Site icon Vistara News

Actor Ram Charan : ನಾವು ಪ್ರತಿಸ್ಪರ್ಧಿಗಳೂ ಹೌದು, ಸ್ನೇಹಿತರೂ ಹೌದೆಂದ ರಾಮ್ ಚರಣ್

#image_title

ಹೈದರಾಬಾದ್ : ‘ಆರ್ ಆರ್ ಆರ್’ ಸಿನಿಮಾ ಮೂಲಕ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ (Actor Ram Charan) ಮಾಡಿರುವ ಕಮಾಲ್ ನಿಮಗೆಲ್ಲರಿಗೂ ಗೊತ್ತೇ ಇದೆ. ಅತ್ಯುತ್ತಮ ಸಿನಿಮಾ ನೀಡಿ, ದೇಶವೇ ಹೆಮ್ಮೆ ಪಡುವಂತೆ ಮಾಡಿರುವ ಈ ಜೋಡಿ ನಿಜಕ್ಕೂ ಸ್ನೇಹಿತರೇ ಅಥವಾ ಪ್ರತಿಸ್ಪರ್ಧಿಗಳೇ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇದೆ. ಇದಕ್ಕೆ ನಟ ರಾಮ್ ಚರಣ್ ಅವರೇ ಉತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ: Sachin Tendulkar: ಟೀಮ್​ ಇಂಡಿಯಾಕ್ಕೆ ‘RRR’ ಆಸರೆ; ಸಚಿನ್​ ತೆಂಡೂಲ್ಕರ್​ ಹೀಗೆ ಟ್ವೀಟ್​ ಮಾಡಲು ಕಾರಣವೇನು?

ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಕಾರ್ಯಕ್ರಮದ ನಂತರ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ರಾಮ್ ಚರಣ್ ಅವರು ಜೂ.ಎನ್‌ಟಿಆರ್ ಅವರೊಂದಿಗಿನ ಸಂಬಂಧವನ್ನು ಬಿಚ್ಚಿಟ್ಟಿದ್ದಾರೆ. “ನಾವಿಬ್ಬರು ಸ್ನೇಹಿತರು ಎಂದು ಜಗತ್ತಿಗೆ ಸಾರಲು ಆರ್ ಆರ್ ಆರ್ ಚಿತ್ರ ಮಾಧ್ಯಮವಾಯಿತು. ಸ್ಪರ್ಧೆಯ ವಿಚಾರಕ್ಕೆ ಬಂದಾಗ, ಸಹಜವಾಗಿ ನಮ್ಮಿಬ್ಬರ ಮಧ್ಯೆ ಸ್ಪರ್ಧೆ ಇದೆ. ಆದರೆ ಅದು ತುಂಬಾ ಆರೋಗ್ಯಕರವಾದ ಸ್ಪರ್ಧೆ. ಚಿತ್ರೀಕರಣದ ಸಮಯದಲ್ಲಿ ನಾವು ಯಾವಾಗಲೂ ಒಬ್ಬರಿಗೊಬ್ಬರು ಸಹಾಯ ಮಾಡಲು ಮತ್ತು ಪರಸ್ಪರರ ಮಾನಸಿಕ ಮತ್ತು ದೈಹಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇವೆ” ಎಂದು ಹೇಳಿದ್ದಾರೆ.

“ನಮ್ಮಿಬ್ಬರ ಕುಟುಂಬಗಳು 20-30 ವರ್ಷಗಳಿಂದ ಚಲನಚಿತ್ರೋದ್ಯಮದಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾಗಿ ಗುರುತಿಸಲ್ಪಟ್ಟಿವೆ. ಅವರ ಅಜ್ಜ ಮತ್ತು ನನ್ನ ತಂದೆ ಸ್ಪರ್ಧೆಯಲ್ಲಿದ್ದವರೇ. ನಾವು ಸಾಂಪ್ರದಾಯಿಕ ಪ್ರತಿಸ್ಪರ್ಧಿ ಕುಟುಂಬಗಳು” ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: RRR Movie: ರಾಜಮೌಳಿ ಹಾಲಿವುಡ್‌ನಲ್ಲಿ ಚಲನಚಿತ್ರ ಮಾಡಲು ಬಯಸಿದರೆ ನನ್ನ ಬೆಂಬಲವಿದೆ ಎಂದ ಕ್ಯಾಮರೂನ್
ಜೂನಿಯರ್ ಎನ್.ಟಿ.ಆರ್ ಅವರ ಅಜ್ಜ, ಎನ್.ಟಿ ರಾಮರಾವ್ ಅವರು ತೆಲುಗು ಚಿತ್ರರಂಗದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ಜೂನಿಯರ್ ಎನ್.ಟಿ.ಆರ್ ಅವರ ತಂದೆ ಹರಿ ಕೃಷ್ಣ ಮತ್ತು ಅವರ ಚಿಕ್ಕಪ್ಪ ಬಾಲಕೃಷ್ಣ ಅವರನ್ನು ಸಹ ಸಿನಿ ಕ್ಷೇತ್ರದಲ್ಲಿ ಹೆಸರು ಮಾಡಿದವರೇ. ರಾಮ್ ಚರಣ್ ಕೂಡ ಚಿತ್ರರಂಗದ ಹಿನ್ನೆಲೆಯಿಂದಲೇ ಬಂದವರು. ಅವರ ತಂದೆ ಹಿರಿಯ ನಟ ಚಿರಂಜೀವಿ ಮತ್ತು ಅವರ ಸೋದರಸಂಬಂಧಿ ಅಲ್ಲು ಅರ್ಜುನ್ ಅವರು ಸಿನಿ ಕ್ಷೇತ್ರದ ಅತ್ಯಂತ ಬೇಡಿಕೆಯ ನಟರಾಗಿದ್ದಾರೆ.

Exit mobile version