ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ (Actor Upendra) ಅವರ ‘ಯುಐ’ ಸಿನಿಮಾ (UI Cinema) ಕೊನೆಗೂ ಸಿನಿ ರಸಿಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಆರಂಭದಲ್ಲಿ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು ಹೊರತುಪಡಿಸಿದರೆ ಮತ್ತಾವುದೇ ಅಪ್ಡೇಟ್ ಸಿಕ್ಕಿರಲಿಲ್ಲ. ಫಸ್ಟ್ ಲುಕ್ ಪೋಸ್ಟರ್ ( First Look Of UI Poster) ರಿಲೀಸ್ (UI Teaser) ಮಾಡುವುದಕ್ಕೆ ಉಪೇಂದ್ರ ಆಸಕ್ತಿ ತೋರಿಸಿರಲಿಲ್ಲ. ಆದರೀಗ ಉಪೇಂದ್ರ ಕೊನೆಗೂ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ್ದಾರೆ. ‘ಯುಐ’ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದ್ದಾರೆ. ಮೊಬೈಲ್‌ನಲ್ಲಿ ಟೀಸರ್ ನೋಡೋದಲ್ಲ, ನೇರವಾಗಿ ಚಿತ್ರಮಂದಿರದಲ್ಲಿ ಬಂದು ನೋಡಿ ಎಂದು ವಿಡಿಯೊ ಮೂಲಕ ಹೇಳಿದ್ದಾರೆ.
ಅಭಿಮಾನಿಗಳ ಸಂಭ್ರಮಾಚರಣೆ ದಿನ ಅಂದರೆ ಇದೇ ಸೆಪ್ಟೆಂಬರ್ 18ರಂದು ಊರ್ವಶಿ ಥಿಯೇಟರ್‌ನಲ್ಲಿ ಮಧ್ಯಾಹ್ನ 3 ಗಂಟೆಗೆ ಯುಐ ಸಿನಿಮಾದ ಟೀಸರ್ ಅನಾವರಣಗೊಳ್ಳಿದೆ. ಆಗಸ್ಟ್ 28ರಂದು ‘ಯುಐ’ ಫಸ್ಟ್ ಲುಕ್ ರಿಲೀಸ್ ಆಗಲಿದೆ ಎಂದು ಉಪೇಂದ್ರ ಅವರು ಹೇಳಿಕೊಂಡಿದ್ದರು. ಆದರೆ, ಫ್ಯಾನ್ಸ್‌ಗೆ ನಿರಾಸೆ ಆಗಿದೆ. ಫಸ್ಟ್ ಲುಕ್ ಏಕೆ ರಿಲೀಸ್ ಮಾಡಬೇಕು ಎಂದು ಉಪ್ಪಿ ಪ್ರಶ್ನೆ ಮಾಡಿದ್ದರು. 1 ನಿಮಿಷದ ಪ್ರಮೋಷನ್ ಬಗ್ಗೆ ಉಪ್ಪಿ ಆಸಕ್ತಿ ತೋರಿಸಿಲ್ಲ. ಬರೀ ಸುಳ್ಳಿಗೆ ಮಾತ್ರ ಹೈಪ್ ಮಾಡಬೇಕು, ಸಿನಿಮಾಗಲ್ಲ ಎಂದು ರಿಯಲ್ ಸ್ಟಾರ್ ಉಪೇಂದ್ರ ಹೇಳಿಕೊಂಡಿದ್ದರು.
ಇದುವರೆಗೂ ಉಪ್ಪಿ ನಿರ್ದೇಶಿಸಿದ ಸಿನಿಮಾಗಳಲ್ಲೇ ಹೆಚ್ಚಿನ ಬಜೆಟ್ ಸಿನಿಮಾದಾಗಿದೆ ಈ UI. ಇದೀಗ ಈ ಸಿನಿಮಾ ಬಜೆಟ್ ಸುಮಾರು 100 ಕೋಟಿ ರೂ. ಎಂದು ವರದಿಯಾಗಿದೆ. ವರ್ಷಗಳ ನಂತರ ನಿರ್ದೇಶನದತ್ತ ಮುಖ ಮಾಡಿರುವ ಉಪ್ಪಿ ಜತೆಗೆ ಈ ಚಿತ್ರದಲ್ಲಿ ಯುವ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಉಪ್ಪಿ ಕ್ಯಾಪ್ ಹಾಕಿ, ಮೈಕ್ ಹಿಡಿದು ನಿರ್ದೇಶನಕ್ಕೆ ಇಳಿದಿರುವುದರಿಂದ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇತಿಹಾಸ ಮರುಕಳಿಸಲಿದೆಯಾ ಎಂದು ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.
ʻತರ್ಲೆ ನನ್ಮಗʼ, ʻಆಪರೇಷನ್ ಅಂತʼ, ʻಶ್ʼ..!, ʻಓಂʼ, ʻಉಪ್ಪಿ-2ʼ, ʻಸೂಪರ್ʼ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಉಪೇಂದ್ರ ನಿರ್ದೇಶನ ಮಾಡಿದ್ದಾರೆ. ʻಉಪ್ಪಿ 2ʼ ನಂತರ ಈ ʼಬುದ್ಧಿವಂತʼನ ನಿರ್ದೇಶನದಲ್ಲಿ ಯಾವ ಸಿನಿಮಾ ಕೂಡ ತೆರೆಗೆ ಬಂದಿರಲಿಲ್ಲ.
ಇದನ್ನೂ ಓದಿ: Actor Upendra: ಪ್ರಮೋಷನ್‌ಗೆ ಆಸಕ್ತಿ ತೋರಿಸದ ಉಪ್ಪಿ; ರಿವೀಲ್ ಆಗಲಿಲ್ಲ ‘ಯುಐ’ ಫಸ್ಟ್ ಲುಕ್!
ವಿಡಿಯೊ ವೈರಲ್
ಈ ಸಿನಿಮಾದಲ್ಲಿ 3ಡಿ ಬಾಡಿ ಸ್ಕ್ಯಾನ್ ಬಳಸಿದ್ದಾರೆ. ಸುಮಾರು 200 ಕ್ಯಾಮೆರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿರುವುದು ಏಪ್ಯಾದಲ್ಲಿಯೇ ಮೊದಲು ಎನ್ನಲಾಗಿದೆ. ʻಅವತಾರ್ 2′ ಸಿನಿಮಾಗೆ ಈ ತಂತ್ರಜ್ಞಾನವನ್ನು ಬಳಸಲಾಗಿತ್ತು. ಇಷ್ಟೇ ಅಲ್ಲದೆ ಸುಮಾರು 14 ಸಾವಿರ ವಿಎಫ್‌ಎಕ್ಸ್ ಶಾಟ್ಸ್ ಉಪೇಂದ್ರ ಅವರ ಈ ಹೊಸ ಚಿತ್ರಕ್ಕೆ ಬಳಸಲಾಗಿದೆಯಂತೆ.
ಸದ್ಯ ಕನ್ನಡದಲ್ಲಿ ನಿರ್ಮಾಣ ಆಗುತ್ತಿರುವ ಹೈ ಬಜೆಟ್ ಸಿನಿಮಾಗಳಲ್ಲಿ ‘UI’ ಕೂಡ ಒಂದು. ಸಿನಿಪ್ರಿಯರು ಈ ಸಿನಿಮಾವನ್ನು ಒಟಿಟಿಗಿಂತ ಮೊದಲು ಥಿಯೇಟರ್‌ನಲ್ಲೇ ನೋಡಬೇಕೆಂದು ಉಪ್ಪಿ ಆಸೆ ಪಟ್ಟು ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಟಗರು, ಸಲಗ ಖ್ಯಾತಿಯ ಕೆ.ಪಿ. ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆಯವರು ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದಾರೆ.