Actor Yash: ಅಭಿಷೇಕ್ ದಂಪತಿಗೆ ವಿಶ್ ಮಾಡಿದ ಯಶ್ -ರಾಧಿಕಾ; ಸೈಲಿಶ್ ಆಗಿ ಕಂಡ ರಾಕಿ ಭಾಯ್! Yashaswi Devadiga 2 ವರ್ಷಗಳು ago ಕರ್ಕಾಟಕ ಲಗ್ನದಲ್ಲಿ (9:30-10:30) ಅವಿವಾ ಹಾಗೂ ಅಭಿಷೇಕ್ ಹಸೆಮಣೆ ಏರಿದರು. ಅಂಬರೀಷ್ ಅವರನ್ನು ಕಂಡರೆ ಯಶ್ಗೆ (Actor Yash) ಅಚ್ಚುಮೆಚ್ಚು. ಈಗ ಅವರು ಅಂಬಿ ಮಗ ಅಭಿಷೇಕ್ ಮದುವೆಗೆ ಆಗಮಿಸಿ ವಿಶ್ ಮಾಡಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಯಶ್ ‘ಕೆಜಿಎಫ್ 2’ ಲುಕ್ಅನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ಮದುವೆ ಗೌಡರ ಸಂಪ್ರದಾಯದಂತೆ ಅದ್ಧೂರಿಯಾಗಿ ನೆರವೇರಿತು. ನಿಶ್ಚಿತಾರ್ಥಕ್ಕೆ ಯಶ್ ಹಾಗೂ ರಾಧಿಕಾ ಭಾಗಿಯಾಗಿದ್ದರು. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಪುತ್ರಿ ಆಗಿರುವ ಅವಿವ ಬಿಡಪ (Aviva Bidapa) ಹಾಗೂ ಅಭಿಷೇಕ್ ಅಂಬರೀಷ್ ನಡುವೆ ಇತ್ತೀಚಿನ ವರ್ಷಗಳಲ್ಲಿ ಪರಿಚಯ ಬೆಳೆದಿತ್ತು.