Site icon Vistara News

Actor Shankar Nag | ʻಅಬ ಜಬ ದಬʼ ಸಿನಿಮಾದಲ್ಲಿದ್ದಾರಂತೆ ನಟ ಶಂಕರ್‌ನಾಗ್‌: ಏನಿದರ ವಿಶೇಷತೆ?

Actor Shankar Nag

ಬೆಂಗಳೂರು: ನಟ ಶಂಕರ್‌ ನಾಗ್‌ (Actor Shankar Nag ) ಅವರ ಹುಟ್ಟು ಹಬ್ಬದ ಪ್ರಯುಕ್ತ ʻಅಬ ಜಬ ದಬʼ ಚಿತ್ರತಂಡ ಪೋಸ್ಟರ್‌ ಒಂದನ್ನು ಹಂಚಿಕೊಂಡಿದೆ. ಶಂಕರ್‌ ನಾಗ್‌ ಅವರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅದು ಹೇಗೆ ಎಂಬುದು ಮಾತ್ರ ಚಿತ್ರತಂಡ ಬಹಿರಂಗಪಡಿಸಿಲ್ಲ.

ಚಿತ್ರದ ಟೈಟಲ್‌ ಮೂಲಕ ಸಿನಿರಸಿಕರನ್ನು ಸೆಳೆದಿತ್ತು. ಎಸ್. ರಾಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾಗೆ ಮಯೂರ ರಾಘವೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಶೇ.80ರಷ್ಟು ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಇನ್ನೂ 2 ಹಾಡು ಹಾಗೂ ಒಂದು ಸಾಹಸ ದೃಶ್ಯವನ್ನು ಶೀಘ್ರದಲ್ಲೇ ಚಿತ್ರೀಕರಿಸಿಲಾಗುವುದು ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದೀಗ ಶಂಕರ್‌ ನಾಗ್‌ ಅವರ ಜನುಮದಿನ ಪ್ರಯುಕ್ತ ಹೊಸ ಸುದ್ದಿಯೊಂದನ್ನು ಚಿತ್ರತಂಡ ಹಂಚಿಕೊಂಡಿದೆ. ʻʻಮುಂಬೈನ ಪ್ರಸಿದ್ಧ ತಂಡದೊಂದಿಗೆ ಕೆಲಸಗಳು ಪ್ರಾರಂಭ ಆಗಿವೆ. ಮುಂದಿನ ವರ್ಷ ನಮ್ಮ ಶಂಕರಣ್ಣನನ್ನು ತೆರೆ ಮೇಲೆ ನೋಡಿ ಆನಂದಿಸಬಹುದು’ʼ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ | ರಕ್ಷಿತ್‌ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾದಲ್ಲಿ ನಮ್ಮನೆ ಯುವರಾಣಿ ಅಂಕಿತಾ ಅಮರ್‌

ಈ ಚಿತ್ರದಲ್ಲಿ ನಟ ಪೃಥ್ವಿ ಅಂಬಾರ್‌, ಅಂಕಿತಾ ಅಮರ್‌, ಸಂಗೀತಾ ಭಟ್‌, ಊರ್ವಶಿ ಮುಂತಾದವರು ನಟಿಸುತ್ತಿದ್ದಾರೆ. ನಿರ್ದೇಶಕ ಮಯೂರ ರಾಘವೇಂದ್ರ ಒಂದು ಪಾತ್ರಕ್ಕೆ ಬಣ್ಣ ಹಚ್ಚಿರುವುದಾಗಿ ಹೇಳಿಕೊಂಡಿದ್ದಾರೆ. ಅನಂತ ಕೃಷ್ಣ ನಿರ್ಮಾಪಕರಾಗಿದ್ದು, ಗಿರಿಧರ್‌ ದಿವಾನ್‌ ಛಾಯಾಗ್ರಹಣ, ಸತೀಶ್‌ ರಘುನಾಥನ್‌ ಸಂಗೀತ ನಿರ್ದೇಶನ ಸಿನಿಮಾಕ್ಕಿದೆ. ನಟ ಪೃಥ್ವಿ ಅಂಬಾರ್‌ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಈ ಹಿಂದೆ ಅಷ್ಟೇ ಅವರ ನಟಸಿರುವ ಫಾರ್‌ ರಿಜಿಸ್ಟ್ರೇಷನ್‌ (FOR REGN) ಚಿತ್ರದ ಬಿಡುಗಡೆ ದಿನಾಂಕ ಪ್ರಕಟಗೊಂಡಿತ್ತು.

ಇದನ್ನೂ ಓದಿ | Kannada New Movie | ಪೃಥ್ವಿ ಅಂಬಾರ್‌-ಮಿಲನಾ ಅಭಿನಯದ `For Regn’ ರಿಲೀಸ್‌ ಡೇಟ್‌ ರಿವೀಲ್‌!

Exit mobile version