Site icon Vistara News

Actor Sharwanand: ವೈವಾಹಿಕ ಜೀವನಕ್ಕೆ ಕಾಲಿಟ್ಟ ಟಾಲಿವುಡ್ ಖ್ಯಾತ ನಟ; ಮದುವೆಯ ಆನಂದದ ಫೋಟೊಗಳು ವೈರಲ್‌!

Actor Sharwanand AND RAKSHITHA REDDY

ಬೆಂಗಳೂರು: ಟಾಲಿವುಡ್‌ ನಟ ಶರ್ವಾನಂದ್ (Actor Sharwanand) ಹಾಗೂ ರಕ್ಷಿತಾ ರೆಡ್ಡಿ ಜೂನ್ 3ರಂದು ರಾತ್ರಿ 11 ಗಂಟೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಜನವರಿ 26ರಂದು ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿಯ ಮದುವೆ ಅದ್ಧೂರಿಯಾಗಿ ನೆರವೇರಿದೆ. ಮದುವೆಯಲ್ಲಿ ರಾಮ್ ಚರಣ್, ಸಿದ್ಧಾರ್ಥ್, ನಿರ್ಮಾಪಕ ವಂಶಿ ಮತ್ತು ಹಲವಾರು ಗಣ್ಯರು, ರಾಜಕಾರಣಿಗಳು ಭಾಗವಹಿಸಿದ್ದರು. ಇದೀಗ ಮದುವೆಯ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಜೈಪುರದ ಲೀಲಾ ಪ್ಯಾಲೇಸ್‌ನಲ್ಲಿ ಶರ್ವಾನಂದ್ ಮತ್ತು ರಕ್ಷಿತಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರ ಮದುವೆಯ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶರ್ವಾನಂದ್ ಮದುವೆಯಲ್ಲಿ ರಾಮ್ ಚರಣ್ ಭಾಗವಹಿಸಿದ್ದರು. ಎಂದಿನಂತೆ ಕಪ್ಪು ಕುರ್ತಾ ಧರಿಸಿ ಇತರ ಅತಿಥಿಗಳೊಂದಿಗೆ ಪೋಸ್ ನೀಡಿದರು.

ಮದುವೆಗೆ ಮುಂಚೆ ಅಪಘಾತಕ್ಕೆ ಒಳಗಾಗಿದ್ದ ಶರ್ವಾನಂದ್‌

ಮೇ 27ರ ರಾತ್ರಿ ಹೈದರಾಬಾದ್‌ನ ಫಿಲ್ಮ್ ನಗರ್‌ ಜಂಕ್ಷನ್ ಬಳಿ ಶರ್ವಾನಂದ್ ಅವರ ರೇಂಜ್ ರೋವರ್ ಕಾರು ಪಲ್ಟಿಯಾಗಿತ್ತು. ಶರ್ವಾನಂದ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: Actor Sharwanand: ನಿಶ್ಚಿತಾರ್ಥ ಮುರಿದುಬಿದ್ದ ಸುದ್ದಿ ಬೆನ್ನಲ್ಲೇ ಮದುವೆಗೆ ಸಜ್ಜಾದ ನಟ ಶರ್ವಾನಂದ್!

ಶರ್ವಾನಂದ್ ತಮ್ಮ 35ನೇ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಶ್ರೀರಾಮ್ ಆದಿತ್ಯ ನಿರ್ದೇಶನ ಮಾಡುತ್ತಿರುವ ಶೂಟಿಂಗ್‌ನಲ್ಲಿ ನಿರತರಾಗಿದ್ದರು. 40 ದಿನಗಳ ಕಾಲ ಲಂಡನ್‌ನಲ್ಲಿ ಶೂಟಿಂಗ್ ಮುಗಿಸಿ ಭಾರತಕ್ಕೆ ಮರಳಿದ್ದರು. ಈ ಸಿನಿಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

Exit mobile version