Site icon Vistara News

Actor Rishi: ವೆಬ್ ಸಿರೀಸ್‌ ಪ್ರಪಂಚಕ್ಕೆ ʻಕವಲುದಾರಿʼ ಖ್ಯಾತಿಯ ರಿಷಿ ಎಂಟ್ರಿ! ಸ್ಟ್ರೀಮಿಂಗ್‌ ಯಾವಾಗ?

Actor Rishi Entry to Web Series

ಬೆಂಗಳೂರು: ಈಗೇನಿದ್ದರೂ ಡಿಜಿಟಲ್ ಜಮಾನ. ಒಟಿಟಿ ಮೂಲಕ ಸಿನಿಮಾಗಳು ಹಾಗೂ ವೆಬ್ ಸರಣಿಗಳು ಪ್ರೇಕ್ಷಕರ ಎದುರು ಬರುತ್ತಿವೆ. ಕನ್ನಡದಲ್ಲಿಯೂ ವೆಬ್ ಸಿರೀಸ್‌ಗಳ ನಿರ್ಮಾಣ ಜೋರಾಗಿ ನಡೆಯುತ್ತಿದೆ. ಕನ್ನಡ ತಾರೆಯರು ಕೂಡ ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಕವಲುದಾರಿ ಸಿನಿಮಾ ಖ್ಯಾತಿಯ ನಟ ರಿಷಿ (Actor Rishi).

ಸಿನಿಮಾಗಳು ಹಾಗೂ ಪಾತ್ರಗಳ ಆಯ್ಕೆಯಲ್ಲಿ ಇವರು ಬಹಳ ವಿಭಿನ್ನ. ಸಸ್ಪೆನ್ಸ್, ಕಾಮಿಡಿ, ಲವ್ ಸ್ಟೋರಿ ಯಾವುದೇ ಇರಲಿ ಎಲ್ಲದಕ್ಕೂ ಸೈ ಎನ್ನುತ್ತಾರೆ ನಟ ರಿಷಿ. ಪ್ರತಿ ಸಿನಿಮಾದಲ್ಲಿಯೂ ಹೊಸ ಬಗೆಯ ಕಂಟೆಂಟ್, ಕ್ಯಾರೆಕ್ಟರ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಪ್ರತಿಭಾನ್ವಿತ ನಟ ಎಂಬುದನ್ನು ಸಾಬೀತುಪಡಿಸಿದ್ದಾರೆ. ಸದ್ಯ ರಾಮನ ಅವತಾರ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿರುವ ರಿಷಿ ಒಂದಷ್ಟು ಹೊಸ ಪ್ರಾಜೆಕ್ಟ್‌ಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಬರೀ ಸಿನಿಮಾಗಳಲ್ಲಿ ಮಾತ್ರವಲ್ಲ ಈಗ ವೆಬ್ ಸಿರೀಸ್ ಜಗತ್ತಿನಲ್ಲಿಯೂ‌ ತಮ್ಮ ನಟನ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

ತೆಲುಗಿನ ಹೆಸರಾಂತ ನಿರ್ದೇಶಕರಾದ ಮಹಿ ರಾಘವ್ ನಿರ್ದೇಶನದ ಕ್ರೈಮ್ ಡ್ರಾಮಾ ʻಶೈತಾನ್ʼ ಮೂಲಕ ರಿಷಿ ತೆಲುಗು ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ವೆಬ್ ಸಿರೀಸ್‌ನಲ್ಲಿ ರಿಷಿ ಬಾಲಿ‌ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಯಕ ಹಾಗೂ ಖಳನಾಯಕ ಎರಡು ಶೇಡ್‌ನಲ್ಲಿರುವ ಬಾಲಿ ಪಾತ್ರದ ಸಣ್ಣ ಝಲಕ್ ರಿಲೀಸ್ ಆಗಿದ್ದು, ಮಾಸ್ ಅವತರಾದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Actor Rishi: ‘ರಾಮನ ಅವತಾರ’ದಲ್ಲಿ ಕವಲುದಾರಿ ರಿಷಿ: ರಾಮರಾಜ್ಯ ಮತ್ತೆ ಶುರು ಎಂದ ನಟ

ಜೂನ್ 15ರಂದು ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಶೈತಾನ್ ಸ್ಟ್ರೀಮಿಂಗ್ ಆಗಲಿದೆ. ತೆಲುಗು ಭಾಷೆ ಜತೆಗೆ ತಮಿಳು, ಕನ್ನಡ, ಹಿಂದಿ ಹಾಗೂ ಮಲಯಾಳಂನಲ್ಲಿಯೂ ವೆಬ್ ಸಿರೀಸ್‌ ಮೂಡಿಬರಲಿದೆ. ರವಿಕಾಳೆ, ಜಾಫರ್ ಸಾದಿಕ್, ಲೀನಾ, ಮಣಿಕಂದನ್ ಮುಂತಾದವರು ಶೈತಾನ್ ಸಿರೀಸ್ ಭಾಗವಾಗಿದ್ದಾರೆ. ಹಾಗ್ ನೋಡಿದರೆ ತೆಲುಗು ಚಿತ್ರರಂಗದಲ್ಲಿಯೂ ಪ್ರತಿಭಾನ್ವಿತ ಕಲಾವಿದರ ದಂಡೇ ಇದೆ.

Exit mobile version