Site icon Vistara News

Actor Yash | 700ಕ್ಕೂ ಹೆಚ್ಚು ಅಭಿಮಾನಿಗಳಿಗೆ ಫೋಟೊ ಕ್ಲಿಕ್ಕಿಸಲು ಅವಕಾಶ ನೀಡಿದ ಯಶ್: ನಟನ ತಾಳ್ಮೆಗೆ ನೆಟ್ಟಿಗರಿಂದ ಪ್ರಶಂಸೆ

Actor Yash

ಬೆಂಗಳೂರು : ಕೆಜಿಎಫ್‌ ಸಿನಿಮಾ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ ಪ್ಯಾನ್-ಇಂಡಿಯಾ ಸೂಪರ್ ಸ್ಟಾರ್ ಯಶ್ (Actor Yash) ಅಭಿಮಾನಿಗಳ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಇವೆಂಟ್‌ ಒಂದರಲ್ಲಿ ಯಶ್ 700ಕ್ಕೂ ಹೆಚ್ಚು ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಅಲ್ಲದೆ, ಯಶ್, ಎರಡು ಗಂಟೆ ನಿಂತು ಅಭಿಮಾನಿಗಳಿಗೆ ಫೋಟೋ ಕ್ಲಿಕ್ಕಿಸಲು ಅವಕಾಶ ಕೊಟ್ಟಿದ್ದಾರೆ. ಯಶ್ ತಾಳ್ಮೆಗೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.

ಸಂಘಟಕರು ಗ್ರೂಪ್‌ ಫೋಟೊ ಕ್ಲಿಕ್ಕಿಸಲು ಸಲಹೆ ನೀಡಿದ್ದಾರೆ. ಆದರೆ ಯಶ್‌ ಇದನ್ನು ಒಪ್ಪದೇ ಇವೆಂಟ್‌ನಲ್ಲಿ ಹಾಜರಿದ್ದ ಪ್ರತಿಯೊಬ್ಬ ಅಭಿಮಾನಿಗಳೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ. ʻನಮ್ಮ ಹುಡುಗರು ಅಲ್ವಾʼ ಎಂದು ಎರಡು ಗಂಟೆ ನಿಂತು ಪ್ರತಿಯೊಬ್ಬರಿಗೂ ಫೋಟೊ ಕೊಟ್ಟಿದ್ದಾರೆ ಯಶ್‌.

ಇದನ್ನೂ ಓದಿ | Actor Yash | ಸೈಕ್ಲೋನ್ ಎಫೆಕ್ಟ್‌ನಲ್ಲಿಯೂ ನಂದಿಬೆಟ್ಟ ಸೌಂದರ್ಯ ಸವಿದ ಯಶ್‌-ರಾಧಿಕಾ: ಫೋಟೊ ವೈರಲ್‌!

ಇತ್ತೀಚೆಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ವಿಶೇಷ ಸಂವಾದ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಫಿಲ್ಮ್‌ ಕಂಪ್ಯಾನಿಯನ್‌ ಸಂದರ್ಶನ ಕಾರ್ಯಕ್ರಮದಲ್ಲಿ ಯಶ್‌ ಭಾಗಿಯಾಗಿದ್ದರು. ನಿರೂಪಕಿ ಅನುಪಮಾ ಚೋಪ್ರಾ ಅವರು ನಟ ಯಶ್ ಸಂದರ್ಶನ ನಡೆಸಿದ್ದಾರೆ. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಯಶ್ ಮಾತನಾಡಿದ್ದಾರೆ. ಇದರಲ್ಲಿ ಯಶ್ ತಮ್ಮ 19ನೇ ಸಿನಿಮಾ ಕಥೆ ಬಗ್ಗೆ ಕೂಡ ಚರ್ಚೆ ಆಗಿದೆ.

ಇದನ್ನೂ ಓದಿ | Actor Yash | ಯಶ್‌ ಮುಂದಿನ ಸಿನಿಮಾ ಯಾವುದು? ಸುಳಿವು ಕೊಟ್ರಾ ನಟ?

Exit mobile version