ಬೆಂಗಳೂರು: ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ (Actor Upendra) ಅವರ ‘ಯುಐ’ ಸಿನಿಮಾ (UI Cinema) ಚಿತ್ರತಂಡ ಪ್ರಮೋಷನಲ್ ವಿಡಿಯೊ ಹಂಚಿಕೊಂಡಿದೆ. ಆರಂಭದಲ್ಲಿ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು ಹೊರತುಪಡಿಸಿದರೆ ಮತ್ತಾವುದೇ ಅಪ್ಡೇಟ್ ಸಿಕ್ಕಿಲ್ಲ. ಫಸ್ಟ್ ಲುಕ್ ಪೋಸ್ಟರ್ ( First Look Of UI Poster) ರಿಲೀಸ್ ಮಾಡುವುದಕ್ಕೆ ಉಪೇಂದ್ರ ಆಸಕ್ತಿ ತೋರಿಸಿಲ್ಲ. ಇದು ಕೂಡ ಪ್ರಮೋಷನಲ್ ಗಿಮಿಕ್ ಎನ್ನಲಾಗುತ್ತಿದೆ. `ಸುಳ್ಳಿಗೆ ಹೈಪ್ ತರಬೇಕು, ಸತ್ಯಕ್ಕೆ ತಾನಾಗೇ ಹೈಪ್ ಬರುತ್ತದೆ”ಎಂದು ರಿಯಲ್ ಸ್ಟಾರ್ ಹಂಚಿಕೊಂಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.
ಆಗಸ್ಟ್ 28ರಂದು ‘ಯುಐ’ ಫಸ್ಟ್ ಲುಕ್ ರಿಲೀಸ್ ಆಗಲಿದೆ ಎಂದು ಉಪೇಂದ್ರ ಅವರು ಹೇಳಿಕೊಂಡಿದ್ದರು. ಆದರೆ, ಫ್ಯಾನ್ಸ್ಗೆ ನಿರಾಸೆ ಆಗಿದೆ. ಫಸ್ಟ್ ಲುಕ್ ಏಕೆ ರಿಲೀಸ್ ಮಾಡಬೇಕು ಎಂದು ಉಪ್ಪಿ ಪ್ರಶ್ನೆ ಮಾಡಿದ್ದಾರೆ. 1 ನಿಮಿಷದ ಪ್ರಮೋಷನ್ ಬಗ್ಗೆ ಉಪ್ಪಿ ಆಸಕ್ತಿ ತೋರಿಸಿಲ್ಲ. ಬರೀ ಸುಳ್ಳಿಗೆ ಮಾತ್ರ ಹೈಪ್ ಮಾಡಬೇಕು ಸಿನಿಮಾಗಲ್ಲ ಎಂದು ರಿಯಲ್ ಸ್ಟಾರ್ ಉಪೇಂದ್ರ ಹೇಳಿಕೊಂಡಿದ್ದಾರೆ. ಸಿನಿಮಾ ಸೆಟ್ಟೇರಿ ಒಂದು ಒಂದೂವರೆ ವರ್ಷ ಕಳೆದಿದೆ. ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ ಬಿಟ್ಟಿಲ್ಲ. ಜನರು ಬೈಯುತ್ತಿದ್ದಾರೆ’ ಎನ್ನುತ್ತಾರೆ ಶ್ರೀಕಾಂತ್. ಇದಕ್ಕೆ ಉಪ್ಪಿ, ‘ಫಸ್ಟ್ ಲುಕ್ ಅಥವಾ ಟೀಸರ್ ಬಿಡುವ ಅವಶ್ಯಕತೆ ಇದೆಯೇ? ಒಂದು ನಿಮಿಷದ ಟೀಸರ್ ನೋಡಿ ಜನರು ನನ್ನ ಸಿನಿಮಾ ಹೇಗಿದೆ ಎಂದು ಹೇಳುತ್ತಾರಾ? ಅಷ್ಟಿದ್ದರೇ ನಾನು ಸಿನಿಮಾ ಯಾಕೆ ಮಾಡುತ್ತಿದ್ದೇ? ಸುಳ್ಳಿಗೆ ಹೈಪ್ ತರಬೇಕು, ಸತ್ಯಕ್ಕೆ ತಾನಾಗೇ ಹೈಪ್ ಬರುತ್ತದೆ’ ಎಂದಿದ್ದಾರೆ ಉಪೇಂದ್ರ.
ಇದನ್ನೂ ಓದಿ: Actor Upendra : 2ನೇ FIRಗೂ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ; ಉಪೇಂದ್ರಗೆ ಬಿಗ್ ರಿಲೀಫ್
ಇದುವರೆಗೂ ಉಪ್ಪಿ ನಿರ್ದೇಶಿಸಿದ ಸಿನಿಮಾಗಳಲ್ಲೇ ಹೆಚ್ಚಿನ ಬಜೆಟ್ ಸಿನಿಮಾದಾಗಿದೆ ಈ UI. ಇದೀಗ ಈ ಸಿನಿಮಾ ಬಜೆಟ್ ಸುಮಾರು 100 ಕೋಟಿ ರೂ. ಎಂದು ವರದಿಗಳಾಗಿವೆ. ವರ್ಷಗಳ ನಂತರ ನಿರ್ದೇಶನದತ್ತ ಮುಖ ಮಾಡಿರುವ ಉಪ್ಪಿ, ಜತೆಗೆ ಈ ಚಿತ್ರದಲ್ಲಿ ಯುವ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಉಪ್ಪಿ ಕ್ಯಾಪ್ ಹಾಕಿ, ಮೈಕ್ ಹಿಡಿದು ನಿರ್ದೇಶನಕ್ಕೆ ಇಳಿದಿದ್ದು, ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಇತಿಹಾಸ ಮರುಕಳಿಸಲಿದೆಯಾ ಎಂದು ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.
ʻತರ್ಲೆ ನನ್ಮಗʼ, ʻಆಪರೇಷನ್ ಅಂತʼ, ʻಶ್ʼ..!, ʻಓಂʼ, ʻಉಪ್ಪಿ-2ʼ, ʻಸೂಪರ್ʼ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ʻಉಪ್ಪಿ 2ʼ ನಂತರ ಬುದ್ಧಿವಂತನ ನಿರ್ದೇಶನದಲ್ಲಿ ಯಾವ ಸಿನಿಮಾ ಕೂಡ ತೆರೆಗೆ ಬರಲಿಲ್ಲ.
ಈ ಸಿನಿಮಾದಲ್ಲಿ 3ಡಿ ಬಾಡಿ ಸ್ಕ್ಯಾನ್ ಬಳಸಿದ್ದಾರೆ. ಸುಮಾರು 200 ಕ್ಯಾಮೆರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ್ದು ಏಪ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ʻಅವತಾರ್ 2′ ಸಿನಿಮಾಗೆ ಈ ತಂತ್ರಜ್ಞಾನವನ್ನು ಬಳಸಲಾಗಿತ್ತು. ಇಷ್ಟೇ ಅಲ್ಲದೆ ಸುಮಾರು 14 ಸಾವಿರ ವಿಎಫ್‌ಎಕ್ಸ್ ಶಾಟ್ಸ್ ಬಳಸಲಾಗಿದೆ.
ಇದನ್ನೂ ಓದಿ: Actor Upendra: ಉಪೇಂದ್ರ ವಿವಾದಿತ ಪದ ಬಳಕೆ ಹಿನ್ನೆಲೆ; ನಟ ಚೇತನ್ ಪೋಸ್ಟ್ ವೈರಲ್!
ಸದ್ಯ ಕನ್ನಡದಲ್ಲಿ ನಿರ್ಮಾಣ ಆಗುತ್ತಿರುವ ಹೈ ಬಜೆಟ್ ಸಿನಿಮಾಗಳಲ್ಲಿ ‘UI’ ಕೂಡ ಒಂದು. ತನ್ನ ಕನಸನ್ನು ಸಿನಿಪ್ರಿಯರು ಒಟಿಟಿಯಲ್ಲಿ ಅಲ್ಲದೆ ಥಿಯೇಟರ್‌ನಲ್ಲೇ ಸಿನಿಮಾ ನೋಡಬೇಕು ಅಂತ ಉಪ್ಪಿ ಆಸೆ ಪಟ್ಟು ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಟಗರು, ಸಲಗ ಖ್ಯಾತಿಯ ಕೆ.ಪಿ. ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆಯವರು ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದಾರೆ.