ಲಾಸ್ ಏಂಜಲೀಸ್: ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿದೆ. ಆಸ್ಕರ್ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿರುವ ಈ ಸಿನಿಮಾದ ನಟ ರಾಮ್‌ಚರಣ್ (Actor Ram Charan) ತಮ್ಮ ಅಚ್ಚುಮೆಚ್ಚಿನ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಆಸ್ಕರ್ ಪ್ರಯುಕ್ತ ಲಾಸ್ ಏಂಜಲೀಸ್‌ಗೆ ಪ್ರಯಾಣ ಮಾಡಿರುವ ನಟ ಅಲ್ಲಿನ ಸಂದರ್ಶಕರೊಂದಿಗೆ ತಮ್ಮ ಮೆಚ್ಚಿನ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: Oscars 2023 Nominations: ಆಸ್ಕರ್ ಸನಿಹಕ್ಕೆ ಆರ್‌ಆರ್‌ಆರ್ ಚಿತ್ರದ ನಾಟು ನಾಟು, ಪ್ರಶಸ್ತಿ ಆಯ್ಕೆ ಹೇಗೆ?
ರಾಮ್ ಚರಣ್ ಅವರಿಗೆ ಇಂಗ್ಲಿಷ್‌ನ ʼನೋಟ್‌ಬುಕ್ʼ ಮತ್ತು ʼಟರ್ಮಿನೇಟರ್ 2ʼ ಸಿನಿಮಾ ಅತ್ಯಂತ ಇಷ್ಟವಂತೆ. ಈ ಎರಡು ಸಿನಿಮಾಗಳನ್ನು ಹೆಚ್ಚು ಕಡಿಮೆ 50 ಬಾರಿ ನೋಡಿದ್ದಾರಂತೆ. ಹಾಗೆಯೇ ತೆಲುಗು ಸಿನಿಮಾಗಳ ವಿಚಾರಕ್ಕೆ ಬಂದರೆ ʼದಾನ ವೀರ ಸೂರ ಕರ್ಣʼ, ʼಬಾಹುಬಲಿʼ, ʼರಂಗಸ್ಥಳಂʼ ಸಿನಿಮಾಗಳು ರಾಮ್ ಚರಣ್‌ಗೆ ಅಚ್ಚು ಮೆಚ್ಚಿನ ಸಿನಿಮಾಗಳಂತೆ. ಶೇಖರ್ ಕಪೂರ್ ನಿರ್ದೇಶನದ ಮಿಸ್ಟರ್ ಇಂಡಿಯಾ ಸಿನಿಮಾ ಕೂಡ ಮೆಚ್ಚಿನ ಸಿನಿಮಾಗಳ ಪಟ್ಟಿಯಲ್ಲಿ ಇದೆ ಎಂದು ನಟ ಹೇಳಿಕೊಂಡಿದ್ದಾರೆ.
ಆರ್‌ಆರ್‌ಆರ್ ಸಿನಿಮಾ ಆಸ್ಕರ್‌ಗೆ ನಾಮ ನಿರ್ದೇಶನಗೊಂಡಿರುವ ಹಿನ್ನೆಲೆ ಲಾಸ್ ಏಂಜಲೀಸ್‌ನಲ್ಲಿ ಸಿನಿಮಾದ ಅತ್ಯಂತ ದೊಡ್ಡ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಏಸ್ ಹೋಟೆಲ್‌ನಲ್ಲಿ ನಡೆದ ಪ್ರದರ್ಶನ ಕೆಲವೇ ನಿಮಿಷಗಳಲ್ಲಿ ಹೌಸ್ ಫುಲ್ ಆಗಿದೆ. ಅಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ನಿರ್ದೇಶಕ ರಾಜಮೌಳಿ ಮಾತನಾಡಿದ್ದಾರೆ ಕೂಡ.