ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ (Actor Upendra) ಅವರ ನಿರ್ದೇಶನದ UI ಟೀಸರ್ ಸೆ.18ರಂದು ಊರ್ವಶಿ ಥಿಯೇಟರ್‌ನಲ್ಲಿ ಅನಾವರಣಗೊಂಡಿತು. 25 ವರ್ಷಗಳ ಹಿಂದೆ A ಸಿನಿಮಾದ ಮುಹೂರ್ತ ಊರ್ವಶಿ ಥಿಯೇಟರ್‌ನಲ್ಲಿಯೇ ಆಗಿತ್ತು. ದುನಿಯಾ ವಿಜಯ್, ಲಹರಿ ವೇಲು ಸೇರದಂತೆ ಅನೇಕ ಸಿನಿ ಗಣ್ಯರು ಶುಭ ಹಾರೈಸಿದ್ದರು. ಫ್ಯಾನ್ಸ್ ಕೋರಿಕೆ ಮೇರೆಗೆ ಉಪ್ಪಿ ಕೊನೆಗೂ ಟೀಸರ್ ಏನೋ ರಿಲೀಸ್ ಮಾಡಿದ್ದರು. ಆದರೆ ಟೀಸರ್ ಕಂಡು ಅವರ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. ಅಷ್ಟೇ ಅಲ್ಲದೇ ಟೀಸರ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಗಳು ಆಗಿವೆ.
ಈ ಬಾರಿ ಉಪೇಂದ್ರ ಅವರು ಹೊಸ ರೀತಿಯಲ್ಲಿ ಟೀಸರ್ ಬಿಡುಗಡೆ ಮಾಡಿದ್ದರು. ಟೀಸರ್ನಲ್ಲಿ ಯಾವುದೇ ದೃಶ್ಯಗಳನ್ನು ತೋರಿಸಿಲ್ಲ. ಎಲ್ಲಿ ನೋಡಿದರೂ ಬರೀ ಕತ್ತಲು ಆವರಿಸಿತ್ತು. ಕೇವಲ ಒಂದಷ್ಟು ಡೈಲಾಗ್ಗಳು ಮತ್ತು ಇತರೆ ಶಬ್ದ ಕೇಳಿಸಿದೆ. ಅದನ್ನು ಕೇಳಿಸಿಕೊಂಡು ಅಭಿಮಾನಿಗಳು ಕಥೆಯನ್ನು ಊಹಿಸಿಕೊಳ್ಳಬೇಕು. ಆ ಮೂಲಕ ಎಲ್ಲರ ತಲೆಗೂ ಉಪೇಂದ್ರ ಕೆಲಸ ಕೊಟ್ಟಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಉಪೇಂದ್ರ ಅವರು ತಿಳಿಸಿದ್ದಾರೆ. ‘ಈ ಚಿತ್ರದಲ್ಲಿ ಶೇ. 90 ಗ್ರಾಫಿಕ್ಸ್ ಇದೆ. ಬೇರೆ ಬೇರೆ ಕಡೆಗಳಲ್ಲಿ ಇದರ ಕೆಲಸ ನಡೆಯುತ್ತಿದೆ. ಅದು ಮುಗಿಯುವರೆಗೂ ಏನನ್ನೂ ತೋರಿಸುವುದಕ್ಕೆ ಆಗುವುದಿಲ್ಲ. ಈ ಮಧ್ಯೆ ಬರ್ತ್ಡೇ ಬಂತು. ಈ ಕಾರಣದಿಂದ ಅಭಿಮಾನಿಗಳ ತಲೆಗೆ ಕೆಲಸ ಕೊಡಲು ನಾನು ಈ ಟೀಸರ್ ರಿಲೀಸ್ ಮಾಡಿದ್ದೇನೆ’ ಎಂದಿದ್ದಾರೆ ಉಪೇಂದ್ರ. ಆದರೆ, ಈ ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ.
ಇದನ್ನೂ ಓದಿ: Actor Upendra: ಉಪ್ಪಿಗೆ ಕುರ್ಚಿ ಮೇಲೆ ಕೂರಿಸಿ ಹೂ ಸುರಿದ ಫ್ಯಾನ್ಸ್; ಹೊಗಳಿದ ಶಿವಣ್ಣ!
#UITeaser#UIthemovie Teaserನ
— S R E E | ಶ್ರೀ ✨ (@SreeDharaNEL) September 19, 2023
ನಿನ್ನೆ ಊರ್ವಶಿಲಿ ನೋಡಿದ್ದೋರ್ Situation
Uppi2 Movieಲಿ Same Scene ಇದೆ 🌝 pic.twitter.com/uqmhpctr9o
UI Teaser: 'ಯುಐ' ಟೀಸರ್ನಲ್ಲಿ ಏನನ್ನೂ ತೋರಿಸದೇ ಜನರ ತಲೆಗೆ ಹುಳ ಬಿಟ್ಟ ಉಪೇಂದ್ರ.
