ರಿಯಲ್ ಸ್ಟಾರ್ ಉಪೇಂದ್ರ (Actor Upendra) ಅವರ ನಿರ್ದೇಶನದ UI ಚಿತ್ರದ ಮೊದಲ ಟೀಸರ್ ಸೆ.18ರಂದು ಊರ್ವಶಿ ಥಿಯೇಟರ್‌ನಲ್ಲಿ ಅನಾವರಣಗೊಂಡಿತ್ತು. ಟೀಸರ್ನಲ್ಲಿ ಯಾವುದೇ ದೃಶ್ಯಗಳನ್ನು ತೋರಿಸಿಲ್ಲ. ಎಲ್ಲಿ ನೋಡಿದರೂ ಬರೀ ಕತ್ತಲು ಆವರಿಸಿತ್ತು. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಮತ್ತೊಂದು ಟೀಸರ್ ಹೊರ ಬಿಡಲಿದ್ದಾರೆ. ಜನವರಿ 8ರಂದು ‘ಯುಐ’ (UI Film) ಟೀಸರ್ ಅನಾವರಣ ಆಗಲಿದೆ. ಟಾಲಿವುಡ್ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್, ಶಿವಣ್ಣ (Shivarajkumar), ಡಾಲಿ ಧನಜಂಯ್ (Daali Dhananjay) ಕೂಡ ಈ ವೇಳೆ ಇರಲಿದ್ದಾರೆ. ಕಿಚ್ಚ ಸುದೀಪ್ (Sudeep) ಕೂಡ ‘ಯುಐ’ ಚಿತ್ರಕ್ಕೆ ಕೈ ಜೋಡಿಸಲಿದ್ದಾರೆ. ಚಿತ್ರೀಕರಣಕ್ಕಾಗಿ ಹೊರಗಿರುವ ಕಿಚ್ಚ ಸೋಶಿಯಲ್ ಮೀಡಿಯಾದಲ್ಲಿ ಟೀಸರ್ ಬಿಡುಗಡೆ ಮಾಡಲಿದ್ದಾರೆ.
ಈ ಹಿಂದೆ ಟೀಸರ್ ರಿಲೀಸ್ ಮಾಡಿರುವ ಬಗ್ಗೆ ಉಪೇಂದ್ರ ಅವರು ‘ಈ ಚಿತ್ರದಲ್ಲಿ ಶೇ. 90 ಗ್ರಾಫಿಕ್ಸ್ ಇದೆ. ಬೇರೆ ಬೇರೆ ಕಡೆಗಳಲ್ಲಿ ಇದರ ಕೆಲಸ ನಡೆಯುತ್ತಿದೆ. ಅದು ಮುಗಿಯುವರೆಗೂ ಏನನ್ನೂ ತೋರಿಸುವುದಕ್ಕೆ ಆಗುವುದಿಲ್ಲ. ಈ ಮಧ್ಯೆ ಬರ್ತ್ಡೇ ಬಂತು. ಈ ಕಾರಣದಿಂದ ಅಭಿಮಾನಿಗಳ ತಲೆಗೆ ಕೆಲಸ ಕೊಡಲು ನಾನು ಈ ಟೀಸರ್ ರಿಲೀಸ್ ಮಾಡಿದ್ದೇನೆ’ ಎಂದಿದ್ದರು.
ಇದುವರೆಗೂ ಉಪ್ಪಿ ನಿರ್ದೇಶಿಸಿದ ಸಿನಿಮಾಗಳಲ್ಲೇ ಹೆಚ್ಚಿನ ಬಜೆಟ್ ಸಿನಿಮಾ ಈ UI. ಇದೀಗ ಈ ಸಿನಿಮಾ ಬಜೆಟ್ ಸುಮಾರು 100 ಕೋಟಿ ರೂ. ಎಂದು ವರದಿಗಳಾಗಿವೆ. ವರ್ಷಗಳ ನಂತರ ನಿರ್ದೇಶನದತ್ತ ಮುಖ ಮಾಡಿರುವ ಉಪ್ಪಿ ಹೊಸ ಮುನ್ನುಡಿ ಬರೆಯಲು ಹೊರಟಿದ್ದಾರೆ. ಜತೆಗೆ ಈ ಚಿತ್ರದಲ್ಲಿ ಯುವ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಉಪ್ಪಿ ಕ್ಯಾಪ್ ಹಾಕಿ, ಮೈಕ್ ಹಿಡಿದು ನಿರ್ದೇಶನಕ್ಕೆ ಇಳಿದಿದ್ದು, ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಇತಿಹಾಸ ಮರುಕಳಿಸಲಿದೆಯಾ ಎಂದು ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Actor Upendra: ರಿಯಲ್ ಸ್ಟಾರ್ ಉಪೇಂದ್ರ ʻUI’ ಸಿನಿಮಾದಿಂದ ಬಿಗ್ ಅಪ್‌ಡೇಟ್!
Real Director 🌟 @nimmaupendra's #UI teaser from tomorrow @ 11am ♥️
— 𝙍𝙖𝙣𝙣𝙖 ✨ ರನ್ನ (@iamgopi118) January 7, 2024
Digital release by Baadshah @KicchaSudeep 🔥🔥#UITheFilm #KicchaSudeep #KicchaBOSS pic.twitter.com/mASpFRRyxP
ತರ್ಲೆ ನನ್ಮಗʼ, ʻಆಪರೇಷನ್ ಅಂತʼ, ʻಶ್ʼ..!, ʻಓಂʼ, ʻಉಪ್ಪಿ-2ʼ, ʻಸೂಪರ್ʼ ಸೇರಿದಂತೆ ಹಲವು ಸಿನಿಮಾಗಳಿಗೆ ಉಪೇಂದ್ರ ನಿರ್ದೇಶನ ಮಾಡಿದ್ದಾರೆ. ʻಉಪ್ಪಿ 2ʼ ನಂತರ ಬುದ್ಧಿವಂತನ ನಿರ್ದೇಶನದಲ್ಲಿ ಯಾವ ಸಿನಿಮಾ ಕೂಡ ತೆರೆಗೆ ಬರಲಿಲ್ಲ. ಈ ಸಿನಿಮಾದಲ್ಲಿ 3ಡಿ ಬಾಡಿ ಸ್ಕ್ಯಾನ್ ಬಳಸಿದ್ದಾರೆ. ಸುಮಾರು 200 ಕ್ಯಾಮೆರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ ಏಷ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ʻಅವತಾರ್ 2′ ಸಿನಿಮಾಗೆ ಈ ತಂತ್ರಜ್ಞಾನವನ್ನು ಬಳಸಲಾಗಿತ್ತು. ಇಷ್ಟೇ ಅಲ್ಲದೆ ಸುಮಾರು 14 ಸಾವಿರ ವಿಎಫ್‌ಎಕ್ಸ್ ಶಾಟ್ಸ್ ಬಳಸಲಾಗಿದೆ.
ಸದ್ಯ ಕನ್ನಡದಲ್ಲಿ ನಿರ್ಮಾಣ ಆಗುತ್ತಿರುವ ಹೈ ಬಜೆಟ್ ಸಿನಿಮಾಗಳಲ್ಲಿ ‘UI’ ಕೂಡ ಒಂದು. ತನ್ನ ಕನಸನ್ನು ಸಿನಿಪ್ರಿಯರು ಒಟಿಟಿಯಲ್ಲಿ ಅಲ್ಲದೆ ಥಿಯೇಟರ್‌ನಲ್ಲೇ ಸಿನಿಮಾ ನೋಡಬೇಕು ಅಂತ ಉಪ್ಪಿ ಆಸೆ ಪಟ್ಟು ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಟಗರು, ಸಲಗ ಖ್ಯಾತಿಯ ಕೆ.ಪಿ. ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆಯವರು ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದಾರೆ.