಂತೆ ಅನೇಕ ಪ್ರಮುಖರು ಆಗಮಿಸಿದ್ದರು.
ಈ ಹಿಂದೆ ಪತಿಯ ಬರ್ತ್‌ಡೇ ಪ್ರಯುಕ್ತ ಅಪಾಸನಾ ಅವರು ವಿಶೇಷ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದರು. ತನ್ನ ತೊಡೆ ಮೇಲೆ ರಾಮ್‌ಚರಣ್ ಕುಳಿತಿರುವ ಹಾಗೂ ರಾಮ್‌ಚರಣ್ ಹೆಗಲಿಗೆ ತಾವು ಒರಗಿರುವ ಎರಡು ಫೋಟೋಗಳನ್ನು ಹಂಚಿಕೊಂಡಿದ್ದ ಅವರು, “ಹ್ಯಾಪಿ ಬರ್ತ್‌ಡೇ ಬೆಸ್ಟೀ” ಎಂದು ಬರೆದುಕೊಂಡಿದ್ದರು. ಹಾಗೆಯೇ ರಾಮ್‌ಚರಣ್ ಅವರ ತಂದೆ ಚಿರಂಜೀವಿ ಕೂಡ ಮಗನ ಫೋಟೋ ಹಂಚಿಕೊಂಡು ಶುಭ ಹಾರೈಸಿದ್ದರು.