Site icon Vistara News

Actor Arjun Sarja | ಅರ್ಜುನ್‌ ಸರ್ಜಾ ಆರೋಪಕ್ಕೆ ನಟ ವಿಶ್ವಕ್‌ ಖಡಕ್‌ ರೆಸ್ಪಾನ್ಸ್‌!

Actor Arjun Sarja

ಬೆಂಗಳೂರು : ಬಹುಭಾಷಾ ನಟ, ಆ್ಯಕ್ಷನ್‌ ಕಿಂಗ್ ಅರ್ಜುನ್‌ ಸರ್ಜಾ(Actor Arjun Sarja) ಅವರು ತಮ್ಮ ನಿರ್ದೇಶದಲ್ಲಿ ಮೂಡಿ ಬರುತ್ತಿರುವ ಸಿನಿಮಾ ನಟ ವಿಶ್ವಕ್‌ ಸೇನ್‌ ಬಗ್ಗೆ ಪ್ರತಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಮಗಳು ಐಶ್ವರ್ಯಾ ಸರ್ಜಾ ಈ ಚಿತ್ರಕ್ಕೆ ನಾಯಕಿಯಾಗಿದ್ದು, ಅರ್ಜುನ್ ಸರ್ಜಾ ನಿರ್ದೇಶನದ ಜತೆಗೆ ನಿರ್ಮಾಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಾಯಕನಾಗಿ ಆಯ್ಕೆ ಆಗಿದ್ದ ವಿಶ್ವಕ್‌ ಸೇನ್‌ ಇದೀಗ ಚಿತ್ರೀಕರಣದಿಂದ ಹೊರಗೆ ನಡೆದಿದ್ದಾರೆ. ಈ ಬಗ್ಗೆ ಅರ್ಜುನ್‌ ಸರ್ಜಾ ಅವರು ʻʻವಿಶ್ವಕ್‌ ಸೇನ್‌ ಕೆಟ್ಟ ವೃತ್ತಿಪರತೆಯುಳ್ಳ ಮನುಷ್ಯʼʼ ಎಂದು ಆರೋಪಿಸಿದ್ದಾರೆ.

ಅರ್ಜುನ್‌ ಸರ್ಜಾ ಈ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ʻʻವಿಶ್ವಕ್‌ ಸೇನ್‌ ಕೆಟ್ಟ ವೃತ್ತ ಪರತೆಯುಳ್ಳ ಮನುಷ್ಯ. ಈ ರೀತಿಯ ಬೇಜವಾಬ್ದಾರಿ ವ್ಯಕ್ತಿಯನ್ನು ನೋಡಿಲ್ಲʼʼ ಎಂದಿದ್ದಾರೆ. ಈ ಕುರಿತು ನಟ ವಿಶ್ವಕ್‌ ʻʻನನ್ನದು ತಪ್ಪಲ್ಲʼʼಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅರ್ಜುನ್‌ ಸರ್ಜಾ ಅವರ ಮೇಲಿನ ಗೌರವದಿಂದ ಸಿನಿಮಾ ಒಪ್ಪಿಕೊಂಡೆ!
ಬೇರೊಂದು ಕಾರ್ಯಕ್ರಮದಲ್ಲಿ ವಿಶ್ವಕ್‌ ಈ ಬಗ್ಗೆ ಮಾತನಾಡಿದ್ದು ʻʻನಾನು ಚಿತ್ರರಂಗದಲ್ಲಿ ಆರಂಭದಿಂದಲೂ ಬಹಳ ಕಷ್ಟ ಪಟ್ಟು, ಅವಮಾನವನ್ನೂ ಎದುರಿಸಿದ್ದೇನೆ. ನನ್ನನ್ನು ಅನ್‌ಪ್ರೊಫೆಶನಲ್‌ ಎಂದಿದ್ದಾರೆ. ಇದೊಂದೇ ವರ್ಷದಲ್ಲಿ ಮೂರು ಸಿನಿಮಾಗಳನ್ನು ಮುಗಿಸಿದ್ದೇನೆ. ಅದರಲ್ಲಿ ಒಂದು ಸಿನಿಮಾಗೆ ನಾನೇ ಹೀರೊ ಹಾಗೂ ನಿರ್ದೇಶಕ ಮತ್ತು ನಿರ್ಮಾಪಕ ಆಗಿದ್ದೇನೆ . ನಾನು ಸಣ್ಣ ಸಿನಿಮಾಗಳನ್ನು ಮಾಡಿದ್ದರೂ ದೊಡ್ಡ ನಿರ್ಮಾಪಕರೊಟ್ಟಿಗೆ ಕೆಲಸ ಮಾಡಿದ್ದೇನೆ. ಆದರೆ ಈ ಸಿನಿಮಾವನ್ನು ಅರ್ಜುನ್‌ ಸರ್ಜಾ ಅವರ ಮೇಲಿನ ಗೌರವದಿಂದ ಒಪ್ಪಿಕೊಂಡೆ. ಶೂಟಿಂಗ್ ಪ್ರಾರಂಭವಾಗುವ ಒಂದು ವಾರದ ಮೊದಲು ಸಿನಿಮಾದ ಫರ್ಸ್ಟ್‌ ಹಾಫ್ ಚಿತ್ರಕತೆ ಬಂತು. ಕತೆಯೂ ಇಷ್ಟವಾಯಿತು. ಆದರೆ ಬರುಬರುತ್ತಾ, ನಮ್ಮಿಬ್ಬರ ನಡುವೆ ಸಂವಾದ ಸಾಧ್ಯವಾಗುತ್ತಿರಲಿಲ್ಲʼʼ ಎಂದಿದ್ದಾರೆ ವಿಶ್ವಕ್‌.

