ಬೆಂಗಳೂರು : ‘ಕೆಜಿಎಫ್’ ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ (Actor Yash) ಮುಂದಿನ ಯೋಜನೆಯ ಬಗ್ಗೆ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಯಶ್ ಹುಟ್ಟು ಹಬ್ಬದ ದಿನದಂದು (ಜನವರಿ ೮) ಹೊಸ ಸುದ್ದಿ ಹಂಚಿಕೊಳ್ಳಲಿದ್ದಾರೆ ಎಂಬ ಗಾಸಿಪ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಯಶ್ ಅವರ ಮುಂದಿನ ಸಿನಿಮಾ 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಲಿದೆ ಎನ್ನಲಾಗುತ್ತಿದೆ. ತಮಿಳು ನಿರ್ದೇಶಕರೊಬ್ಬರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇವೆಲ್ಲದರ ಬಗ್ಗೆ ಯಶ್ ತಮ್ಮ ಜನುಮ ದಿನದಂದು ಘೋಷಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಕೆಜಿಎಫ್ ಯಶಸ್ಸಿನ ಬಳಿಕ ಯಶ್ ಬಹು ದೊಡ್ಡ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದಾರೆ ಎನ್ನಲಾಗಿತ್ತು. ವರದಿ ಪ್ರಕಾರ ನರ್ತನ್ ಬದಲಾಗಿ ತಮಿಳು ನಿರ್ದೇಶಕರಿಗೆ ಯಶ್ ಕಾಲ್ ಶೀಟ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ, ಈ ಕುರಿತು ಯಶ್ ಯಾವುದೇ ಸ್ಪಷ್ಟನೆಯನ್ನು ಈವರೆಗೂ ನೀಡದೇ ಇರುವುದು ಕುತೂಹಲಕ್ಕೂ ಕಾರಣವಾಗಿದೆ. ಮೂಲಗಳ ಪ್ರಕಾರ ಯಶ್ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಲಿದ್ದಾರಂತೆ. ಆ ಬ್ಯಾನರ್ ಮೂಲಕವೇ ಪತ್ನಿ ರಾಧಿಕಾ ಪಂಡಿತ್ ರೀ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಸ್ಥೆಯು ಯಶ್ ಅವರ ಮಗಳ ಹೆಸರಿನಲ್ಲಿ ಇರಲಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ.
ಇದನ್ನೂ ಓದಿ | KGF 3 Actor Yash | ಕೆಜಿಎಫ್ನ ರಾಕಿ ಭಾಯ್, ಪಾಂಡ್ಯ ಬ್ರದರ್ಸ್ ಭೇಟಿ; ಕೆಜಿಎಫ್ 3 ಟ್ರೆಂಡಿಂಗ್
ವರದಿ ಪ್ರಕಾರ 400 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡಲಿದೆ ಎಂತಲೂ ಹೇಳಲಾಗುತ್ತಿದೆ. ಏನೇ ಇದ್ದರೂ ಹೊಸ ಅಪ್‌ಡೇಟ್‌ಗಳನ್ನು ಜನವರಿ 8ರಂದು ರಿವೀಲ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ | Shahrukh Khan | ಯಶ್ ಅಂದರೆ ʻವಾವ್ʼ ಎಂದ ಶಾರುಖ್ ಖಾನ್: ಟ್ವೀಟ್ ವೈರಲ್!