Site icon Vistara News

Actor Yash: ರಾಧಿಕಾ ಪಂಡಿತ್ ನಿರೀಕ್ಷೆಯೇ ಬೇರೆ, ಆದರೆ ಆಗಿದ್ದೇನು?

Actor Yash Predict Expectation VS Reality

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಅವರ ಸಿನಿಮಾ ಅಪ್‌ಡೇಟ್‌ಗಾಗಿ ಅವರ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಆದರೆ ಯಶ್‌ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ರಾಧಿಕಾ ಪಂಡಿತ್‌ ಕೂಡ ಆಗಾಗ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಪತ್ನಿ ರಾಧಿಕಾ ಪಂಡಿತ್ ನಿರೀಕ್ಷೆಯೇನು? ಆದರೆ ರಿಯಾಲಿಟಿ ಏನು? ಎನ್ನುವುದರ ಬಗ್ಗೆ ಸದ್ಯ ಯಶ್ ತಮಾಷೆಯಾಗಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ನಟ ಯಶ್​ ಅವರು ಇನ್​ಸ್ಟಾಗ್ರಾಂನಲ್ಲಿ ಎರಡು ಫೋಟೋಗಳನ್ನು ಶೇರ್ ಮಾಡಿಕೊಂಡು, “ನನ್ನ ಮಡದಿಯ ನಿರೀಕ್ಷೆ ವರ್ಸಸ್​​ ರಿಯಾಲಿಟಿ’’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಆ ಫೋಟೋಗಳಲ್ಲಿ ಒಂದು ಯಶ್‌- ರಾಧಿಕಾ ಕೈ ಕೈ ಹಿಡಿದು ಹಾಯಾಗಿ ನಡೆದು ಹೋಗುವಂತಿದ್ದರೆ ಮತ್ತೊಂದರಲ್ಲಿ ಇಬ್ಬರೂ ತಮ್ಮ ಮಕ್ಕಳನ್ನು ಎತ್ತಿಕೊಂಡಿದ್ದಾರೆ. ಅಂದರೆ ಮೊದಲ ಫೋಟೋ ರಾಧಿಕಾ ಪಂಡಿತ್​ರ ’ನಿರೀಕ್ಷೆ’ ಮತ್ತು ಎರಡನೇ ಫೋಟೋ ‘ರಿಯಾಲಿಟಿ’ ಎಂಬರ್ಥದಲ್ಲಿ ಯಶ್​ ಈ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಯಶ್‌ ಅಭಿಮಾನಿಗಳು ಕಮೆಂಟ್‌ ಮೂಲಕ ಸಂತಸ ಹೊರಹಾಕುತ್ತಿದ್ದಾರೆ.

ಕಮೆಂಟ್‌ಗಳಲ್ಲಿ `ರಾಕಿ ಭಾಯ್‌ ಆದರೂ ಮಕ್ಕಳನ್ನೂ ನೋಡಿಕೊಳ್ಳಬೇಕು’ ಎಂದು ಮಾಡಿದರೆ, ಇನ್ನೊಬ್ಬರು `ಯಶ್‌ 19 ಸಿನಿಮಾ ಯಾವುದು’ ಎಂದು ಸಿನಿ ಅಪ್‌ಡೇಟ್‌ ಕೇಳುತ್ತಿದ್ದಾರೆ. ಮಲಯಾಳಂ ನಟಿ-ಚಿತ್ರ ನಿರ್ದೇಶಕಿ ಗೀತು ಮೋಹನ್‌ದಾಸ್ (Geetu Mohandas ) ಯಶ್‌ ಅವರ ಮುಂದಿನ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Yash 19: ಯಶ್‌ ಮುಂದಿನ ಸಿನಿಮಾಗೆ ಗೀತು ಮೋಹನ್‌ದಾಸ್ ಡೈರೆಕ್ಟರ್? ಪೋಸ್ಟ್‌ ವೈರಲ್‌!

ಯಶ್‌ ಪೋಸ್ಟ್‌

ಅಭಿಮಾನಿಗಳು ಈಗ ಯಶ್​​ನ 19 ನೇ ಸಿನಿಮಾದ ಅಧಿಕೃತ ಪ್ರಕಟಣೆಗಾಗಿ ಕಾಯುತ್ತಿದ್ದಾರೆ, ಕೆಜಿಎಫ್‌ ಸಿನಿಮಾ 2018ರಲ್ಲಿ ಬಿಡುಗಡೆಯಾಗಿತ್ತು. ಆ ಸಿನಿಮಾ ಕಂಡ ಯಶಸ್ಸಿನ ಬೆನ್ನಲ್ಲೇ ಸಿನಿಮಾ ತಂಡ ಕೆಜಿಎಫ್‌ 2 ಸಿನಿಮಾ ಮಾಡಿತ್ತು. ಈ ಸಿನಿಮಾ ವಿಶ್ವಾದ್ಯಂತ ಒಟ್ಟು 1200 ಕೋಟಿ ರೂ. ಅನ್ನು ಬಾಚಿಕೊಂಡಿತ್ತು. ಭಾರತದಲ್ಲೇ ಸಿನಿಮಾ ಒಟ್ಟು 980 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿಕೊಂಡಿತ್ತು. ಈ ಸಿನಿಮಾದಲ್ಲಿ ರವಿ ಬಸ್ರೂರು ಅವರು ಸಂಗೀತ ನಿರ್ದೇಶನ ಮಾಡಿದ್ದು, ಸಿನಿಮಾದ ಎಲ್ಲ ಹಾಡುಗಳು ಸೂಪರ್‌ ಹಿಟ್‌ ಆಗಿದ್ದವು.

Exit mobile version