ಹೈದರಾಬಾದ್: ರಾಜಮೌಳಿ ಅವರ ಆರ್‌ಆರ್‌ಆರ್ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದೆ. ಆಸ್ಕರ್ ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆ ತಂದುಕೊಟ್ಟಿದೆ. ಸಿನಿಮಾದ ನಟರಾದ ರಾಮ್‌ಚರಣ್ ಮತ್ತು ಜೂ.ಎನ್‌ಟಿಆರ್ ಕೂಡ ವಿಶ್ವಾದ್ಯಂತ ಸುದ್ದಿಯಲ್ಲಿದ್ದಾರೆ. ಹೀಗಿರುವಾಗ ನಟ ರಾಮ್‌ಚರಣ್ (Actor Ram charan) ಅವರ ಮುಂದಿನ ಭವಿಷ್ಯ ಹೇಗಿರಬೇಕಿದೆ? ಅವರಿಗೆ ಈ ಸಿನಿಮಾದಿಂದ ಆದ ಲಾಭ ಏನು ಎನ್ನುವ ಬಗ್ಗೆ ಇಲ್ಲಿದೆ ವಿಶ್ಲೇಷಣೆ.
ಇದನ್ನೂ ಓದಿ: Viral Video: ಜಪಾನ್‌ನಲ್ಲಿ ಮಗನಿಗಾಗಿ ಆರ್‌ಆರ್‌ಆರ್ ಸಿನಿಮಾ ಕಥೆಯನ್ನೇ ಪುಸ್ತಕ ಮಾಡಿಕೊಟ್ಟ ತಾಯಿ
ರಾಮ್‌ಚರಣ್ ಅವರು 2007ರಲ್ಲಿ ಚಿರುಥ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಅದಾದ ಮೇಲೆ ಅವರ ಮಗಧೀರ ಸಿನಿಮಾ ಹಿಟ್ ಲಿಸ್ಟ್ ಸೇರಿಕೊಂಡಿತು. ಅದರ ನಂತರ ಬಂದ ರಂಗಸ್ಥಳಂ ಸಿನಿಮಾ ಕೂಡ ಭಾರೀ ಮೆಚ್ಚುಗೆ ಪಡೆದುಕೊಂಡಿತು. ಆದರೆ ಇದೀಗ ಆರ್‌ಆರ್‌ಆರ್ ಸಿನಿಮಾ ರಾಮ್‌ಚರಣ್ ಅವರಿಗೆ ಬೇರೆಯದ್ದೇ ಬೆಲೆ ತಂದುಕೊಟ್ಟಿದೆ. ರಾಮ್‌ಚರಣ್ ಕೇವಲ ತೆಲುಗು ನಟ ಅಲ್ಲ ಭಾರತೀಯ ನಟ ಎಂದು ಗುರುತಿಸುವಂತಾಗಿದೆ.
ಆರ್‌ಆರ್‌ಆರ್‌ಗೂ ಮೊದಲು ರಾಮ್‌ಚರಣ್ ಅವರು ಜಾಹೀರಾತುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಆರ್‌ಆರ್‌ಆರ್ ಗೆದ್ದಿದ್ದೇ ತಡ, ಹಲವಾರು ಕಂಪನಿಗಳು ನಟನನ್ನು ಹುಡುಕಿಕೊಂಡು ಹೋಗಿದ್ದಾವೆ. ಇದೀಗ ರಾಮ್‌ಚರಣ್ ಪಾರ್ಲೆ ಆಗ್ರೊ, ಹೀರೋ ಮೋಟಾರ್, ಮೀಶೋ, ಡಿಸ್ನೇ ಪ್ಲಸ್ ಹಾಟ್‌ಸ್ಟಾರ್ ಸೇರಿ ಒಟ್ಟು ಆರು ಬ್ರ್ಯಾಂಡ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಚಿತ್ರಗಳಿಗೆ ಕಡಿಮೆ ಸಂಭಾವನೆ ಪಡೆಯುತ್ತಿದ್ದ ನಟ ಈಗ ತಮ್ಮ ಸಂಭಾವನೆ ಮೊತ್ತವನ್ನೂ ಕೂಡ ನೂರು ಕೋಟಿ ರೂಪಾಯಿಗೆ ಏರಿಕೆ ಮಾಡಿದ್ದಾರೆ ಎಂದು ವರದಿಯಿದೆ.
