Site icon Vistara News

Actor Yash | ಕೆಜಿಎಫ್‌-3 ಚಿತ್ರದಿಂದ ‘ರಾಕಿಭಾಯ್’ ಯಶ್ ಔಟ್? ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದೇನು?

Actor Yash

ಬೆಂಗಳೂರು : ಸ್ಯಾಂಡಲ್‌ವುಡ್‌ನ ಇತಿಹಾಸ ಸೃಷ್ಟಿಸಿದ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ (Actor Yash ) ಕೆಜಿಎಫ್‌ ಸಿನಿಮಾ ಬ್ಲಾಕ್‌ ಬಸ್ಟರ್‌ ಲಿಸ್ಟ್‌ಗೆ ಸೇರುತ್ತಿದ್ದಂತೆ ‘ಕೆಜಿಎಫ್ 3’ ಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದರು. ನಿರ್ಮಾಣ ಸಂಸ್ಥೆ ಕೂಡ ‘ಕೆಜಿಎಫ್ ಚಾಪ್ಟರ್ 3’ ಸೆಟ್ಟೇರಿವುದಕ್ಕೆ ತುದಿಗಾಲಲ್ಲಿ ನಿಂತಿದೆ. ಆದರೆ ಇದೀಗ ವಿಜಯ ಕಿರಗಂದೂರು ಹೇಳಿಕೆ ಒಂದು ಭಾರಿ ಸಂಚಲನ ಸೃಷ್ಟಿಸಿದೆ.

ಕೆಜಿಎಫ್ ಸಿರೀಸ್ ಬಗ್ಗೆ ವಿಜಯ್ ಕಿರಗಂದೂರು ರಾಷ್ಟ್ರೀಯ ಖಾಸಗಿ ವಾಹಿನಿಗೆ ಹೇಳಿಕೆ ನೀಡಿದ್ದಾರೆ. ಕೆಜಿಎಫ್‌ 3 ಸಿನಿಮಾ 2025ರಲ್ಲಿ ಶುರುವಾಗಲಿದ್ದು, ರಾಕಿಬಾಯ್‌ ಪಾತ್ರವನ್ನು ಬೇರೆ ಹೀರೊ ಮಾಡುವ ಸಾಧ್ಯತೆ ಇದೆ. ಜೇಮ್ಸ್ ಬಾಂಡ್ ಸಿರೀಸ್‌ನಂತೆ ಹೀರೊಗಳು ಬದಲಾಗುತ್ತಾ ಇರುತ್ತಾರೆ. ಹೊಂಬಾಳೆ ಫಿಲ್ಮ್ಸ್‌ ಈ ದೊಡ್ಡ ಪ್ಲ್ಯಾನ್‌ ಮಾಡಿಕೊಂಡಿದೆʼʼ ಎಂದಿದ್ದಾರೆ.

ಇದನ್ನೂ ಓದಿ | Actor Yash | ಮಗ ಸರ್ಕಾರಿ ಅಧಿಕಾರಿ ಆಗಬೇಕೆಂಬ ಆಸೆ ಅಪ್ಪನದಾಗಿತ್ತು: ಯಶ್‌ ಬಗ್ಗೆ ಕೆಲವು ಗೊತ್ತಿರದ ಸಂಗತಿಗಳು ಇಲ್ಲಿವೆ!

ಬೇರೆ ಹೀರೊ ಅಂದಿದ್ಯಾಕೆ?
ʻಕೆಜಿಎಫ್ ಚಾಪ್ಟರ್ 3’ಗೆ ಈ ಸರಣಿ ಐದನೇ ಚಾಪ್ಟರ್‌ವರೆಗೂ ಮುಂದುವರಿಯುತ್ತಲೇ ಇರುತ್ತದೆ ಎಂದು ವಿಜಯ ಕಿರಗಂದೂರು ಅವರೇ ಹೇಳಿದ್ದಾರೆ. ಹೀಗಾಗಿ ಐದು ಸರಣಿಯನ್ನು ದಾಟಿ ಮುಂದಕ್ಕೆ ಹೋದರೆ ಆಗ ರಾಕಿ ಭಾಯ್ ಪಾತ್ರವನ್ನು ಯಶ್ ಬದಲು ಬೇರೆ ಹೀರೊ ಮಾಡಬಹುದು ಎಂದು ಹೇಳಿದ್ದಾರೆ. ಆದರೆ, ‘ಕೆಜಿಎಫ್ 3’ ರಿಲೀಸ್ ಆಗುವುದು ಮೂರು ವರ್ಷಗಳ ಬಳಿಕ. ಈ ಕಾರಣಕ್ಕೆ ವಿಜಯ್ ಕಿರಗಂದೂರು ಹೀರೊ ಬದಲಾಗಬಹುದು ಎಂದು ಹೇಳಿಕೆ ನೀಡಿದ್ದಾರೆ.

2018ರಲ್ಲಿ ‘ಕೆಜಿಎಫ್ ಚಾಪ್ಟರ್ 1’ ತೆರೆ ಕಂಡಿತು. ಚಾಪ್ಟರ್ 1 ಸೂಪರ್ ಹಿಟ್ ಆಗಿತ್ತು. ಈ ಬೆನ್ನಲ್ಲೇ ‘ಕೆಜಿಎಫ್ ಚಾಪ್ಟರ್ 2’ ಬಾಕ್ಸ್‌ಆಫೀಸ್‌ನಲ್ಲಿ ಸುಮಾರು 1200 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿತ್ತು. ಹೀಗಾಗಿ ಈ ಫ್ರಾಂಚೈಸಿಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಚಿತ್ರತಂಡ ನಿರ್ಧರಿಸಿದೆ.

ಇದನ್ನೂ ಓದಿ | Actor Yash | ದುಬೈನಲ್ಲಿ ಕುಟುಂಬದ  ಜತೆ ಯಶ್‌ ಜನುಮದಿನದ ಆಚರಣೆ!

Exit mobile version