Site icon Vistara News

Actor Ram Charan: ರಾಮ್‌ಚರಣ್‌ RC 16 ಪೋಸ್ಟರ್‌ ಔಟ್‌: ʻಗೋಲ್ಡನ್ ಹಾರ್ಟ್ʼ ಎಂದು ಕರೆದ ನಿರ್ದೇಶಕ ಬುಚ್ಚಿ ಬಾಬು ಸನಾ

Ram Charan RC16 first poster release

ಬೆಂಗಳೂರು: ನಟ ರಾಮ್‌ಚರಣ್‌ (Actor Ram Charan) ಬ್ಯಾಕ್‌ಟು ಬ್ಯಾಕ್‌ ಹೊಸ ಸಿನಿಮಾಗಳ ಅಪ್‌ಡೇಟ್‌ ತಮ್ಮ ಜನುಮದಿನದಂದು ನೀಡುತ್ತಿದ್ದಾರೆ. ಶಂಕರ್ ಅವರ ʻಗೇಮ್ ಚೇಂಜರ್ʼ ಸಿನಿಮಾ ನಂತರ, ನಿರ್ದೇಶಕ ಬುಚ್ಚಿ ಬಾಬು ಸನಾ (Director Buchi Babu Sana) ಅವರೊಂದಿಗೆ ನಟ ಕೈ ಜೋಡಿಸುತ್ತಿದ್ದಾರೆ. ಈ ಸಿನಿಮಾಗೆ ತಾತ್ಕಾಲಿಕವಾಗಿ RC 16 ಎಂದು ಹೆಸರಿಡಲಾಗಿದ್ದು, ಇದೀಗ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

ಆರ್‌ಸಿ 16 ಚಿತ್ರದ ನಿರ್ದೇಶಕ ಬುಚ್ಚಿ ಬಾಬು ಸನಾ ಟ್ವಿಟರ್‌ನಲ್ಲಿ ರಾಮ್ ಚರಣ್ ಅವರ ಜನ್ಮದಿನದ ಶುಭಾಶಯಗಳನ್ನು ಕೋರಲು ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. “ದಿ ಮ್ಯಾನ್ ವಿತ್ ಎ ಗೋಲ್ಡನ್ ಹಾರ್ಟ್. ಮೆಗಾ ಪವರ್ ಸ್ಟಾರ್ / ಗ್ಲೋಬಲ್ ಸ್ಟಾರ್ ಜನ್ಮದಿನದ ಶುಭಾಶಯಗಳು ರಾಮಚರಣ್ ಸರ್. ನಿಮ್ಮ ಕೆಲಸದಿಂದ ಸ್ಫೂರ್ತಿ ನೀಡುತ್ತಿರಿʼʼ”ಎಂದು ಬರೆದುಕೊಂಡಿದ್ದಾರೆ.

ನಿರ್ದೇಶಕ ಬುಚ್ಚಿ ಬಾಬು ಸನಾ ಟ್ವೀಟ್‌

ಮೈತ್ರಿ ಮೂವಿ ಮೇಕರ್ಸ್ ಬೆಂಬಲದೊಂದಿಗೆ, ವೃದ್ಧಿ ಸಿನಿಮಾಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ಗಳ ಅಡಿಯಲ್ಲಿ ಹೈ ಬಜೆಟ್‌ನಲ್ಲಿ ಈ ಚಿತ್ರ ತಯಾರಾಗುತ್ತಿದೆ. ಸ್ಪೋರ್ಟ್ಸ್ ಡ್ರಾಮಾ ಚಿತ್ರ ಇದಾಗಿದ್ದು, ಪ್ಯಾನ್-ಇಂಡಿಯಾ ಚಲನಚಿತ್ರವಾಗಲಿದೆ ಎಂದು ವರದಿಯಾಗಿದೆ.

ಮಾರ್ಚ್‌ 26 ಹೈದರಾಬಾದ್‌ನ ಶಿಲ್ಪಕಲಾ ವೇದಿಕೆ ಸಭಾಂಗಣದಲ್ಲಿ ರಾಮ್ ಚರಣ್ ಅವರ ಅಭಿಮಾನಿಗಳಿಗಾಗಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ನಿರ್ದೇಶಕ ಬುಚ್ಚಿ ಬಾಬು ಸಹ ಭಾಗವಹಿಸಿದ್ದರು. ಹೈದರಾಬಾದ್ ನಲ್ಲಿ ನಡೆದ ರಾಮ್ ಚರಣ್ ಹುಟ್ಟುಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಬುಚ್ಚಿಬಾಬು ಸನಾ, ರಾಮ್ ಚರಣ್ ಮೇಲಿನ ನನ್ನ ಪ್ರೀತಿಯನ್ನು ಚಿತ್ರದ ಮೂಲಕ ತೋರಿಸುತ್ತೇನೆ ಎಂದರು.

ಇದನ್ನೂ ಓದಿ: Actor Ram charan : ಆರ್‌ಆರ್‌ಆರ್‌ ಸಿನಿಮಾ ಯಶಸ್ಸಿನ ಗುಂಗಿನಲ್ಲಿರುವ ನಟ ರಾಮ್‌ಚರಣ್‌ ಭವಿಷ್ಯವೇನು?

ಈಗಾಗಲೇ ನಿರ್ದೇಶಕ ಶಂಕರ್ RC 15 ಚಿತ್ರದ ಟೈಟಲ್‌ ಮತ್ತು ಫಸ್ಟ್‌ ಲುಕ್‌ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಗೇಮ್ ಚೇಂಜರ್ ಎಂದು ಹೆಸರಿಡಲಾಗಿದ್ದು, ಫಸ್ಟ್ ಲುಕ್ ನಲ್ಲಿ ನಟ ಸ್ಟೈಲಿಶ್ ಮತ್ತು ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಸಿರಿಶ್ ಅವರು ನಿರ್ಮಿಸಿರುವ ಈ ಚಿತ್ರದಲ್ಲಿ ನಟ ಎಸ್ ಜೆ ಸೂರ್ಯ ಕೂಡ ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ.

Exit mobile version