ನಿರ್ಮಾಪಕ ಗುರು ಸತೀಶ್ ಪಾಂಡೆ ಅವರು ರಾಮ್‌ಚರಣ್ ಅವರ ಬಗ್ಗೆ ಮಾತನಾಡಿದ್ದಾರೆ. “ರಾಮ್‌ಚರಣ್ ಅವರು ಈಗ ಖ್ಯಾತಿಯಲ್ಲಿದ್ದಾರೆ ಎನ್ನುವ ಕಾರಣಕ್ಕೆ ಅವರಿಗೆ ಜಾಹೀರಾತು ಅವಕಾಶಗಳು ಬರುತ್ತಿಲ್ಲ. ಅವರಿಗೆ ಇದಲ್ಲದೆ ಹಲವು ಬಾರಿ ಪ್ರಸಿದ್ಧತೆ ಸಿಕ್ಕಿದೆ. ಈಗ ಆರ್‌ಆರ್‌ಆರ್ ಸುದ್ದಿಯಲ್ಲಿದೆ. ವಿಶ್ವದಲ್ಲೆಡೆ ಆರ್‌ಆರ್‌ಆರ್ ಹೆಸರು ಕೇಳಿಬಂದಿದೆ. ಆ ಕಾರಣಕ್ಕೆ ನಟನ ದೃಷ್ಟಿಕೋನವೂ ಬದಲಾಗಿದೆ” ಎಂದು ಹೇಳಿದ್ದಾರೆ.
ಈ ಬಗ್ಗೆ ಸಿನಿಮಾ ವಿಮರ್ಶಕ ಜೀವಿ ಕೂಡ ಮಾತನಾಡಿದ್ದು, “ರಾಮ್‌ಚರಣ್ ಅವರ ಮೊದಲ ಸಿನಿಮಾ ಅವರ ತಂದೆ ಚಿರಂಜೀವಿ ಅವರದ್ದೇ ಆದಂತಿತ್ತು. ರಾಮ್‌ಚರಣ್ ನಟನೆ ಆರಂಭಿಸುವುದಕ್ಕೂ ಮೊದಲು ಚಿರಂಜೀವಿ ಅವರು 149 ಸಿನಿಮಾ ಮಾಡಿದ್ದರು. ರಾಮ್‌ಚರಣ್ ಅವರ ಮೊದಲನೇ ಸಿನಿಮಾವನ್ನು ಚಿರಂಜೀವಿ ಅವರ 150ನೇ ಸಿನಿಮಾ ಎಂದೇ ಪ್ರಚಾರ ಮಾಡಲಾಯಿತು. ಅದಾದ ಮೇಲೆ ಅವರು ಮಾಡಿದ ಸಿನಿಮಾಗಳು ಕೂಡ ಹಿಟ್ ಆದವು. ಹಾಗಾಗಿ ರಾಮ್‌ಚರಣ್ ಆರ್‌ಆರ್‌ಆರ್‌ಗೂ ಮೊದಲೇ ಎಲ್ಲರಿಗೂ ಗೊತ್ತಿದ್ದವರೇ. ಆದರೆ ಈಗ ಅವರ ಪ್ರಸಿದ್ಧತೆ ಮತ್ತೊಂದು ಮಟ್ಟ ಏರಿಕೆಯಾಗಿದೆಯಷ್ಟೇ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Actor Ramcharan: RC15 ಟೈಟಲ್ ರಿವೀಲ್: ಜನುಮದಿನದಂದೇ ಗುಡ್‌ನ್ಯೂಸ್ ಕೊಟ್ಟ ರಾಮ್‌ಚರಣ್
ಹಾಗೆಯೇ ಮಾತು ಮುಂದುವರಿಸಿರುವ ಅವರು, “ಈಗ ರಾಮ್‌ಚರಣ್ ಅವರ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಮುಂದಿನ ಅವರ ಸಿನಿಮಾಗಳು ಕನಿಷ್ಠ 300 ಕೋಟಿ ರೂ. ಗಳಿಸುವಂತಿರಬೇಕು. ಈಗ ಅವರ ಬಳಿ ಎರಡು ಆಯ್ಕೆಯಿದೆ. ಒಂದು ಅವರು ಯಾವುದಾದರೂ ದೊಡ್ಡ ಸಿನಿ ತಂಡದೊಂದಿಗೆ ಸಿನಿಮಾ ಮಾಡಬೇಕು ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ಮಾಡುವುದಕ್ಕೆ ಯತ್ನಿಸಬೇಕು” ಎಂದು ನುಡಿದಿದ್ದಾರೆ.