ಮುಂಬೈ: ಬಾಲಿವುಡ್ ನಟ ಗೋವಿಂದ ಅವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಹಾಸ್ಯಮಯ ಪಾತ್ರದಿಂದ ಹಿಡಿದು, ಗಂಭೀರ ಪಾತ್ರದವರೆಗೆ ಎಲ್ಲ ರೀತಿಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡವರು ಅವರು. ನಟ ಗೋವಿಂದ ಅವರ ಬಗ್ಗೆ ನಟರಾದ ಸುನೀಲ್ ಶೆಟ್ಟಿ (Actor Suniel Shetty) ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: Allu Arjun: ನಟಿ ಭಾನುಶ್ರೀ ಮೆಹ್ರಾರನ್ನು ಬ್ಲಾಕ್ ಮಾಡಿದ ಅಲ್ಲು ಅರ್ಜುನ್; ಸ್ಪಷ್ಟನೆ ನೀಡಿದ ನಟಿ
ಹೌದು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಸುನೀಲ್ ಶೆಟ್ಟಿ ಅವರು ಗೋವಿಂದ ಅವರ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಗೋವಿಂದ ಹೆಚ್ಚಾಗಿ ಸಿನಿಮಾಗಳನ್ನು ಮಾಡುತ್ತಿಲ್ಲ ಎಂದು ಬೇಸರವನ್ನು ಹೊರಹಾಕಿದ್ದಾರೆ.
“ಗೋವಿಂದ ಹೆಚ್ಚು ಸಿನಿಮಾಗಳನ್ನು ಮಾಡುತ್ತಿಲ್ಲ ಎನ್ನುವ ವಿಚಾರ ನನಗೆ ಬೇಸರ ತಂದಿದೆ. ಅವರು ನಿಜಕ್ಕೂ ಒಬ್ಬ ಅತ್ಯುತ್ತಮ ನಟ. ಅವರು ಮತ್ತೆ ಸಿನಿಮಾಗಳಿಗೆ ಮರಳಬೇಕಿದೆ. ಈಗ ಸದ್ಯಕ್ಕೆ ಅವರು ಪ್ರತಿನಿತ್ಯ ಕೆಲಸ ಮಾಡುತ್ತಿಲ್ಲ. ಆದರೆ ಇನ್ನು ಮುಂದೆ ಅವರು ದಿನವೂ ಸಿನಿಮಾ ಕೆಲಸ ಮಾಡಬೇಕಿದೆ. ಅವರು ಹುಟ್ಟಿರುವುದೇ ಸಿನಿಮಾ ಮಾಡುವುದಕ್ಕೆ” ಎಂದು ನಟ ಸುನೀಲ್ ಶೆಟ್ಟಿ ಹೇಳಿದ್ದಾರೆ.
ಈ ಹಿಂದೆ ನಟ ರೋಹಿತ್ ಶೆಟ್ಟಿ ಕೂಡ ಇದೇ ರೀತಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. “ಗೋವಿಂದ ಅವರು ಸಿನಿಮಾಗಳನ್ನು ಮಾಡುವುದನ್ನು ನಿಲ್ಲಿಸದೇ ಇದ್ದಿದ್ದರೆ ಅವರು ಅತ್ಯಂತ ದೊಡ್ಡ ಸ್ಟಾರ್ ಆಗಿರುತ್ತಿದ್ದರು. ಅವರು ಮತ್ತು ಡೇವಿಡ್ ಧವನ್ ಸೇರಿಕೊಂಡು ಹತ್ತು ವರ್ಷಗಳ ಕಾಲ ಹಿಟ್ ಮೇಲೆ ಹಿಟ್ ಸಿನಿಮಾ ಕೊಟ್ಟಿದ್ದಾರೆ. ಶೋಲಾ ಔರ್ ಶಬ್ನಮ್, ಆಂಕೇ, ರಾಜಾ ಬಾಬು, ಜೋಡಿ ನಂ. 1, ಕೂಲಿ ನಂ. 1, ಹಸೀನಾ ಮಾನ್ ಜಾಯೇಗಿ ಅಂತಹ ಅತ್ಯದ್ಭುತ ಸಿನಿಮಾಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಈಗ ಗೋವಿಂದ ಸುಮ್ಮನಾಗಿಬಿಟ್ಟಿದ್ದಾರೆ” ಎಂದು ರೋಹಿತ್ ಹೇಳಿದ್ದರು.
ಇದನ್ನೂ ಓದಿ: Sunil Shetty | 60 ದಾಟಿದರೂ ಚಿರತಾರುಣ್ಯದ ಸುನಿಲ್ ಶೆಟ್ಟಿ ಫಿಟ್‌ನೆಸ್ ಮಂತ್ರ ಇದು!
ಸುನಿಲ್ ಶೆಟ್ಟಿ ಮತ್ತು ಗೋವಿಂದ ಅವರು 2008ರಲ್ಲಿ ಲೂಟ್ ಸಿನಿಮಾದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಆ ಸಿನಿಮಾ ವೇಳೆ ಗೋವಿಂದ ಅವರು ಹೆಚ್ಚು ತೂಕವನ್ನೂ ಇಳಿಸಿಕೊಂಡಿದ್ದರು. ಅದಕ್ಕೆ ಕಾರಣ ಸುನಿಲ್ ಎಂದೂ ಹೇಳಿದ್ದರು. “ಬ್ಯಾಂಕಾಕ್‌ನಲ್ಲಿ ಚಿತ್ರೀಕರಣವಾಗುವಾಗ ಸುನಿಲ್ ನನಗೆ ಕೊಬ್ಬು ರಹಿತ, ಎಣ್ಣೆ ರಹಿತ ಖಾದ್ಯಗಳನ್ನು ಮಾತ್ರವೇ ತಿನ್ನಿಸಿ ತೂಕ ಕಡಿಮೆ ಮಾಡಿಸಿದ” ಎಂದೂ ಅವರು ಹೇಳಿಕೊಂಡಿದ್ದರು. ಗೋವಿಂದ ಅವರು ಕೊನೆಯದಾಗಿ 2019ರಲ್ಲಿ ಬಿಡುಗಡೆಯಾದ ರಂಗೀಲಾ ರಾಜಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.