ಬೆಂಗಳೂರು: ಜೂನ್ 3ರಂದು ರಾಜಸ್ಥಾನದ ಜೈಪುರದಲ್ಲಿ ರಕ್ಷಿತಾ ರೆಡ್ಡಿಯೊಂದಿಗೆ ಅದ್ದೂರಿ ಮದುವೆಗೆ ಟಾಲಿವುಡ್‌ನ ಯುವನಟ ಶರ್ವಾನಂದ್ (Actor Sharwanand) ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ನಟನ ಮದುವೆಯ ಆಮಂತ್ರಣಗಳನ್ನು ಹಂಚಲಾಗಿದ್ದು, ಜೈಪುರದ ಲೀಲಾ ಪ್ಯಾಲೇಸ್‌ನಲ್ಲಿ ಅದ್ದೂರಿ ವಿವಾಹೋತ್ಸವ ನಡೆಯಲಿದೆ ಎನ್ನಲಾಗಿದೆ. ಜೂನ್ 2 ರಂದು ರಕ್ಷಿತಾ ಅವರ ಮೆಹಂದಿ ಕಾರ್ಯಕ್ರಮ ಮತ್ತು ಜೂನ್ 3ರ ರಾತ್ರಿ 11 ಗಂಟೆಗೆ ಜೋಡಿ ಸಪ್ತಪದಿ ತುಳಿಯಲಿದೆ ಎಂದು ವರದಿಯಾಗಿದೆ.
ಜನವರಿಯಲ್ಲಿ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇತ್ತೀಚೆಗೆ ಜೋಡಿಯ ಮದುವೆ ಮುರಿದು ಬಿದ್ದಿದೆ ಎಂಬ ಸುದ್ದಿ ವೈರಲ್ ಆಗಿತ್ತು. ವರದಿಯ ಪ್ರಕಾರ, ರಕ್ಷಿತಾ ಟೆಕ್ಕಿಯಾಗಿದ್ದು,. ತಂದೆ ಮಧುಸೂಧನ್ ರೆಡ್ಡಿ ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದಾರೆ.
ಶರ್ವಾನಂದ್ ಮದುವೆಗೆ ರಾಮ್ ಚರಣ್ ಮತ್ತು ಉಪಾಸನಾ ಹಾಜರಾಗುವ ಸಾಧ್ಯತೆಯಿದೆ. ಚಿರಂಜೀವಿ ಕೂಡ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದರಿಂದ, ಅವರು ಮದುವೆಗೆ ಅತಿಥಿಗಳಾಗಿ ಬರುವ ಸಾಧ್ಯತೆಯಿದೆ.
ಇದನ್ನೂ ಓದಿ: Taraka Ratna: ʻಯುವ ಧ್ವನಿʼ ಪಾದಯಾತ್ರೆ ವೇಳೆ ಕುಸಿದು ಬಿದ್ದ ನಟ ನಂದಮೂರಿ ತಾರಕ ರತ್ನ; ಆಸ್ಪತ್ರೆಗೆ ದಾಖಲು
ಶರ್ವಾನಂದ್ ತಮ್ಮ 35ನೇ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀರಾಮ್ ಆದಿತ್ಯ ನಿರ್ದೇಶನ ಮಾಡುತ್ತಿರುವ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಈಗ ತಾನೇ 40 ದಿನಗಳ ಕಾಲ ಲಂಡನ್‌ನಲ್ಲಿ ಶೂಟಿಂಗ್ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಮದುವೆಗೂ ಮುನ್ನವೇ ಈ ಸಿನಿಮಾವನ್ನು ಮುಗಿಸಲು ನಿರ್ಧರಿಸಿದ್ದಾರೆ. ಈ ಸಿನಿಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.