ಇದನ್ನೂ ಓದಿ | Dhruva Sarja | ಧ್ರುವ ಸರ್ಜಾ-ಪ್ರೇಮ್‌ ಕಾಂಬಿನೇಶನ್‌ ಸಿನಿಮಾದ ಟೈಟಲ್‌ ರಿವೀಲ್‌!

ಚಿತ್ರೀಕರಣಕ್ಕೆ ಹೋಗಬೇಕಾದರೆ ಭಯವಾಗುತ್ತಿತ್ತು!
ʻʻಸಿನಿಮಾದಲ್ಲಿ ಏನಾದರೂ ಬದಲಾವಣೆ ಬಗ್ಗೆ ಮಾತನಾಡಿದರೆ, ನನ್ನ ಮೇಲೆ ನಂಬಿಕೆ ಇಲ್ಲವಾ ಎಂದು ಅರ್ಜುನ್‌ ಸರ್ಜಾ ಅವರು ಪ್ರಶ್ನಿಸುತ್ತಿದ್ದರು. ಚಿತ್ರೀಕರಣಕ್ಕೆ ಹೋಗಬೇಕಾದರೆ ಭಯ ಪ್ರಾರಂಭವಾಗಿತ್ತು. ಆ ಒಂದು ದಿನ ಚಿತ್ರೀಕರಣ ಕ್ಯಾನ್ಸಲ್ ಮಾಡಿ, ಕೆಲವು ವಿಷಯ ಡಿಸ್ಕಸ್‌ ಮಾಡಬೇಕಿದೆ ಎಂದಿದ್ದೇನೆ ಹೊರತು, ಸಿನಿಮಾವನ್ನೇ ಕ್ಯಾನ್ಸಲ್ ಮಾಡಿ ಎಂದಿಲ್ಲ. ಆ ನಂತರವೂ ನಾವು ಚರ್ಚೆ ಮಾಡಲು ರೆಡಿ ಇದ್ದೆವು, ಆದರೆ ಆ ವೇಳೆಗೆ ಅವರ ಕಡೆಯ ಮ್ಯಾನೇಜರ್‌ ನಮಗೆ ಸಿನಿಮಾಕ್ಕೆ ಖರ್ಚು ಮಾಡಿದ ಲೆಕ್ಕ ಕಳಿಸಿ ಇಷ್ಟು ಹಣ ತುಂಬಿ ಕೊಡಿ ಎಂದು ಮೆಸೇಜ್ ಮಾಡಿದ್ದರು” ಎಂದಿದ್ದಾರೆ ವಿಶ್ವಕ್.

