Site icon Vistara News

Actor Varun Dhawan | ತಂದೆ ಆಗ್ತಾ ಇದ್ದಾರಾ ನಟ ವರುಣ್‌ ಧವನ್‌: ಸಲ್ಮಾನ್‌ ಖಾನ್‌ ಕೊಟ್ಟ ಸುಳಿವೇನು?

Actor Varun Dhawan

ಬೆಂಗಳೂರು: ಬಾಲಿವುಡ್‌ ನಟ ವರುಣ್‌ ಧವನ್‌ (Actor Varun Dhawan) ಬಿಗ್‌ ಬಾಸ್‌ ಸೀಸನ್‌ 16ರ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ನಟ, ನಿರೂಪಕ ಸಲ್ಮಾನ್‌ ಖಾನ್‌ ಆಡಿರುವ ಮಾತುಗಳು ಹಾಗೂ ಕೊಟ್ಟ ಗಿಫ್ಟ್‌ ಈಗ ಭಾರಿ ಸುದ್ದಿಯಲ್ಲಿದೆ. ವರುಣ್‌ ಧವನ್‌ ಕಾಲೆಳೆದಿರುವ ಸಲ್ಮಾನ್‌ ಖಾನ್‌ ಮಾತುಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಈ ವೇಳೆ ವರುಣ್‌ ಧವನ್‌ ಕೈಗೆ ಸಲ್ಮಾನ್‌ ಖಾನ್‌ ಆಟಿಕೆ ವಸ್ತುವೊಂದನ್ನು ನೀಡಿದ್ದು, ಇದೇ ವರುಣ್ ಧವನ್ ತಂದೆಯಾಗುತ್ತಿರುವುದರ ಬಗ್ಗೆ ಸುಳಿವು ಎಂದು ಹೇಳಲಾಗುತ್ತಿದೆ.

ವರುಣ್‌ ಧವನ್‌ ಹಾಗೂ ನಟಿ ಕೃತಿ ಸೈನನ್‌ ನಟನೆಯ ʻಭೇಡಿಯʼ ಚಿತ್ರದ ಪ್ರಚಾರಕ್ಕೆ ಬಿಗ್‌ ಬಾಸ್‌ ಸೀಸನ್‌ 16ರ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೆಳೆ ನಟ ಸಲ್ಮಾನ್‌ ಖಾನ್‌ ವರುಣ್‌ ಧವನ್‌ ಅವರ ಕೈಗೆ ಆಟಿಕೆ ವಸ್ತುಗಳನ್ನು ನೀಡಿದ್ದಲ್ಲದೆ, “ಈ ಆಟಿಕೆ ನಿಮ್ಮ ಮಗುವಿಗೆ” ಎಂದು ವರುಣ್‌ ಧವನ್‌ ಅವರ ಕಾಲೆಳೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವರುಣ್‌ ಅವರು “ನನಗೆ ಇನ್ನೂ ಮಕ್ಕಳಾಗಿಲ್ಲ” ಎಂದು ಹೇಳಿದ್ದಾರೆ. ಸಲ್ಮಾನ್‌ ಖಾನ್‌ ಆಟಿಕೆ ತೋರಿಸಿ, “ಇದು ಬಂದಿದೆ ಅಂದರೆ, ಮಗು ಕೂಡ ಬರಲಿದೆ” ಎಂದು ತಮಾಷೆ ಮಾಡಿದ್ದಾರೆ. ವರುಣ್ ಕೂಡ ಇದಕ್ಕೆ ನಕ್ಕು ಸುಮ್ಮನಾಗಿದ್ದಾರೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಿದ್ದು, ವರುಣ್ ಅವರು ತಂದೆಯಾಗುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್‌ ಮೂಲಕ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ | Bipasha Basu | ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಬಿಪಾಶಾ ಬಸು

ಜನವರಿ 2021ರಲ್ಲಿ ನತಾಶಾ ದಲಾಲ್ ಜತೆ ನಟ ವರುಣ್‌ ಧವನ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ʻಭೇಡಿಯʼ ಚಿತ್ರವನ್ನು ಅಮರ್ ಕೌಶಿಕ್ ನಿರ್ದೇಶಿಸಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಸೇರಿ ಮತ್ತಿತರರು ನಟಿಸಿದ್ದಾರೆ. ಹಾರರ್-ಕಾಮಿಡಿ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ದಿನೇಶ್ ವಿಜನ್ ನಿರ್ಮಿಸಿದ್ದಾರೆ. ಇದೇ ನವೆಂಬರ್ 25ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ | Dolly Dhananjay | ರಮ್ಯಾ-ಧನಂಜಯ್‌ ಕಾಂಬಿನೇಷನ್‌ನ ಉತ್ತರಕಾಂಡಕ್ಕೆ ಬಾಲಿವುಡ್‌ ಸಿನಿಮಾ ಪ್ರೇರಣೆ?

Exit mobile version