Site icon Vistara News

Actor Yash : ಮುಂಬೈನಲ್ಲಿ ಕಾಣಿಸಿಕೊಂಡ ರಾಕಿ ಭಾಯ್‌; ಬಾಲಿವುಡ್‌ಗೆ ಹೆಜ್ಜೆ ಇಟ್ಟರಾ ಯಶ್‌?

#image_title

ಮುಂಬೈ: ಸ್ಯಾಂಡಲ್‌ವುಡ್‌ನ ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಚಂದನವನದಲ್ಲಿ ಮಿಂಚಿದ್ದಾಗಿದೆ. ಕೆಜಿಎಫ್‌ ಸಿನಿಮಾಗಳ ಮೂಲಕ ರಾಕಿ ಭಾಯ್‌ ಆಗಿ ದೇಶದೆಲ್ಲೆಡೆ ಸುದ್ದಿಯಾಗಿರುವ ಅವರು ಇದೀಗ ಬಾಲಿವುಡ್‌ಗೂ ಕಾಲಿಟ್ಟರಾ ಎನ್ನುವ ಚರ್ಚೆಗಳು ಆರಂಭವಾಗಿದೆ. ಅದಕ್ಕೆ ಕಾರಣ ಅವರು ಮುಂಬೈನಲ್ಲಿ ಕಾಣಿಸಿಕೊಂಡಿರುವುದು.

ಇದನ್ನೂ ಓದಿ: Actor Yash: ಅಪ್ಪನಿಗೇ ಬೈಸೆಪ್ಸ್‌ ತೋರಿಸಿ ಆ್ಯಟಿಟ್ಯೂಡ್‌ ಪ್ರದರ್ಶಿಸಿದ ಯಶ್‌ ಪುತ್ರ, ಚೋಟಾ ರಾಕಿ ಭಾಯ್‌ ಎಂದ ಜನ
ಯಶ್‌ ಮಂಗಳವಾರ ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನ ಮಾಧ್ಯಮ ಮಂದಿಯ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿರುವ ನಟ ಅವರತ್ತ ಕೈ ಬೀಸಿದ್ದಾರೆ ಕೂಡ. ನೀಲಿ ಬಣ್ಣದ ಶರ್ಟ್‌, ಕೂಲಿಂಗ್‌ ಗ್ಲಾಸ್‌ ತೊಟ್ಟಿದ್ದ ನಟ ವಿಮಾನವಿಳಿದು ಕಾರಿನಲ್ಲಿ ತೆರಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.‌


ಯಶ್‌ ಅವರು ಬಾಲಿವುಡ್‌ಗೆ ಹೆಜ್ಜೆ ಇಡುತ್ತಿಲ್ಲ. ಹಿಂದಿ ಸಿನಿಮಾದಲ್ಲಿ ನಟನೆ ಮಾಡುವುದಕ್ಕಾಗಿ ಮುಂಬೈಗೆ ಹೋಗಿಲ್ಲ. ಯಾವುದೋ ಒಂದು ಬ್ರ್ಯಾಂಡ್‌ನ ಶೂಟಿಂಗ್‌ ಸಲುವಾಗಿ ಅವರು ಅಲ್ಲಿಗೆ ತೆರಳಿದ್ದರು ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: Actor Yash: ರಾಕಿಂಗ್‌ ಸ್ಟಾರ್‌ ಯಶ್‌ ಭೇಟಿಗೆ ಹರಿದುಬಂದ ಅಭಿಮಾನಿಗಳ ದಂಡು!
ಕೆಜಿಎಫ್‌ 2 ಯಶಸ್ಸಿನ ಬೆನ್ನಲ್ಲೇ ಕೆಜಿಎಫ್‌ 3 ಅನ್ನೂ ನಿರ್ಮಿಸುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾ 2025ರಲ್ಲಿ ಸೆಟ್‌ ಏರುವ ಸಾಧ್ಯತೆಯಿದೆ. ಚಿತ್ರದ ನಿರ್ಮಾಪಕರಾಗಿರುವ ವಿಜಯ್‌ ಕಿರಗಂದೂರು ಅವರು ಹೇಳಿರುವ ಪ್ರಕಾರ ಸಿನಿಮಾ ಒಟ್ಟು ಐದು ಭಾಗಗಳಲ್ಲಿ ಬಿಡುಗಡೆಯಾಗಲಿದೆ.

Exit mobile version