Site icon Vistara News

Alia Bhatt | ಮುಂದಿನ ತಿಂಗಳೇ ಆಲಿಯಾ ಭಟ್​ ಹೆರಿಗೆ; ಮಗುವಿನ ಸ್ವಾಗತಕ್ಕೆ ಸ್ಟಾರ್​ ದಂಪತಿ ಭರ್ಜರಿ ಸಿದ್ಧತೆ

Actress Alia Bhatt to deliver baby In November

ಮುಂಬಯಿ: ಬಾಲಿವುಡ್​ ತಾರಾ ದಂಪತಿ ಅಲಿಯಾ ಭಟ್​ ಮತ್ತು ರಣಬೀರ್ ಕಪೂರ್​ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾಗಿ ಎರಡೇ ತಿಂಗಳಿಗೆ ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದ ಆಲಿಯಾ ಭಟ್​ ಹೆರಿಗೆ ದಿನ ಸಮೀಪಿಸುತ್ತಿದೆ. ಕುಟುಂಬ ಮೂಲಗಳ ಪ್ರಕಾರ ಆಲಿಯಾ ಭಟ್​​​ ಹೆರಿಗೆ ನವೆಂಬರ್​​ 20ರ ನಂತರ, ಡಿಸೆಂಬರ್​ ಒಳಗೆ ಯಾವಾಗ ಬೇಕಾದರೂ ಆಗಬಹುದು ಎನ್ನಲಾಗಿದೆ. ಹಾಗೇ, ಎಚ್​ಎನ್​ ರಿಲಯನ್ಸ್​ ಆಸ್ಪತ್ರೆಯಲ್ಲಿ ಅವರ ಡೆಲಿವರಿ ಆಗಲಿದೆ. ಅಂದಹಾಗೇ, ಇದೇ ಆಸ್ಪತ್ರೆಯಲ್ಲಿ ರಣಬೀರ್​ ಕಪೂರ್​ ತಂದೆ ರಿಷಿ ಕಪೂರ್​ ಮೃತಪಟ್ಟಿದ್ದರು. ಈಗ ರಣಬೀರ್​ ಕಪೂರ್​ ಮೊದಲ ಮಗುವೂ ಇಲ್ಲೇ ಹುಟ್ಟಲಿದೆ..!

ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಆಲಿಯಾ ಭಟ್​ ಮತ್ತು ರಣಬೀರ್ ಕಪೂರ್ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಬೇಬಿ ರೂಮ್​​ ಈಗಲೇ ಸಜ್ಜಾಗಿದೆ. ಆಲಿಯಾ ಗರ್ಭಿಣಿಯಾಗಿದ್ದರೂ ಕೆಲಸದಲ್ಲಿ ಸಕ್ರಿಯರಾಗಿದ್ದರು. ‘ಬ್ರಹ್ಮಾಸ್ತ್ರ’ ಸಿನಿಮಾದ ಪ್ರಮೋಶನ್​​ನಲ್ಲಿ ತೊಡಗಿಕೊಂಡಿದ್ದರು. ಈ ಮಧ್ಯೆ ಅವರ ಬೇಬಿ ಬಂಪ್​ ಫೋಟೋಗಳೂ ಸಖತ್​ ವೈರಲ್ ಆಗಿದ್ದವು. ಗರ್ಭಿಣಿ ಆಲಿಯಾ ತಮ್ಮ ಬಯಕೆಗಳನ್ನೆಲ್ಲ ಈಡೇರಿಸಿಕೊಂಡಿದ್ದರು. ಅಂದಹಾಗೇ, ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ಇದೇ ವರ್ಷ ಏಪ್ರಿಲ್‌ 14ರಂದು ಮುಂಬಯಿಯ ಬಾಂದ್ರಾದಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಇದನ್ನೂ ಓದಿ: Alia Bhatt | ಅಲಿಯಾ ಭಟ್‌ ಬೇಬಿ ಬಂಪ್‌ ಹೊಸ ಫೋಟೋಗಳು ವೈರಲ್‌!

Exit mobile version