Site icon Vistara News

Celebrity News : 40 ವರ್ಷ ದಾಟಿದ ನಂತರ ತಂದೆಯಾದ ಸೆಲೆಬ್ರಿಟಿಗಳಿವರು!

Actors Embraced Parenthood in Their 40s and 50s

#image_title

ಬೆಂಗಳೂರು: ಹಾಲಿವುಡ್‌ನಲ್ಲಿ ಕೆಲವು ಸೆಲೆಬ್ರಿಟಿಗಳು 60-70 ದಾಟಿದ ನಂತರವೂ ತಂದೆಯಾಗುವ ಸುದ್ದಿಗಳನ್ನು ನೋಡಿದ್ದೀರಿ. ಅಲ್ಲಿ ತೀರಾ ವಯಸ್ಸಾದ ನಂತರ ಪೋಷಕರಾಗುವುದೇ ಒಂದು ಟ್ರೆಂಡ್‌ ಆಗಿಬಿಟ್ಟಿದೆ. ಈ ಟ್ರೆಂಡ್‌ ಅನ್ನು ನಮ್ಮ ಭಾರತದ ಸೆಲೆಬ್ರಿಟಿಗಳು ಪೂರ್ತಿ ಪ್ರಮಾಣದಲ್ಲಿ ಅಲ್ಲದಿದ್ದರೂ ಅಲ್ಪ ಪ್ರಮಾಣದಲ್ಲಂತೂ ಫಾಲೋ ಮಾಡುತ್ತಿದ್ದಾರೆ. ಇತ್ತೀಚೆಗೆ ನಟ ಪ್ರಭುದೇವ್‌ ಅವರು ತಮ್ಮ 50ನೇ ವಯಸ್ಸಿನಲ್ಲಿ ತಂದೆಯಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅದೇ ರೀತಿ 40 ದಾಟಿದ ನಂತರ ತಂದೆಯಾದ ಗಣ್ಯರ ವಿವರ (Celebrity News) ಇಲ್ಲಿದೆ ನೋಡಿ.

ಪ್ರಭುದೇವ 50ರಲ್ಲಿ ಅಪ್ಪ

ಪ್ರಭುದೇವ ಅವರು ತಮ್ಮ ಮೊದಲನೇ ಪತ್ನಿ ರಮ್ಲಯಾ ಅವರೊಂದಿಗೆ ಮೂರು ಗಂಡು ಮಕ್ಕಳನ್ನು ಹೊಂದಿದ್ದಾರೆ. ಹಿಮಾನಿ ಅವರೊಂದಿಗೆ ಎರಡನೇ ಮದುವೆಯಾಗಿರುವ ಅವರು ಇತ್ತೀಚೆಗೆ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. 50ರ ಹರೆಯದಲ್ಲಿ ತಂದೆಯಾದ ಸಂತಸವನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Video Viral: ಕಿಕ್‌ ಏರಿಸಿಕೊಂಡ ಯುವಕರ ಹುಚ್ಚಾಟ; ಜತೆಯಲ್ಲಿದ್ದವನ ಬೆತ್ತಲೆಗೊಳಿಸಿ ರೋಡ್‌ ಡ್ಯಾನ್ಸ್‌
ಪವನ್‌ ಕಲ್ಯಾಣ್‌ 40ರಲ್ಲಿ ಅಪ್ಪ

ತೆಲುಗು ಚಿತ್ರರಂಗದ ಹಿರಿಯ ನಟ, ಜನಸೇನಾ ಪಕ್ಷದ ಸಂಸ್ಥಾಪಕ ಪವನ್‌ ಕಲ್ಯಾಣ್‌ ಅವರಿಗೆ ನಾಲ್ಕು ಮಕ್ಕಳಿವೆ. ನಾಲ್ಕನೇ ಮಗುವಾಗುವ ಸಮಯಕ್ಕೆ ಪವನ್‌ ಕಲ್ಯಾಣ್‌ ವಯಸ್ಸು 40 ದಾಟಿತ್ತು. ಹಾಗೆಯೇ ದಿಲ್‌ ರಾಜು ಕೂಡ 51ನೇ ವಯಸ್ಸಿನಲ್ಲಿ ತಂದೆಯಾದವರು. ಅವರ ಮೊದಲನೇ ಮದುವೆಯಿಂದ ಅವರಿಗೆ ಹನ್ಶಿತಾ ರೆಡ್ಡಿ ಹೆಸರಿನ ಮಗಳಿದ್ದಾಳೆ. 2020ರಲ್ಲಿ ತೇಜಸ್ವಿನಿ ಅವರನ್ನು ಮದುವೆಯಾದ ಅವರು 51ನೇ ವರ್ಷದಲ್ಲಿ ಎರಡನೇ ಬಾರಿಗೆ ತಂದೆಯಾದರು.

