ಬೆಂಗಳೂರು: ಜ್ಯುವೆಲ್ಸ್ ಆಫ್ ಇಂಡಿಯಾ ಪ್ರದರ್ಶನಕ್ಕೆ ಶೋಸ್ಟಾಪರ್ ಮಾಡಲು ನಟ ತಮನ್ನಾ ಭಾಟಿಯಾ (Tamannaah Bhatia) ಇತ್ತೀಚೆಗೆ ಗಾರ್ಡನ್ ಸಿಟಿಗೆ ಬೆಂಗಳೂರಿಗೆ ಭೇಟಿ ನೀಡಿದ್ದರು. “ಬೆಂಗಳೂರು ಒಂದು ಸುಂದರ ನಗರ ಮತ್ತು ಅದಕ್ಕೆ ತುಂಬ ಶಕ್ತಿ ಇದೆ. ನಾನು ಇಲ್ಲಿಗೆ ಬರಲು ತುಂಬ ಇಷ್ಟಪಡುತ್ತೇನೆ. ನಾನು ಇಲ್ಲಿ ನನ್ನ ಅಭಿಮಾನಿಗಳನ್ನು ಭೇಟಿ ಮಾಡಿದಾಗ ಮತ್ತು ಅವರೊಂದಿಗೆ ಸಂವಹನ ನಡೆಸಿದಾಗ ನನಗೆ ಸ್ಫೂರ್ತಿ ಬರುತ್ತದೆʼʼ ಎಂದು ಹೇಳಿದರು.
ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿರುವ ತಮನ್ನಾ ಸ್ಯಾಂಡಲ್ವುಡ್ನಲ್ಲಿಯೂ ಬಣ್ಣ ಹಚ್ಚಬೇಕೆಂಬ ಆಸೆ ಇದೆ ಎಂದರು. “ಇಂದು, ಕನ್ನಡ ಚಲನಚಿತ್ರಗಳು ಚಿತ್ರರಂಗದ ವಿಷಯದಲ್ಲಿ ಎಲ್ಲ ಅಡೆತಡೆಗಳನ್ನು ಮುರಿದಿವೆ. ಜಾಗತಿಕವಾಗಿ ಹೆಮ್ಮೆ ಪಡೆಯುತ್ತಿದೆ. ಭಾರತದಲ್ಲಿ ನಾವು ನೋಡುತ್ತಿರುವ ಕೆಲವು ದೊಡ್ಡ ಚಲನಚಿತ್ರಗಳು ಈ ಚಿತ್ರರಂಗದಿಂದ ಬರುತ್ತಿದೆ. ಕನ್ನಡ ಚಿತ್ರಗಳು ವೆಸ್ಟರ್ಟ್ ಅವರನ್ನು ಕಾಪಿ ಮಾಡುತ್ತಿಲ್ಲ ಎಂಬ ಅಂಶವನ್ನು ನಾನು ಇಷ್ಟಪಡುತ್ತೇನೆ. ಇಲ್ಲಿಂದ ಬರುವ ಕಥೆಗಳು ಅತ್ಯಂತ ಸ್ಥಳೀಯವಾಗಿ ಮತ್ತು ಇಲ್ಲಿನ ಜನರ ಹೃದಯಕ್ಕೆ ಹತ್ತಿರವಾಗಿವೆ. ಅದು ಅವರನ್ನು ತುಂಬ ಯಶಸ್ವಿಯಾಗುವಂತೆ ಮಾಡುತ್ತದೆ. ನಾನು ಕೂಡ ಇಲ್ಲೇ ಸಿನಿಮಾ ಮಾಡುವ ಭರವಸೆ ಇದೆ’ ಎಂದರು.
ಇದನ್ನೂ ಓದಿ: Tamannaah Bhatia: ಹಿಂದಿ ವರ್ಷನ್ ʻಕಾವಾಲಾʼ ಸಾಂಗ್ಗೆ ಸ್ಟೆಪ್ಸ್ ಹಾಕಿದ ಮಿಲ್ಕಿ ಬ್ಯೂಟಿ ತಮನ್ನಾ!
Tammy inaugurated jewels of India exhibition in Bangalore today 🖤😍#Tamannaah #TamannaahBhatia@tamannaahspeaks pic.twitter.com/9OHUUW3vO8
— Trends Tamannaah (@tamannaahspeakh) October 27, 2023
ತಮನ್ನಾ ಭಾಟಿಯಾ ಇತ್ತೀಚೆಗೆ ತೆಲುಗು ಚಿತ್ರ ಭೋಲಾ ಶಂಕರ್, ಹಿಂದಿ ಒಟಿಟಿಯಲ್ಲಿ ಲಸ್ಟ್ ಸ್ಟೋರೀಸ್ 2 ಮತ್ತು ರಜನಿಕಾಂತ್ ಅಭಿನಯದ ತಮಿಳು ಚಿತ್ರ ಜೈಲರ್ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಭಾಟಿಯಾ ಹಲವಾರು OTT ಶೋಗಳನ್ನು ಸಹ ಮಾಡಿದ್ದಾರೆ. ಆಖ್ರಿ ಸಚ್ ಮತ್ತು ಜೀ ಕರ್ದಾ, ಎರಡೂ ಹಿಂದಿಯಲ್ಲಿ ಬಂದಿದ್ದವು. ಶೀಘ್ರದಲ್ಲೇ ಹಿಂದಿ ಸಿನಿಮಾ ವೇದಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ ಚಿತ್ರೀಕರಣದಲ್ಲಿದೆ ಎಂದು ವರದಿಯಾಗಿದೆ.