Site icon Vistara News

Actor Yash | ಯಶ್‌ ರಾಜಾಹುಲಿಯ ಗರ್ಜನೆಯ ಪೋಸ್ಟ್ ವೈರಲ್!

Actor Yash

ಬೆಂಗಳೂರು : ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಅವರ ಮುಂದಿನ ಸಿನಿಮಾ ಕುರಿತು ಅವರ ಫ್ಯಾನ್ಸ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಪ್ರಶ್ನಿಸುತ್ತಲೇ ಇರುತ್ತಾರೆ. ಕೆಜಿಎಫ್‌ ನಂತರದಲ್ಲಿ ಯಶ್‌ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲ ಸಿನಿ ರಸಿಕರಿಗೆ ಹೆಚ್ಚಾಗಿದೆ. ಇದೀಗ ಯಶ್‌ ಅವರ ಪೋಸ್ಟ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸಿಂಹದ ಮುಂದೆ ರಾಜಾಹುಲಿಯ ಗರ್ಜನೆಯೇ ಈ ಪೋಸ್ಟ್‌ನ ಸೀಕ್ರೆಟ್‌.

ಹಾಲಿವುಡ್‌ ಲೆವೆಲ್‌ನಲ್ಲಿ ರಾಕಿಭಾಯ್ ರೆಡಿ ಆಗುತ್ತಿದ್ದಾರೆ ಎಂದು ಫ್ಯಾನ್ಸ್‌ ಫೋಟೊ ಎಡಿಟ್‌ ಮಾಡಿದ್ದು, ಇದಕ್ಕೆ ಕೆಜಿಎಫ್‌ ಮ್ಯೂಸಿಕ್‌ ಹಾಕಿದ್ದಾರೆ. ಇದು ಸಿಕ್ಕಾಪಟೆ ವೈರಲ್‌ ಆಗುತ್ತಿದೆ. ಈ ಫೋಟೊವನ್ನು ಯಶ್ ಫ್ಯಾನ್ಸ್‌ ಶೇರ್‌ ಮಾಡಿದ್ದಾರೆ. ಕೆವಿಎನ್‌ ಪ್ರೊಡಕ್ಷನ್‌ ಹೌಸ್‌ನಲ್ಲಿ ಯಶ್‌ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು.

ಇದನ್ನೂ ಓದಿ | Actor Yash | ಯೂನಿಕಾರ್ನ್‌ ಥೀಮ್‌ನಲ್ಲಿ ಜನುಮದಿನ ಆಚರಿಸಿಕೊಂಡ ಯಶ್‌-ರಾಧಿಕಾ ದಂಪತಿ ಪುತ್ರಿ ಐರಾ: ಇಲ್ಲಿವೆ ಫೋಟೊಗಳು!

ಈ ಮೊದಲು ನರ್ತನ್ ಜತೆ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಸದ್ಯ ಆ ಸಿನಿಮಾ ಮಾಡುವುದಿಲ್ಲ ಎನ್ನುವ ಸುದ್ದಿ ಸಿಕ್ಕಿದೆ. ನರ್ತನ್ ಕೂಡ ಮತ್ತೊಂದು ಸಿನಿಮಾ ತಯಾರಿಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ | Rocking Star Yash | ಮಗಳು ಐರಾ ಹೆಸರಿನ ನಿರ್ಮಾಣ ಸಂಸ್ಥೆಗೆ ಯಶ್‌ ಹೀರೊ ಆಗಲಿದ್ದಾರಾ?

Exit mobile version