ಶಾರುಖ್‌ ಖಾನ್‌ ಕುಟುಂಬ

ಆಮೀರ್‌ ಖಾನ್‌ 46ನೇ ವಯಸ್ಸಿನಲ್ಲಿ ಅಪ್ಪ

ಬಾಲಿವುಡ್‌ನಲ್ಲೂ ಈ ಟ್ರೆಂಡ್‌ ಚಾಲ್ತಿಯಲ್ಲಿದೆ. ನಟ ಆಮೀರ್‌ ಖಾನ್‌ ಅವರು ಮಾಜಿ ಪತ್ನಿ ರೀನಾ ಅವರೊಂದಿಗೆ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ನಂತರ ಕಿರಣ್‌ ರಾವ್‌ ಅವರನ್ನು ಮದುವೆಯಾದ ಅವರು 46ನೇ ವಯಸ್ಸಿನಲ್ಲಿ ಐವಿಎಫ್‌ ಬಾಡಿಗೆ ತಾಯ್ತನದ ಮೂಲಕ ಮತ್ತೊಂದು ಮಗುವಿಗೆ ತಂದೆಯಾದರು. ಶಾರುಖ್‌ ಖಾನ್‌ ಅವರು ಕೂಡ 46ನೇ ವಯಸ್ಸಿನಲ್ಲಿ ಐವಿಎಫ್‌ ಬಾಡಿಗೆ ತಾಯ್ತನದ ಮೂಲಕ ಅಬ್ರಾಮ್‌ ಹೆಸರಿನ ಮಗನಿಗೆ ತಂದೆಯಾದರು. ಅವರಿಗೆ ಒಟ್ಟು ಮೂರು ಮಕ್ಕಳಿದ್ದಾರೆ.

ಸಂಜಯ್‌ ದತ್‌ ಅಪ್ಪ @51

ಸಂಜಯ್‌ ದತ್‌ ಮತ್ತು ಮಾನ್ಯತಾ ದತ್‌ ದಾಂಪತ್ಯದಲ್ಲಿ ಅನೇಕ ಬಾರಿ ಬಿರುವು ಉಂಟಾಗಿದೆ. ಹೀಗಿದ್ದರೂ ಈ ಜೋಡಿಗೆ ಅವಳಿ ಜವಳಿ ಮಕ್ಕಳಾದವು. ಆಗ ಸಂಜಯ್‌ಗೆ 51 ವರ್ಷ ವಯಸ್ಸು. ನವಾಜುದ್ದೀನ್‌ ಸಿದ್ದಿಕಿ ಅವರು 41ನೇ ವರ್ಷದ ಜನ್ಮದಿನಾಚರಣೆಯಂದೇ ಮಗುವಿನ ತಂದೆಯಾದದ್ದು ವಿಶೇಷ. ಸೊಹೈಲ್‌ ಖಾನ್‌ ಮತ್ತು ಸೀಮಾ ಖಾನ್‌ಗೆ ಮೊದಲನೇ ಮಗು ಜನಿಸಿದಾಗ ಸೊಹೈಲ್‌ ಅವರಿಗೆ 32 ವರ್ಷ. ಅದಾಗಿ 10 ವರ್ಷಗಳ ನಂತರ ಅಂದರೆ 42ನೇ ವಯಸ್ಸಿನ್ಲಲಿ ಸೊಹೈಲ್‌ ಎರಡನೇ ಮಗುವಿನ ತಂದೆಯಾದರು.

ಮನೋಜ್‌ ಬಾಜಪೇಯಿ ಕುಟುಂಬ


ಪ್ರಕಾಶ್‌ ರೈ ಅಪ್ಪ@50

ದಕ್ಷಿಣ ಭಾರತದ ಪ್ರಸಿದ್ಧ ನಟ ಪ್ರಕಾಶ್‌ ರಾಜ್‌. ಅವರು ಮಾಜಿ ಪತ್ನಿ ಲಲಿತಾ ಕುಮಾರಿ ಅವರೊಂದಿಗೆ ಮೂರು ಮಕ್ಕಳನ್ನು ಹೊಂದಿದ್ದಾರೆ. 2010ರಲ್ಲಿ ಪೋನಿ ವರ್ಮಾ ಅವರನ್ನು ಮದುವೆಯಾದ ಅವರು 50ನೇ ವಯಸ್ಸಿನಲ್ಲಿ ನಾಲ್ಕನೇ ಮಗುವಿನ ತಂದೆಯಾದರು. ಎರಡು ಬಾರಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿರುವ ಮನೋಜ್‌ ಬಾಜಪೇಯಿ ಅವರು 2006ರಲ್ಲಿ ನಟಿ ನೇಹಾ ಬಾಜಪೇಯಿ ಅವರನ್ನು ಮದುವೆಯಾಗಿ 42ನೇ ವಯಸ್ಸಿನಲ್ಲಿ ಹೆಣ್ಣು ಮಗುವಿನ ತಂದೆಯಾದರು.

ಇದನ್ನೂ ಓದಿ: Niveditha Shivarajkumar: ನಿವೇದಿತಾ ಶಿವರಾಜ್‌ಕುಮಾರ್‌ ನಿರ್ಮಾಣದ ಸಿನಿಮಾಗೆ ಟೈಟಲ್‌ ಫಿಕ್ಸ್‌; ಮಗಳ ಚಿತ್ರಕ್ಕೆ ಶಿವಣ್ಣ ದಂಪತಿ ಹಾರೈಕೆ!
ನಟ ರೋನಿತ್‌ ರಾಯ್‌ ಅವರು ಎರಡನೇ ಮದುವೆಯಾಗಿ 42ನೇ ವಯಸ್ಸಿನಲ್ಲಿ ಮಗನಿಗೆ ತಂದೆಯಾದರು. ಹಾಗೆಯೇ ಬಾಲಿವುಡ್‌ನ ಪ್ರಸಿದ್ಧ ನಟ ಅಕ್ಷಯ್‌ ಕುಮಾರ್‌ ಅವರು 44ನೇ ವರ್ಷದಲ್ಲಿ ಮಗಳು ನಿತಾರಾಳ ತಂದೆಯಾದರು.

Exit mobile version