Site icon Vistara News

Actor Suriya: ಮತ್ತೆ ಒಂದಾಯ್ತು ‘ಸೂರರೈ ಪೋಟ್ರು’ ತಂಡ; ಸೂರ್ಯ 43ನೇ ಸಿನಿಮಾಗೆ ಸುಧಾ ಕೊಂಗರ ನಿರ್ದೇಶನ

suriya

suriya

ಚೆನ್ನೈ: 2020ರಲ್ಲಿ ತೆರೆಕಂಡ ತಮಿಳು ಚಿತ್ರ ʼಸೂರರೈ ಪೋಟ್ರುʼ (Soorarai Pottru) ಯಾರು ತಾನೇ ಮರೆಯಲು ಸಾಧ್ಯ? ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಆಧಾರಿತ ಈ ಸಿನಿಮಾದಲ್ಲಿ ಕಾಲಿವುಡ್‌ ಸೂಪರ್‌ ಸ್ಟಾರ್‌ ಸೂರ್ಯ (Actor Suriya) ಮನೋಜ್ಞ ಅಭಿನಯ ನೀಡಿ ಗಮನ ಸೆಳೆದಿದ್ದರು. ಸುಧಾ ಕೊಂಗರ ನಿರ್ದೇಶನದ ಈ ಚಿತ್ರ ಮೋಡಿ ಮಾಡಿತ್ತು. ಇದೀಗ ಈ ಜೋಡಿ ಮತ್ತೆ ಒಂದಾಗುತ್ತಿದೆ. ಸೂರ್ಯ ನಟಿಸಲಿರುವ 43ನೇ ಸಿನಿಮಾಗೆ ಸುಧಾ ಕೊಂಗರ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ಹಿಟ್‌ ಕಾಂಬಿನೇಷನ್‌ನ ಮತ್ತೊಂದು ಚಿತ್ರಕ್ಕಾಗಿ ಕುತೂಹಲದಿಂದ ಕಾಯುವಂತಾಗಿದೆ.

ʼಸೂರರೈ ಪೋಟ್ರುʼ ಸಿನಿಮಾ ಪ್ರೇಕ್ಷಕರು ಹಾಗೂ ವಿಮರ್ಶಕರಿಂದಲೂ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಆಸ್ಕರ್ ರೇಸ್‌ಗೂ ಇಳಿದಿದ್ದ ಈ ಚಿತ್ರ ಹಲವು ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಬಾಚಿಕೊಂಡಿತ್ತು. ಸೂರ್ಯ ಅತ್ಯುತ್ತಮ ನಟ, ಅಪರ್ಣಾ ಬಾಲಮುರಳಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಅಲ್ಲದೆ ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕೆ ಜಿ.ವಿ.ಪ್ರಕಾಶ್‌ ಕುಮಾರ್‌ಗೆ ನ್ಯಾಶನಲ್‌ ಅವಾರ್ಡ್‌ ಬಂದಿತ್ತು. ಅತ್ಯುತ್ತಮ ಚಿತ್ರವಾಗಿಯೂ ಆಯ್ಕೆಯಾಗಿತ್ತು. ಈ ತಂಡ ಹೊಸ ಪ್ರಾಜೆಕ್ಟ್‌ಗೆ ಮತ್ತೆ ಒಂದಾಗಿದೆ.

ಸೂರ್ಯ ಹಾಗೂ ಸುಧಾ ಕೊಂಗರ ಹೊಸ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಮಾಲಿವುಡ್ ಸ್ಟಾರ್‌, ಬಹುಭಾಷಾ ನಟ ದುಲ್ಕರ್ ಸಲ್ಮಾನ್, ನಜ್ರಿಯಾ ಫಹದ್ ಹಾಗೂ ವಿಜಯ್ ವರ್ಮಾ ಈ ಚಿತ್ರದಲ್ಲಿ ನಟಿಸಲಿದ್ದಾರೆ. ತಾತ್ಕಾಲಿಕವಾಗಿ #Suriya43 ಎಂದು ಟೈಟಲ್ ಇಡಲಾಗಿದೆ. ಸೂರ್ಯ ಒಡೆತನದ 2D ಎಂಟರ್‌ಟೈನ್‌ಮೆಂಟ್‌ನಡಿ ಜ್ಯೋತಿಕಾ, ಸೂರ್ಯ ಮತ್ತು ರಾಜಶೇಖರ್ ಕರ್ಪೂರಸುಂದರಪಾಂಡಿಯನ್ ಇದನ್ನು ನಿರ್ಮಿಸಲಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಜಿ.ವಿ.ಪ್ರಕಾಶ್ ಸಂಗೀತ ನಿರ್ದೇಶಿಸ್ತಿರುವ 100 ಚಿತ್ರ ಇದಾಗಿರೋದು ಮತ್ತೊಂದು ವಿಶೇಷ.

ಸದ್ಯ ಸೂರ್ಯ ʼಕಂಗುವಾʼ, ʼವಾಡಿವಾಸಲ್‌ʼ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ʼಸೂರರೈ ಪೋಟ್ರುʼ ಹಿಂದಿಗೆ ರಿಮೇಕ್‌ ಆಗುತ್ತಿದ್ದು, ಅದರಲ್ಲಿ ಅತಿಥಿ ಪಾತ್ರ ನಿರ್ವಹಿಸುತ್ತಿದ್ದಾರೆ. ಅಕ್ಷಯ್‌ ಕುಮಾರ್‌ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಮುಂದಿನ ವರ್ಷ ಫೆಬ್ರವರಿಯಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಹಿಂದಿಯಲ್ಲೂ ಸುಧಾ ಕೊಂಗರ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಇದನ್ನೂ ಓದಿ: Koffee With Karan 8: 5 ವರ್ಷದ ಬಳಿಕ ದೀಪಿಕಾ-ರಣವೀರ್‌ ಮದುವೆ ವಿಡಿಯೊ ಔಟ್‌; ಕರಣ್ ಜೋಹರ್ ಎಮೋಷನಲ್!

ಪ್ರಸ್ತುತ ಸೂರ್ಯ ʼಕಂಗುವಾʼ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಶಿವ ನಿರ್ದೇಶನದ ಈ ಸಿನಿಮಾ 300–350 ಕೋಟಿ ರೂ.ಗಳಲ್ಲಿ ತಯಾರಾಗಲಿದ್ದು, ನಿರೀಕ್ಷೆ ಮೂಡಿಸಿದೆ. ವಿಶೇಷ ಎಂದರೆ ಈ ಚಿತ್ರದಲ್ಲಿ ಸೂರ್ಯ 6 ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್‌ ನಟಿ ದಿಶಾ ಪಠಾಣಿ ನಾಯಕಿಯಾಗಿ ನಟಿಸಿದ್ದು, ಬಾಬಿ ಡಿಯೋಲ್‌, ಯೋಗಿ ಬಾಬು ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಸೂರ್ಯ ಭರ್ಜರಿ ಆ್ಯಕ್ಷನ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. 2024ರ ಆರಂಭದಲ್ಲಿ ಇದು ಬಿಡುಗಡೆಯಾಗುವ ಸಾಧ್ಯತೆ ಇದೆ. 3Dಯಲ್ಲೂ ಈ ಚಿತ್ರ ಮೂಡಿ ಬರಲಿದೆ. ಸದ್ಯ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

Exit mobile version