Site icon Vistara News

Actress Bhavana Rao | ನಟ ಸುನೀಲ್‌ ಶೆಟ್ಟಿ ಜತೆ ತೆರೆ ಹಂಚಿಕೊಂಡ ಗಾಳಿಪಟ ಖ್ಯಾತಿಯ ