Site icon Vistara News

Actor Vinod Thomas: ಕಾರಿನಲ್ಲಿ ಖ್ಯಾತ ನಟನ ಶವ ಪತ್ತೆ; ನಿಗೂಢ ಸಾವಿಗೆ ಕಾರಣವೇನು?

vinod thomas

vinod thomas

ತಿರುವನಂತಪುರಂ: ಮಲೆಯಾಳಂ ಚಿತ್ರರಂಗಕ್ಕೆ ಮತ್ತೊಂದು ಶಾಕ್‌ ಎದುರಾಗಿದೆ. ಮಾಲಿವುಡ್‌ನ (Mollywood) ಜನಪ್ರಿಯ ನಟ ವಿನೋದ್‌ ಥಾಮಸ್‌ (Actor Vinod Thomas) ಕೊಟ್ಟಾಯಂನ ಪಂಪಾಡಿ ಹೋಟೆಲ್‌ ಬಳಿ ನಿಲ್ಲಿಸಿದ್ದ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾರೆ. 45 ವರ್ಷದ ನಟನ ಸಾವಿಗೆ ಕಾರಣ ತಿಳಿದು ಬಂದಿಲ್ಲ.

ತಮ್ಮ ಹೋಟೆಲ್‌ ಆವರಣದಲ್ಲಿ ಬಹಳ ಸಮಯಗಳಿಂದ ನಿಲ್ಲಿಸಿದ್ದ ಕಾರಿನೊಳಗೆ ವ್ಯಕ್ತಿಯೊಬ್ಬರು ಇದ್ದಾರೆಂದು ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆಗಮಿಸಿದ ಪರಿಶೀಲಿಸಿದಾಗ ಥಾಮಸ್‌ ಸಾವಿನ ವಿಷಯ ಬಹಿರಂಗಗೊಂಡಿತು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Chandra Mohan: ತೆಲುಗು ಹಿರಿಯ ನಟ ಚಂದ್ರ ಮೋಹನ್ ಇನ್ನಿಲ್ಲ!

ಥಾಮಸ್‌ ಅವರನ್ನು ಕಂಡ ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಷಕಾರಿ ಅನಿಲ ಕಾರಣ?

ಸದ್ಯಕ್ಕೆ ಥಾಮಸ್‌ ಸಾವಿನ ಕಾರಣ ಬಹಿರಂಗಗೊಂಡಿಲ್ಲ. ಮೂಲಗಳ ಪ್ರಕಾರ ಕಾರಿನೊಳಗೆ ಆವರಿಸಿದ್ದ ವಿಷಕಾರಿ ಅನಿಲವನ್ನು ಉಸಿರಾಡಿದ್ದು ಸಾವಿಗೆ ಕಾರಣ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಥಾಮಸ್‌ ಹಲವು ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ʼಅಯ್ಯಪ್ಪನುಮ್‌ ಕೋಶಿಯುಮ್‌ʼ, ʼನಾಥೋಲಿ ಒರು ಚೆರಿಯ ಮೀನಲ್ಲʼ, ʼಒರು ಮುರೈ ವಂತ್‌ ಪಾಥಾಯʼ, ʼಹ್ಯಾಪಿ ವೆಡ್ಡಿಂಗ್‌ʼ, ʼಜೂನ್‌ʼ ಮತ್ತಿತರು ಚಿತ್ರಗಳಲ್ಲಿನ ಅವರ ಅಭಿನಯ ಗಮನ ಸೆಳೆದಿದೆ. ಅವರು ಅವಿವಾಹಿತರಾಗಿದ್ದರು. ಸದ್ಯ ಅವರು ರೇವತಿ ಎಸ್‌. ವರ್ಮ ನಿರ್ದೇಶನದ ʼಈ ವಲಯಂʼ ಮಲಯಾಳಂ ಚಿತ್ರದಲ್ಲಿ ನಟಿಸುತ್ತಿದ್ದರು.

Exit mobile version