ಬೆಂಗಳೂರು: ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ (Actor Upendra) ಅವರ ‘ಯುಐ’ ಸಿನಿಮಾ ಚಿತ್ರೀಕರಣ ಮುಗಿದು ಇದೀಗ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿದೆ. ಕಳೆದ ವರ್ಷವಷ್ಟೇ ‘UI’ ಸಿನಿಮಾವನ್ನು ಅನೌನ್ಸ್ ಮಾಡುವುದಾಗಿ ಘೋಷಿಸಿದ್ದರು. ಇದೂವರೆಗೂ ಉಪ್ಪಿ ನಿರ್ದೇಶಿಸಿದ ಸಿನಿಮಾಗಳಲ್ಲೇ ಹೆಚ್ಚಿನ ಬಜೆಟ್ ಸಿನಿಮಾದಾಗಿದೆ. ಇದೀಗ ಈ ಸಿನಿಮಾ ಬಜೆಟ್ ಸುಮಾರು 100 ಕೋಟಿ ರೂ. ಎಂದು ವರದಿಗಳಾಗಿವೆ. ಸದ್ಯಕ್ಕೀಗ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಫೋಟೊಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವರ್ಷಗಳ ನಂತರ ನಿರ್ದೇಶನದತ್ತ ಮುಖ ಮಾಡಿರುವ ಉಪ್ಪಿ, ಜತೆಗೆ ಈ ಚಿತ್ರದಲ್ಲಿ ಯುವ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಉಪ್ಪಿ ಕ್ಯಾಪ್ ಹಾಕಿ, ಮೈಕ್ ಹಿಡಿದು ನಿರ್ದೇಶನಕ್ಕೆ ಇಳಿದಿದ್ದು, ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಇತಿಹಾಸ ಮರುಕಳಿಸಲಿದೆಯಾ ಎಂದು ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.
ʻತರ್ಲೆ ನನ್ಮಗʼ, ʻಆಪರೇಷನ್ ಅಂತʼ, ʻಶ್ʼ..!, ʻಓಂʼ, ʻಉಪ್ಪಿ-2ʼ, ʻಸೂಪರ್ʼ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ʻಉಪ್ಪಿ 2ʼ ನಂತರ ಬುದ್ಧಿವಂತನ ನಿರ್ದೇಶನದಲ್ಲಿ ಯಾವ ಸಿನಿಮಾ ಕೂಡ ತೆರೆಗೆ ಬರಲಿಲ್ಲ.
ಈ ಸಿನಿಮಾದಲ್ಲಿ 3ಡಿ ಬಾಡಿ ಸ್ಕ್ಯಾನ್ ಬಳಸಿದ್ದಾರೆ. ಸುಮಾರು 200 ಕ್ಯಾಮೆರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ್ದು ಏಪ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ʻಅವತಾರ್ 2′ ಸಿನಿಮಾಗೆ ಈ ತಂತ್ರಜ್ಞಾನವನ್ನು ಬಳಸಲಾಗಿತ್ತು. ಇಷ್ಟೇ ಅಲ್ಲದೆ ಸುಮಾರು 14 ಸಾವಿರ ವಿಎಫ್ಎಕ್ಸ್ ಶಾಟ್ಸ್ ಬಳಸಲಾಗಿದೆ.
ಇದನ್ನೂ ಓದಿ: Actor Upendra: ಉಪೇಂದ್ರರವರ ಸದಾಶಿವ ನಗರದಲ್ಲಿರುವ ಹೊಸ ಮನೆ ಹೇಗಿದೆ? ಇಲ್ಲಿವೆ ಫೋಟೊಗಳು!
#Uithemovie Edit⚡️ begins..
— Sreekanth KP (@kp_sreekanth) July 31, 2023
@nimmaupendra
@LahariFilm
@enterrtainers pic.twitter.com/smYjM2owpC
ಮೂಲಗಳ ಪ್ರಕಾರ, ಈ ಸಿನಿಮಾ 2023 ಕೊನೆಯಲ್ಲಿ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ. ಸದ್ಯ ಕನ್ನಡದಲ್ಲಿ ನಿರ್ಮಾಣ ಆಗುತ್ತಿರುವ ದುಬಾರಿ ಸಿನಿಮಾಗಳಲ್ಲಿ ‘UI’ ಕೂಡ ಒಂದು. ತನ್ನ ಕನಸನ್ನು ಸಿನಿಪ್ರಿಯರು ಒಟಿಟಿಯಲ್ಲಿ ಅಲ್ಲದೆ ಥಿಯೇಟರ್ನಲ್ಲೇ ಸಿನಿಮಾ ನೋಡಬೇಕು ಅಂತ ಉಪ್ಪಿ ಆಸೆ ಪಟ್ಟು ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯ ಎಡಿಟಿಂಗ್ ಹಂತದಲ್ಲಿದ್ದು, ಮುಂದಿನ ತಿಂಗಳಿಂದ ಪ್ರಚಾರ ಶುರು ಮಾಡುವ ಸಾಧ್ಯತೆಯಿದೆ.ಟಗರು, ಸಲಗ ಖ್ಯಾತಿಯ ಕೆ.ಪಿ. ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆಯವರು ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದಾರೆ.