Site icon Vistara News

Actor Suriya: ಕಾಲಿವುಡ್‌ ನಟ ಸೂರ್ಯ ಸಿನಿಮಾಗಾಗಿ ಈ ಕನ್ನಡ   ಸ್ಟಾರ್ ಹೀರೋಗೆ ಬಂದಿತ್ತು ಆಫರ್‌!

Actor Suriya Kannada star hero got an offer for Kollywood movie!

ಬೆಂಗಳೂರು:   ಕಾಲಿವುಡ್‌ ನಟ ಸೂರ್ಯ (Actor Suriya) ಜನುಮದಿನದಂದು ಸೂರ್ಯ 44 ಸಿನಿಮಾ ಪ್ರೋಮೊ ಹಂಚಿಕೊಂಡಿತ್ತು. ಪ್ರೋಮೊದಲ್ಲಿ ಗ್ಯಾಂಗ್‌ಸ್ಟರ್ ಆಗಿ ಮಿಂಚಿದ್ದರು ಸೂರ್ಯ. ಇದಕ್ಕೂ ಮೊದಲೇ ಸೂರ್ಯ ಅವರ ಫಸ್ಟ್‌ ಲುಕ್‌ ಕೂಡ ಔಟ್‌ ಆಗಿತ್ತು. ಕಾರ್ತಿಕ್ ಸುಬ್ಬರಾಜು ಅವರು ಈ ಸಿನಿಮಾನ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಎಂದರೆ ಕನ್ನಡದ ಸ್ಟಾರ್ ಹೀರೋಗೆ ಈ ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ಬಂದಿತ್ತು. ಆದರೆ, ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರು ಸಿನಿಮಾ ಫೈನಲ್ ಮಾಡಕು ಆಗಿಲ್ಲ ಎಂದು ವರದಿಯಾಗಿದೆ. ಅವರು ಬೇರಾರೂ ಅಲ್ಲ ನಟ ರಾಕ್ಷಸ ಡಾಲಿ ಧನಂಜಯ್.

ಧನಂಜಯ್‌ ಅವರು ಅಲ್ಲು ಸರ್ಜುನ್‌ ನಟನೆಯ ಪುಷ್ಪ ಸಿನಿಮಾದಲ್ಲಿ ಮಿಂಚಿದ್ದರು.  ‘ಪುಷ್ಪ’ ಚಿತ್ರದಲ್ಲಿ ಜಾಲಿ ರೆಡ್ಡಿ ಹೆಸರಿನ ಪಾತ್ರದಲ್ಲಿ ಧನಂಜಯ್ ಅವರು ಕಾಣಿಸಿಕೊಂಡಿದ್ದರು.  ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಯಶಸ್ಸು ಸಿಕ್ಕಿರಲಿಲ್ಲ. ‘ಟಗರು’ ಸಿನಿಮಾ ಬಳಿಕ ಮತ್ತೆ ಹೆಸರು ಗಳಿಸಿದರು. ‘ಡಾಲಿ’ ಎಂದೇ ಅವರು ಫೇಮಸ್ ಆದರು. ಹೀರೋ ಹಾಗೂ ವಿಲನ್ ಆಗಿಯೂ ಮಿಂಚಿದರು. ಇದೀಗ ತಮಿಳು ಚಿತ್ರರಂಗದಿಂದ ಬಂದ ಆಫರ್ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: Actor Suriya: ಬರ್ತ್‌ಡೇ ದಿನವೇ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ನಟ ಸೂರ್ಯ!

ʻʻಕಾರ್ತಿಕ್ ಸುಬ್ಬರಾಜು ಅವರು ‘ಸೂರ್ಯ 44’ ಸಿನಿಮಾದಲ್ಲಿ ನಟಿಸೋಕೆ ಕರೆದರು. ಆದರೆ, ಡೇಟ್ಸ್​ ಮ್ಯಾನೇಜ್ ಮಾಡೋಕೆ ಆಗಿಲ್ಲ. ನನಗೆ ಆ ಸಿನಿಮಾ ಮಾಡಬೇಕಿತ್ತು. ಸೂರ್ಯ ಹಾಗೂ ಕಾರ್ತಿಕ್ ಸುಬ್ಬರಾಜು ಜೊತೆ ಕೆಲಸ ಮಾಡಬೇಕು ಎನ್ನುವ ಹಂಬಲ ಇತ್ತುʼʼ ಎದಿದ್ದರು.

ಇನ್ನು ಸೂರ್ಯ 44 ಸಿನಿಮಾ ವಿಚಾರಕ್ಕೆ ಬಂದರೆ ಸೂರ್ಯ ಅವರ ರೆಟ್ರೋ ಲುಕ್‌ ಈಗಾಗಲೇ ಅನಾವರಣಗೊಂಡಿತ್ತು. ಜಯರಾಮ್, ಕರುಣಾಕರನ್ ಮತ್ತು ಜೋಜು ಜಾರ್ಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜುಲೈನಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸುಮಾರು ಒಂದು ತಿಂಗಳ ಕಾಲ ಚಿತ್ರೀಕರಣದ ನಂತರ, ಪೂಜಾ ಅವರು ಚಿತ್ರದ ಮೊದಲ ಶೆಡ್ಯೂಲ್ ಅನ್ನು ಪೂರ್ಣಗೊಳಿಸಿದಾಗ ಪೋಸ್ಟ್ ಅನ್ನು ಹಂಚಿಕೊಂಡಿದ್ದರು.

ಈ ಸಿನಿಮಾವನ್ನು ತಮಿಳಿನ ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಲಿದ್ದಾರೆ. ಸೂಪರ್ ಹಿಟ್ ಸಿನಿಮಾಗಳಾದ ‘ಜಿಗರ್​ಥಂಡಾ’, ರಜನೀಕಾಂತ್ ನಟನೆಯ ‘ಪೆಟ್ಟಾ’, ‘ಜಿಗರ್ ಥಂಡಾ ಡಬಲ್ ಎಕ್ಸ್’, ‘ಮಹಾನ್’ ಇನ್ನಿತರೆ ಸಿನಿಮಾಗಳನ್ನು ಇವರು ನಿರ್ದೇಶಿಸಿದ್ದಾರೆ.2022 ರಲ್ಲಿ ಬಿಡುಗಡೆ ಆದ ‘ಆಚಾರ್ಯ’ ಸಿನಿಮಾ ಬಳಿಕ ಪೂಜಾ ಹೆಗ್ಡೆ ಯಾವುದೇ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಿರಲಿಲ್ಲ. ಇದೀಗ ‘ಸೂರ್ಯ 44’ ಸಿನಿಮಾ ಮೂಲಕ ಪೂಜಾ ಕಮ್ ಬ್ಯಾಕ್ ಮಾಡಿದ್ದಾರೆ

Exit mobile version