ಬೆಂಗಳೂರು : ನಂದಿಬೆಟ್ಟಕ್ಕೆ ರಾಕಿಂಗ್ ಸ್ಟಾರ್ ಯಶ್ (Actor Yash) ದಂಪತಿ ಭೇಟಿ ನೀಡಿ, ಗಿರಿಧಾಮದ ಸೌಂದರ್ಯ ಕಣ್ತುಂಬಿಸಿಕೊಂಡಿದ್ದಾರೆ. ಅಂದಹಾಗೆ ಕಳೆದ ಎರಡು ದಿನಗಳಿಂದ ಮಾಂಡೌಸ್ ಸೈಕ್ಲೋನ್ ಎಫೆಕ್ಟ್ನಿಂದ ನಂದಿಬೆಟ್ಟ ಮತ್ತಷ್ಟು ಕೂಲ್ ಆಗಿದ್ದು, ಡಿಸೆಂಬರ್ 10 ಶನಿವಾರ ಬೆಳಗ್ಗೆ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಪತ್ನಿ ರಾಧಿಕಾ ಪಂಡಿತ್ ನಂದಿಬೆಟ್ಟಕ್ಕೆ ಆಗಮಿಸಿ ಪ್ರಾಕೃತಿಕ ಸೊಬಗನ್ನು ಸವಿದಿದ್ದಾರೆ.
ಬೆಳಗ್ಗೆ 6.30ರ ಸುಮಾರಿಗೆ ನಂದಿಗಿರಿಧಾಮಕ್ಕೆ ಆಗಮಿಸಿರುವ ದಂಪತಿ ನಂದಿಬೆಟ್ಟದ ಮೇಲೆ ಕೆಲ ಕಾಲ ಜಾಲಿಯಾಗಿ ಸುತ್ತಾಡಿದ್ದು, ಅಲ್ಲೇ ಇದ್ದ ಮಯೂರ ಹೋಟೆಲ್ನಲ್ಲಿ ತಿಂಡಿ ತಿಂದು ಮರಳಿ ವಾಪಸ್ಸಾಗಿದ್ದಾರೆ. ಇನ್ನೂ ಸಹಜವಾಗಿ ನಟ ಯಶ್ ಹಾಗೂ ರಾಧಿಕಾ ಪಂಡಿತ್ ಅವರನ್ನು ನೋಡುತ್ತಿದ್ದಂತೆ ಪ್ರವಾಸಿಗರು ತಾ ಮುಂದು ತಾ ಮುಂದು ಎಂದು ನೋಡಲು ಮುಗಿಬಿದ್ದಿದ್ದಾರೆ.
ಇದನ್ನೂ ಓದಿ | Actor Yash | ಯೂನಿಕಾರ್ನ್ ಥೀಮ್ನಲ್ಲಿ ಜನುಮದಿನ ಆಚರಿಸಿಕೊಂಡ ಯಶ್-ರಾಧಿಕಾ ದಂಪತಿ ಪುತ್ರಿ ಐರಾ: ಇಲ್ಲಿವೆ ಫೋಟೊಗಳು!
ಕೆಲವರು ಫೋಟೊ ಕ್ಲಿಕ್ಕಿಸಿಕೊಂಡು ಸೆಲ್ಫಿ ತೆಗೆದುಕೊಂಡು ಖುಷಿಯಾಗಿದ್ದಾರೆ. ವಿವಾಹ ವಾರ್ಷಿಕೋತ್ಸವದ ನೆನಪಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಕೆಲ ಹೊತ್ತು ನಂದಿ ಗಿರಿಧಾಮದಲ್ಲಿ ಕಳೆದು, ಸ್ಮರಣೀಯವಾಗಿಸಿದ್ದಾರೆ.
ಇದನ್ನೂ ಓದಿ | Actor Yash | 6ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಯಶ್-ರಾಧಿಕಾ ಜೋಡಿ!