Site icon Vistara News

Actor Yash: ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಸಖತ್‌ ಸ್ಟೆಪ್ಸ್‌; ವಿಡಿಯೊ ವೈರಲ್‌!

Actor Yash dance video in Hardik Pandya wedding

ಬೆಂಗಳೂರು: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಮೈ ಚಳಿ ಬಿಟ್ಟು ಸಖತ್‌ ಸ್ಟೆಪ್ಸ್‌ ಹಾಕಿದ್ದಾರೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​, ಗುಜರಾತ್​ ಟೈಟನ್ಸ್​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ (Hardik Pandya) ಹಾಗೂ ಮಾಡೆಲ್​ ನತಾಶಾ ಸ್ಟಾಂಕೊವಿಕ್​ (nataša stanković) ಈ ವರ್ಷ ಫೆಬ್ರವರಿಯಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದರು.

ಈ ಜೋಡಿಯ ಮದುವೆ ಸಮಾರಂಭಕ್ಕೆ ಅನೇಕ ಗಣ್ಯರು ಭಾಗಿ ಆಗಿದ್ದರು. ಯಶ್ ಕೂಡ ಭಾಗಿಯಾಗಿ ಹಾರ್ದಿಕ್ ಪಾಂಡ್ಯ ಜತೆ ಸಖತ್ ಆಗಿ ಡಾನ್ಸ್ ಮಾಡಿದ್ದರು. ಪಾಂಡ್ಯ ಜತೆ ಡಾನ್ಸ್ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ. ಯಶ್ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. ಕಪ್ಪು ಬಣ್ಣದ ಶೆರ್ವಾನಿಯಲ್ಲಿ ಯಶ್ ಮಿಂಚಿದ್ದಾರೆ. ಹಾರ್ದಿಕ್ ಮತ್ತು ಯಶ್ ಇಬ್ಬರೂ ಉತ್ತಮ ಸ್ನೇಹಿತರು. ಹಾಗಾಗಿ ಯಶ್ ಕ್ರಿಕೆಟಿಗ ಪಾಂಡ್ಯ ಮದುವೆಗೆ ತಪ್ಪದೇ ಹಾಜರಾಗಿದ್ದರು.

2020ರ ಮೇ 31ರಂದು ಹಾರ್ದಿಕ್​ ಪಾಂಡ್ಯ – ನತಾಶಾ ಕಾನೂನುಬದ್ಧವಾಗಿ ವಿವಾಹವಾಗಿದ್ದಾರೆ. ಈ ಜೋಡಿಗೆ ಒಬ್ಬ ಪುತ್ರನಿದ್ದಾನೆ. ಈ ಸ್ಟಾರ್‌ಗಳು ರಾಜಸ್ಥಾನ್​ನ ಉದಯ್​ಪುರದಲ್ಲಿ ಮತ್ತೊಮ್ಮೆ ಮದುವೆಯಾಗಿದ್ದರು.

ಇದನ್ನೂ ಓದಿ: Pamela Chopra : ಯಶ್‌ ಚೋಪ್ರಾ ಪತ್ನಿ, ಗಾಯಕಿ ಪಮೇಲಾ ಚೋಪ್ರಾ ನಿಧನ

ಯಶ್‌ ಸಖತ್‌ ಸ್ಟೆಪ್ಸ್‌

ಕೆಜಿಎಫ್​: ಚಾಪ್ಟರ್​​ 2’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಯಶ್​ ಅವರ ಡಿಮ್ಯಾಂಡ್​ ಹೆಚ್ಚಾಗಿದೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಯಶ್‌ ಅವರು ಕೆಜಿಎಫ್‌ ಸಿನಿಮಾ ಬಳಿಕ ಯಾವುದೇ ಸಿನಿಮಾ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡಿಲ್ಲ. ವಿಶ್ಯಾದ್ಯಂತ ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರ 1,400 ಕೋಟಿ ರೂ. ಗಳಿಕೆ ಕಂಡಿದೆ. ಈ ಸಿನಿಮಾ ತೆರೆಗೆ ಬರುತ್ತಿದ್ದಂತೆ ಯಶ್ ಮುಂದಿನ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಇದಕ್ಕೆ ಈವರೆಗೆ ಉತ್ತರ ಸಿಕ್ಕಿಲ್ಲ. ಅಭಿಮಾನಿಗಳು ಕೂಡ ಕಾದು ಕಾದು ಸುಸ್ತಾಗಿದ್ದಾರೆ.

Exit mobile version