Site icon Vistara News

Alia Bhatt: ಸ್ಟಾರ್‌ ಕಿಡ್‌ ಅಂದವರಿಗೆ ತಿರುಗೇಟು ಕೊಟ್ಟ ಆಲಿಯಾ ಭಟ್‌

Actress Alia Bhatt Hit Backs to Those who criticized her as Nepotism

ಬೆಂಗಳೂರು: ಬಾಲಿವುಡ್ ತಾರೆ ಆಲಿಯಾ ಭಟ್ (Alia Bhatt) ಅವರು ಕರಣ್‌ ಜೋಹರ್ ನಿರ್ದೇಶನದ `ಸ್ಟೂಡೆಂಟ್ ಆಫ್ ದಿ ಇಯರ್‌’ ಸಿನಿಮಾ ಮೂಲಕ ಸಿನಿ ರಂಗಕ್ಕೆ ಪದಾರ್ಪಣೆ ಮಾಡಿದರು. ಆದರೆ ಆಲಿಯಾ ಭಟ್‌ ಆಗಾಗ ನೆಪೋಟಿಸಂ ವಿಚಾರವಾಗಿ ಚರ್ಚೆಯಲ್ಲಿರುತ್ತಾರೆ. ಇದೀಗ ನಟಿ ಸ್ಟಾರ್ ಕಿಡ್ ಎಂದವರಿಗೆ ಖಡಕ್‌ ಪ್ರತಿಕ್ರಿಯೆ ನೀಡಿದ್ದಾರೆ.

ಸ್ಟಾರ್ ಕಿಡ್ ಎನ್ನುವ ಕಾರಣಕ್ಕೆ ಸಿನಿಮಾರಂಗದಲ್ಲಿ ಅವಕಾಶಗಳು ಆಲಿಯಾ ಭಟ್‌ ಅವರಿಗೆ ಸುಲಭವಾಗಿ ಸಿಕ್ಕಿತು ಎಂದು ಹಲುಬುವವರಿಗೆ ಬಜಾರ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಖಡಕ್‌ ಪ್ರತಕ್ರಿಯೆ ನೀಡಿದ್ದಾರೆ. ಆಲಿಯಾ ಈ ಬಗ್ಗೆ ಮಾತನಾಡಿ ʻʻಹಲವು ವರ್ಷಗಳಿಂದ ನನಗೆ ಸ್ಟಾರ್‌ ಕಿಡ್‌ ಎಂಬ ಪಟ್ಟ ಕೊಡುತ್ತಲೇ ಇದ್ದಾರೆ. ನಾನು ಸ್ಟಾರ್ ಕಿಡ್ ಆಗಿರುವುದರಿಂದ ನನಗೆ ಸುಲಭವಾಗಿ ಅವಕಾಶ ಸಿಕ್ಕಿತು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ನನ್ನ ಕನಸುಗಳನ್ನು ಇನ್ನೊಬ್ಬ ವ್ಯಕ್ತಿಯ ಕನಸುಗಳಿಗೆ ಹೋಲಿಸುತ್ತೇನೆ. ಯಾವುದೇ ಕನಸು ದೊಡ್ಡದು, ಚಿಕ್ಕದು ಎಂಬುದಿಲ್ಲ. ಪ್ರತಿಯೊಬ್ಬರ ಕನಸುಗಳು ಒಂದೇ, ಪ್ರತಿಯೊಬ್ಬರ ಆಸೆಯೂ ಒಂದೇ.”ಎಂದರು.

ಮಾತು ಮುಂದುವರಿಸಿದ ಆಲಿಯಾ ʻಸಿನಿರಂಗಕ್ಕೆ ಸುಲಭವಾಗಿ ಎಂಟ್ರಿ ಕೊಟ್ಟೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಸವಲತ್ತು ಸಿಕ್ಕಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ನಾನು ನನ್ನ 100ರಷ್ಟು ಶ್ರಮ ಹಾಕುತ್ತೇನೆ. ನನ್ನ ಕೆಲಸವನ್ನು ನಾನು ಎಂದಿಗೂ ಹಗುರವಾಗಿ ತೆಗೆದುಕೊಂಡಿಲ್ಲ.’ ಎಂದಿದ್ದಾರೆ ಆಲಿಯಾ.

ಆಲಿಯಾ ಭಟ್ ಅವರು ಕರಣ್ ಜೋಹರ್ ನಿರ್ದೇಶನದ ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಶಬಾನಾ ಅಜ್ಮಿ, ಧರ್ಮೇಂದ್ರ ಮತ್ತು ಜಯಾ ಬಚ್ಚನ್ ನಟಿಸಿದ್ದಾರೆ.

ಇದನ್ನೂ ಓದಿ; Alia Bhatt: ಆಲಿಯಾ ಚಪ್ಪಲಿಗಳನ್ನು ಕೈಯಲ್ಲಿ ಎತ್ತಿಕೊಂಡ ರಣಬೀರ್‌; ಸಿಕ್ತು ʻಬೆಸ್ಟ್‌ ಹಸ್ಬೆಂಡ್‌ʼ ಪಟ್ಟ!

‘ಹೈವೇ’, ‘ಉಡ್ತಾ ಪಂಜಾಬ್​’, ‘ಡಿಯರ್ ಜಿಂದಗಿ’, ‘ರಾಜಿ’, ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಕಳೆದ ವರ್ಷ ಅಕ್ಟೋಬರ್‌ಗೆ ಆಲಿಯಾ ಭಟ್ ಚಿತ್ರರಂಗಕ್ಕೆ ಕಾಲಿಟ್ಟು 10 ವರ್ಷ ಕಳೆದಿದೆ. ಅವರು ಇತ್ತೀಚೆಗೆ ಐದನೇ ಫಿಲ್ಮ್​ಫೇರ್ ಅವಾರ್ಡ್ ಗೆದ್ದಿದ್ದಾರೆ.

Exit mobile version