ಏನೇ ಸಮಸ್ಯೆ ಇದ್ದರೂ ಅದನ್ನು ನಾಲ್ಕು ಗೋಡೆಗಳ ಮಧ್ಯೆ ಸರಿಪಡಿಸಿಕೊಳ್ಳುತ್ತಿದ್ದೆ!
ʻʻನನಗೆ ಏನೇ ಸಮಸ್ಯೆ ಇದ್ದರೂ ಅದನ್ನು ನಾಲ್ಕು ಗೋಡೆಗಳ ಮಧ್ಯೆ ಸರಿಪಡಿಸಿಕೊಳ್ಳುತ್ತಿದ್ದೆ. ಆದರೆ ಅವರೇ ಹೊರಗೆ ಹೋಗಿ ಪ್ರೆಸ್ ಮೀಟ್ ಮಾಡಿದ್ದಾರೆ. ನನ್ನನ್ನು ಸಿನಿಮಾದಿಂದ ತೆಗೆದಿದ್ದಾರಲ್ಲ. ಅವರ ಸಿನಿಮಾ ಬಗ್ಗೆ ನಾನು ಹೆಚ್ಚು ಮಾತನಾಡಬಾರದು ಎಂದೇ ಸುಮ್ಮನೆ ಇದ್ದೆ” ಎಂದಿದ್ದಾರೆ ವಿಶ್ವಕ್ ಸೇನ್.

ಮಗಳ ಸಿನಿಮಾಗೆ ನಿರ್ದೇಶನದ ಜತೆ ನಿರ್ಮಾಣ ಮಾಡುತ್ತಿದ್ದಾರೆ ಅರ್ಜುನ್‌ ಸರ್ಜಾ!
ʼಪ್ರೇಮ ಬರಹʼ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಐಶ್ವರ್ಯ ಸರ್ಜಾ ಪದಾರ್ಪಣೆ ಮಾಡಿದರು. ಈ ಸಿನಿಮಾಗೆ ಅರ್ಜುನ್ ಸರ್ಜಾ ನಿರ್ದೇಶನದ ಜತೆಗೆ ನಿರ್ಮಾಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅದಾದ ಬಳಿಕ ಐಶ್ವರ್ಯ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಈಗ ಮತ್ತೆ ಅರ್ಜುನ್ ಸರ್ಜಾ ಮಗಳ ಸಿನಿಮಾಗೆ ನಿರ್ದೇಶನದ ಜತೆ ನಿರ್ಮಾಣ ಮಾಡುತ್ತಿದ್ದಾರೆ.

ಅರ್ಜುನ್ ಸರ್ಜಾ ಅವರು ತಮ್ಮದೇ ಶ್ರೀ ರಾಮ್‌ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್‌ನಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಮಗಳು ಐಶ್ವರ್ಯ ಅರ್ಜುನ್ ಅವರನ್ನು ತೆಲುಗಿನಲ್ಲಿ ನಟಿಯಾಗಿ ಪರಿಚಯಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ವಿಲನ್ ಗೆಟಪ್‌ನಲ್ಲಿ ಜಗಪತಿ ಬಾಬು ನಟಿಸಲಿದ್ದಾರೆ.

ಇದನ್ನೂ ಓದಿ | Aishwarya Arjun | ಐಶ್ವರ್ಯ ಸರ್ಜಾ ಚಿತ್ರಕ್ಕೆ ಆ್ಯಕ್ಷನ್‌ ಕಿಂಗ್‌ ಆ್ಯಕ್ಷನ್‌ ಕಟ್

Exit mobile version