Site icon Vistara News

Actor Shahrukh Khan: ಅಮೆರಿಕದಲ್ಲಿ ಶಾರುಖ್ ಖಾನ್‌ಗೆ ಶಸ್ತ್ರಚಿಕಿತ್ಸೆ; ಬಾಲಿವುಡ್‌ ಬಾದ್‌ಶಾಗೆ ಕಾಡುತ್ತಿರುವ ಸಮಸ್ಯೆ ಏನು?

Actor Shahrukh Khan


ಮುಂಬೈ: ಶಾರುಖ್ ಖಾನ್ ಬಾಲಿವುಡ್‍ನ ಖ್ಯಾತ ನಟರಲ್ಲಿ ಒಬ್ಬರು. ಇವರು ಬಾಲಿವುಡ್ ಚಿತ್ರರಂಗಕ್ಕೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇವತ್ತಿಗೂ ಬಾಲಿವುಡ್‌ಗೆ ಇವರೇ ಬಾದ್‌ ಶಾ! 58ನೇ ವಯಸ್ಸಿನ ಈ ನಟನಿಗೆ ಕಣ್ಣಿನಲ್ಲಿ ಸಮಸ್ಯೆ ಉಂಟಾದ ಹಿನ್ನಲೆಯಲ್ಲಿ ಅಮೇರಿಕಾದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಶಾರುಖ್ ಖಾನ್ (Actor Shahrukh Khan)ಕೊನೆಯ ಬಾರಿಗೆ ರಾಜ್ ಕುಮಾರ್ ಹಿರಾನಿ ಅವರ ʼಡಂಕಿʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಯುಕೆಯಿಂದ ಹಿಂದಿರುಗಿದ ನಟ ಈಗ ಕಣ್ಣಿನ ಚಿಕಿತ್ಸೆಗಾಗಿ ತುರ್ತಾಗಿ ಅಮೆರಿಕಕ್ಕೆ ಹಾರಲಿದ್ದಾರೆ ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ, ನಟ ಶಾರುಖ್ ಖಾನ್ ಜುಲೈ 29ರಂದು ಶಸ್ತ್ರಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ಹೋಗಿದ್ದರು. ಆದರೆ, ಚಿಕಿತ್ಸೆಯು ಯೋಜಿಸಿದಂತೆ ನಡೆಯಲಿಲ್ಲ. ಹಾಗಾಗಿ ಅವರು ವಿದೇಶದಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲಿದ್ದಾರೆ ಎನ್ನಲಾಗಿದೆ. ಆದರೆ ಶಾರುಖ್ ಮ್ಯಾನೇಜರ್ ಪೂಜಾ ದದ್ಲಾನಿ ಈ ಸುದ್ದಿಯನ್ನು ದೃಢಪಡಿಸಿಲ್ಲ.
ಈ ವರ್ಷದ ಆರಂಭದಲ್ಲಿ, ನಟ ಶಾರುಖ್ ಖಾನ್ ಅವರನ್ನು ಹೀಟ್ ಸ್ಟ್ರೋಕ್ ಮತ್ತು ನಿರ್ಜಲೀಕರಣದಿಂದಾಗಿ ಗುಜರಾತ್‍ನ ಅಹಮದಾಬಾದ್‍ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಸಮಯದಲ್ಲಿ ತಮ್ಮ ತಂಡ ಕೋಲ್ಕತಾ ನೈಟ್ ರೈಡರ್ಸ್ ಅನ್ನು ಬೆಂಬಲಿಸಲು ಅವರು ಅಲ್ಲಿದ್ದಿದ್ದರು.

ಈ ಹಿಂದೆ 2014ರಲ್ಲಿ ಶಾರುಖ್ ತಮ್ಮ ದೃಷ್ಟಿಯನ್ನು ಸರಿಪಡಿಸಲು ಸಣ್ಣ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರ ಅವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ವೈದ್ಯರಿಗೆ ಧನ್ಯವಾದ ತಿಳಿಸಿದ್ದರು. ತಮ್ಮ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಕ್ಕಾಗಿ ಡಾ. ಬುರ್ಜೋರ್ ಬನಾಜಿ ಮತ್ತು ಅವರ ಪತ್ನಿಗೆ ಧನ್ಯವಾದ ತಿಳಿಸಿದ್ದರು. ಈ ಶಸ್ತ್ರಚಿಕಿತ್ಸೆಯಿಂದ ತಮ್ಮ ದೃಷ್ಟಿ ಸರಿಯಾಗಿರುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: ವಿಚ್ಛೇದನದ ಬಳಿಕ ಪತ್ನಿಗೆ ದುಬಾರಿ ʼಜೀವನಾಂಶʼ ನೀಡಿದ ಬಾಲಿವುಡ್ ಸ್ಟಾರ್‌ಗಳಿವರು!

ನಟ ಶಾರುಖ್ ಖಾನ್ ಅವರ ಮುಂದಿನ ಚಿತ್ರ ಆಕ್ಷನ್-ಥ್ರಿಲ್ಲರ್ ಕಿಂಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ಅವರ ಮಗಳು ಸುಹಾನಾ ಖಾನ್ ಸಹ ನಟಿಸಲಿದ್ದಾರೆ. ಹಾಗೇ ಅಭಿಷೇಕ್ ಬಚ್ಚನ್ ಕೂಡ ಚಿತ್ರದ ಭಾಗವಾಗಲಿದ್ದು, ಅಲ್ಲಿ ಅವರು ಖಳನಾಯಕನಾಗಿ ನಟಿಸಲಿದ್ದಾರೆ. ಆದರೆ, ಅಧಿಕೃತ ದೃಢೀಕರಣ ನಂತರ ಚಿತ್ರದ ಬಗ್ಗೆ ಮಾಹಿತಿ ಹೊರಬೀಳಲಿದೆ ಎನ್ನಲಾಗಿದೆ. ಮುಂದೆ ನಟ ಶಾರುಖ್ ಖಾನ್ ಅವರು ಆದಿತ್ಯ ಚೋಪ್ರಾ ಅವರ ಟೈಗರ್ ವರ್ಸಸ್ ಪಥನ್ ಚಿತ್ರದಲ್ಲಿ ಖಾನ್ ಪಥನ್ ಪಾತ್ರವನ್ನು ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Exit mobile version