— Nithin Gm (@Nithin_gm1) September 18, 2023
– ಉಪೇಂದ್ರ ಏನೇ ಮಾಡಿದರೂ ಅದು ತುಂಬ ಡಿಫರೆಂಟ್ ಆಗಿರುತ್ತದೆ. 'ಯುಐ' ಸಿನಿಮಾದ ಟೀಸರ್ನಲ್ಲೂ ಅದು ಸಾಬೀತಾಗಿದೆ . pic.twitter.com/tS154DUWyU
Discussion between UI fans and producers#UIthemovie #UITeaser pic.twitter.com/5T4Dzs2GAY
— ನಗಲಾರದೆ 𝕏 ಅಳಲಾರದೆ (@UppinaKai) September 19, 2023
UI ಟೀಸರ್ ನೋಡಿ ಸೈಕ್ ಆಗವನೆ ಗುರು.🤣🤣🤣 #Dboss #Kaatera #UITeaser pic.twitter.com/ypJtHfgTf5
— BLBuniverse (@BLBuniverse) September 19, 2023
People watching #UITeaser … pic.twitter.com/4ZlgNkxxeO
— Bengaluru Betala (@gururaj_mj) September 19, 2023
Uppi explaining #UITeaser to producer and cinematographer 😂🤣#UIKannadaTeaser #Uppi #UITheMovieTeaser #UIthemovie pic.twitter.com/qbdFUGWQIh
— JUNO (@SpiderJuno18) September 19, 2023
En mathadthiyo ley.. 😂#Shivanna 💥😅#UIthemovie #UITeaser #Ghost https://t.co/Z3qGflSBHh
— ROYAL PUNEETHIANS FC (@Royalpunethians) September 19, 2023
WOwwww… This s why we call him directors director 🙏🙏 #UIthemovie #UITeaser @nimmaupendra https://t.co/q8RmwCsWml
— Mahantesh (@Mahi_Appu75) September 19, 2023
#UITeaser visuals are stunning… 👏🏻🙌🏻😂#UITheMovieTeaser #UI #UiMovie #Upendra #UIthemovie pic.twitter.com/Wm72wMB45w
— FDFS Chandra (@saichndra) September 18, 2023
ಇದುವರೆಗೂ ಉಪ್ಪಿ ನಿರ್ದೇಶಿಸಿದ ಸಿನಿಮಾಗಳಲ್ಲೇ ಹೆಚ್ಚಿನ ಬಜೆಟ್ ಸಿನಿಮಾ ಈ UI. ಇದೀಗ ಈ ಸಿನಿಮಾ ಬಜೆಟ್ ಸುಮಾರು 100 ಕೋಟಿ ರೂ. ಎಂದು ವರದಿಗಳಾಗಿವೆ. ವರ್ಷಗಳ ನಂತರ ನಿರ್ದೇಶನದತ್ತ ಮುಖ ಮಾಡಿರುವ ಉಪ್ಪಿ ಹೊಸ ಮುನ್ನುಡಿ ಬರೆಯಲು ಹೊರಟಿದ್ದಾರೆ. ಜತೆಗೆ ಈ ಚಿತ್ರದಲ್ಲಿ ಯುವ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಉಪ್ಪಿ ಕ್ಯಾಪ್ ಹಾಕಿ, ಮೈಕ್ ಹಿಡಿದು ನಿರ್ದೇಶನಕ್ಕೆ ಇಳಿದಿದ್ದು, ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಇತಿಹಾಸ ಮರುಕಳಿಸಲಿದೆಯಾ ಎಂದು ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.
ತರ್ಲೆ ನನ್ಮಗʼ, ʻಆಪರೇಷನ್ ಅಂತʼ, ʻಶ್ʼ..!, ʻಓಂʼ, ʻಉಪ್ಪಿ-2ʼ, ʻಸೂಪರ್ʼ ಸೇರಿದಂತೆ ಹಲವು ಸಿನಿಮಾಗಳಿಗೆ ಉಪೇಂದ್ರ ನಿರ್ದೇಶನ ಮಾಡಿದ್ದಾರೆ. ʻಉಪ್ಪಿ 2ʼ ನಂತರ ಬುದ್ಧಿವಂತನ ನಿರ್ದೇಶನದಲ್ಲಿ ಯಾವ ಸಿನಿಮಾ ಕೂಡ ತೆರೆಗೆ ಬರಲಿಲ್ಲ. ಈ ಸಿನಿಮಾದಲ್ಲಿ 3ಡಿ ಬಾಡಿ ಸ್ಕ್ಯಾನ್ ಬಳಸಿದ್ದಾರೆ. ಸುಮಾರು 200 ಕ್ಯಾಮೆರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ ಏಷ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ʻಅವತಾರ್ 2′ ಸಿನಿಮಾಗೆ ಈ ತಂತ್ರಜ್ಞಾನವನ್ನು ಬಳಸಲಾಗಿತ್ತು. ಇಷ್ಟೇ ಅಲ್ಲದೆ ಸುಮಾರು 14 ಸಾವಿರ ವಿಎಫ್‌ಎಕ್ಸ್ ಶಾಟ್ಸ್ ಬಳಸಲಾಗಿದೆ.
ಇದನ್ನೂ ಓದಿ: Actor Upendra: ಸಿನಿ ರಸಿಕರಿಗೆ ಗುಡ್ ನ್ಯೂಸ್ ಕೊಟ್ಟ ರಿಯಲ್ ಸ್ಟಾರ್ ಉಪೇಂದ್ರ: ವಿಡಿಯೊ ವೈರಲ್!
ಸದ್ಯ ಕನ್ನಡದಲ್ಲಿ ನಿರ್ಮಾಣ ಆಗುತ್ತಿರುವ ಹೈ ಬಜೆಟ್ ಸಿನಿಮಾಗಳಲ್ಲಿ ‘UI’ ಕೂಡ ಒಂದು. ತನ್ನ ಕನಸನ್ನು ಸಿನಿಪ್ರಿಯರು ಒಟಿಟಿಯಲ್ಲಿ ಅಲ್ಲದೆ ಥಿಯೇಟರ್‌ನಲ್ಲೇ ಸಿನಿಮಾ ನೋಡಬೇಕು ಅಂತ ಉಪ್ಪಿ ಆಸೆ ಪಟ್ಟು ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಟಗರು, ಸಲಗ ಖ್ಯಾತಿಯ ಕೆ.ಪಿ. ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆಯವರು ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದಾರೆ.