ಬೆಂಗಳೂರು: ನಟಿ ಲೀಲಾವತಿಯವರು (Actress Leelavathi) ಬಾರದ ಲೋಕಕ್ಕೆ ಹೋಗಿ ಮೂರು ದಿನ ಕಳೆದಿದೆ. ತಾಯಿ ನೆನಪಿನಲಿಯೇ ಹಾಲು ತುಪ್ಪ ವಿಧಿ ವಿಧಾನಗಳನ್ನು ವಿನೋದ್ ರಾಜ್ ಅವರು ನೆರವೇರಿಸಿದ್ದಾರೆ, ಅಜ್ಜಿ ನೆನಪಲ್ಲಿ ಸಮಾಧಿಗೆ ಮೊಮ್ಮಗ ಯುವರಾಜ್ ಕೂಡ ಹಾಲು ತಪ್ಪ ಬಿಟ್ಟಾಗಿದೆ. ವಿನೋದ್ ರಾಜ್ ಪತ್ನಿ ಅನು ಅವರು ಲೀಲಾವತಿ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು.
ʻʻಲೀಲಾವತಿ ಅಮ್ಮ ದೊಡ್ಡ ಕಲಾವಿದೆ. ಜೀವನದಲ್ಲಿ ಬಹಳ ಶಿಸ್ತುಬದ್ಧವಾಗಿದ್ದರು. ಅವರ ಗುಣಗಳನ್ನು ನಾನು ನನ್ನ ಮಗನಿಗೂ ಹೇಳಿಕೊಟ್ಟಿದ್ದೇನೆ. ಅತ್ತೆಯವರಿಂದಲೇ ಅಷ್ಟು ಉತ್ತಮ ಗುಣನಡತೆ, ಶಿಸ್ತುಬದ್ಧ ಜೀವನ, ಸಾಧನೆ ಸಾಧ್ಯವಾಯಿತು.ಅವರನ್ನು ನೋಡಿ ಜೀವನದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಅವರಂಥ ಅತ್ತೆ ಪಡೆಯುವುದಕ್ಕೂ ನಾನು ಮತ್ತು ಅವರಂಥ ಅಜ್ಜಿ ಪಡೆಯುವುದಕ್ಕೂ ನನ್ನ ಮಗ ಪುಣ್ಯ ಮಾಡಿದ್ದೇವೆʼʼಎಂದರು.
ಲೀಲಾವತಿ ಅವರು ತೋಟಗಾರಿಕೆಯಲ್ಲಿಯೂ ಅತ್ಯಂತ ಶಿಸ್ತಬದ್ಧವಾಗಿರುತ್ತಿದ್ದರು ಎಂದೂ ಹೇಳಿದರು. ಅವರು ನಟಿಸಿದ ಚಿತ್ರಗಳೆಲ್ಲ ನನಗೆ ಇಷ್ಟ. ಅವರ ಸಾಮಾಜಿಕ ಕಾರ್ಯ ಮಾದರಿ. ಜೀವನವೇ ಬೇರೆಯವರಿಗೆ ಮೀಸಲಿಟ್ಟರು ಎಂದರು. ತಾಯಿ ಕಳೆದುಕೊಂಡಿರುವ ವಿನೋದ್ ರಾಜ್ ಅವರನ್ನು ಖುಷಿಯಾಗಿರುವಂತೆ ನೋಡಿಕೊಳ್ಳುತ್ತೇವೆ ಎಂದು ಲೀಲಾವತಿ ಅವರ ಚೆನ್ನೈಯಲ್ಲಿ ವಾಸಿಸುತ್ತಿರುವ ಸೊಸೆ ವಿನು ಹೇಳಿದರು.
ಇದನ್ನೂ ಓದಿ: Actress Leelavathi: ವಿನೋದ್ ರಾಜ್ ಪುತ್ರನಿಗೆ ಲೀಲಾವತಿ ಅಜ್ಜಿಯೇ ಕನ್ನಡ ಟೀಚರ್!
ಲೀಲಾವತಿ ಅಜ್ಜಿಯೇ ಕನ್ನಡ ಟೀಚರ್!
ʻʻಅಜ್ಜಿ ನನಗೆ ಕನ್ನಡ ಹೇಳಿಕೊಟ್ಟಿದ್ದು. ನನಗೆ ಅಷ್ಟಾಗಿ ಮಾತನಾಡಲು ಬರುವುದಿಲ್ಲ. ಅವರು ಇದ್ದಿದ್ದರೆ ಇನ್ನೂ ಕನ್ನಡ ಕಲಿತಾ ಇದ್ದೆ. ಜೀವನದಲ್ಲಿ ಹೇಗೆ ಇರಬೇಕು ಎಂಬುದು ಅಜ್ಜಿ ನನಗೆ ಕಲಿಸಿದ್ದಾರೆ. ತಂದೆ ಅವರು ಕಲಾವಿದರು. ನಾನು ಐಟಿ ಫೀಲ್ಡ್‌ನಲ್ಲಿ ಇದ್ದೇನೆ. ನನ್ನ ಫೇವರೇಟ್ ಹೀರೊ ಕೂಡ ನನ್ನ ತಂದೆನೆ’ ಎಂದರು. ಮೊಮ್ಮಗನಿಗೆ ಯುವರಾಜ್ ಎಂದು ಲೀಲಾವತಿ ಅವರೇ ನಾಮಕರಣ ಮಾಡಿದ್ದರು. ಆ ಎಲ್ಲ ವಿಷಯಗಳನ್ನು ಯುವರಾಜ್ ಮೆಲುಕು ಹಾಕಿದ್ದಾರೆ. ‘ಅಂದು ನಾನು ಬಂದು ಅಜ್ಜಿ ಎಂದು ಕರೆದಾಗ ಕಣ್ಣು ಬಿಟ್ಟಿದ್ದರು. ಯುವರಾಜಾ ಎಂದು ನನ್ನನ್ನು ಕರೆದಿದ್ದರು. ಅದು ನನಗೆ ತುಂಬ ಫೀಲ್ ಆಗುತ್ತಿದೆ’ ಎಂದು ಯುವರಾಜ್ ಹೇಳಿದ್ದಾರೆ.
ವಿನೋದ್ ರಾಜ್ ಅವರ ಪುತ್ರ ಯುವರಾಜ್, ಚೆನ್ನೈನಲ್ಲಿಯೇ ಅಮ್ಮನ ಜತೆಗೆ ಬೆಳೆಯುತ್ತಿದ್ದಾನೆ. ಚೆನ್ನೈಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ.