Site icon Vistara News

Actor Ramcharan: RC15 ಟೈಟಲ್‌ ರಿವೀಲ್‌: ಜನುಮದಿನದಂದೇ ಗುಡ್‌ನ್ಯೂಸ್‌ ಕೊಟ್ಟ ರಾಮ್‌ಚರಣ್‌

Actor Ramcharan announces his film RC 15 is titled Game Changer

ಬೆಂಗಳೂರು: ಮಾರ್ಚ್‌ 27 ರಾಮ್‌ಚರಣ್‌ (Actor Ramcharan) ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಶುಭ ದಿನದಂದು ತಮ್ಮ ಚಿತ್ರ RC15ಗೆ `ಗೇಮ್ ಚೇಂಜರ್’ ಎಂದು ಶೀರ್ಷಿಕೆ ಇಡಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ರಾಮ್ ಚರಣ್‌ ಚಿತ್ರದ ಟೈಟಲ್‌ ಟೀಸರ್ ಹಂಚಿಕೊಂಡಿದ್ದಾರೆ. ರಾಮ್ ಚರಣ್‌ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ “ಗೇಮ್ ಚೇಂಜರ್ ಇದು !” ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಟ್ಯಾಗ್ ಮಾಡಿದ್ದಾರೆ.

ಈ ಚಿತ್ರ ಘೋಷಣೆ ಆಗಿದ್ದು, 2021ರ ಫೆಬ್ರವರಿ ತಿಂಗಳಲ್ಲಿ. ಎರಡು ವರ್ಷ ಕಳೆದರೂ ಚಿತ್ರದ ಶೂಟಿಂಗ್ ಮುಗಿದಿಲ್ಲ. ರಾಮ್ ಚರಣ್ ಅವರು ಸಂಪೂರ್ಣವಾಗಿ ಈ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಕಿಯಾರಾ ಆಡ್ವಾಣಿ ನಾಯಕಿ. ಈಗಾಗಲೇ ಗೇಮ್‌ ಚೇಂಜರ್‌ ಚಿತ್ರತಂಡ ರಾಮ್‌ಚರಣ್‌ ಅವರ ಜನುಮದಿನದ ಒಂದು ದಿನ ಮುಂಚಿತವಾಗಿ RC15 ಚಿತ್ರತಂಡ ನಟನ ಹುಟ್ಟುಹಬ್ಬವನ್ನು ಸೆಟ್‌ನಲ್ಲಿ ಆಚರಿಸಿದೆ. ಗುಲಾಬಿ ದಳಗಳ ಸುರಿಮಳೆಯೊಂದಿಗೆ ರಾಮ್‌ಚರಣ್‌ಗೆ ಸ್ವಾಗತಿಸಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದೆ.

ಆರ್‌ಆರ್‌ಆರ್ ಆಸ್ಕರ್‌ ಪ್ರಶಸ್ತಿ ದೊರೆತ ಬಳಿಕ ರಾಮ್‌ ಚರಣ್‌ ಅವರಿಗೆ ಕೆಲವು ದಿನಗಳ ಹಿಂದೆಯಷ್ಟೇ ಚಿತ್ರತಂಡದಿಂದ ವಿಭಿನ್ನವಾಗಿ ನಟನನ್ನು ವೆಲ್‌ಕಮ್‌ ಮಾಡಲಾಗಿತ್ತು. ಪ್ರಭುದೇವ ಹಾಗೂ ಚಿತ್ರತಂಡ ನಾಟು ನಾಟು ಹಾಡನ್ನು ಸೆಟ್‌ನಲ್ಲಿಯೇ ಸ್ಟೆಪ್ಸ್‌ ಹಾಕಿ ರಾಮ್‌ಚರಣ್‌ ಅವರನ್ನು ಸ್ವಾಗತಿಸಿದ್ದರು.

ಇದನ್ನೂ ಓದಿ: Actor Ramcharan: ಒಂದು ದಿನ ಮುಂಚಿತವಾಗಿ ರಾಮ್‌ಚರಣ್‌ ಜನುಮದಿನವನ್ನು ಆಚರಿಸಿದ RC15 ಚಿತ್ರತಂಡ

ರಾಮ್‌ಚರಣ್‌ ಪೋಸ್ಟ್‌

ಇದರಲ್ಲಿ ಕಿಯಾರಾ ಆಡ್ವಾಣಿ, ಎಸ್‌ಜೆ ಸೂರ್ಯ, ಜಯರಾಮ್, ಅಂಜಲಿ ಮತ್ತು ಶ್ರೀಕಾಂತ್ ಕೂಡ ನಟಿಸಿದ್ದಾರೆ. ಈ ಪ್ರಾಜೆಕ್ಟ್ ಅನ್ನು ಪ್ಯಾನ್-ಇಂಡಿಯಾ ಬಿಡುಗಡೆಗಾಗಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ಗಾರು ಜಂಟಿಯಾಗಿ ನಿರ್ಮಿಸಿದ್ದಾರೆ. ಗೇಮ್ ಚೇಂಜರ್ ತೆಲುಗು, ತಮಿಳು ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Naatu Naatu: ಆಸ್ಕರ್‌ ವೇದಿಕೆ ಮೇಲೆ ನೃತ್ಯ ಮಾಡುವುದಕ್ಕೆ ರಾಮ್‌ಚರಣ್‌ ತುದಿಗಾಲಿನಲ್ಲಿದ್ದರೆ, ಒಪ್ಪಲೇ ಇಲ್ಲ ಜೂ.ಎನ್‌ಟಿಆರ್‌!

ಈಗಾಗಲೇ ಮಹೇಶ್ ಬಾಬು ನಟನೆಯ 28ನೇ ಸಿನಿಮಾ ಹಾಗೂ ‘ಪ್ರಾಜೆಕ್ಟ್​ ಕೆ’ ಚಿತ್ರಗಳು ಇದೇ ದಿನ ರಿಲೀಸ್ ಆಗಲು ರೆಡಿ ಆಗಿವೆ. ಇದರ ಜತೆ ‘ಗೇಮ್ ಚೇಂಜರ್’ ಕೂಡ ಸೇರಿಕೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Exit mobile version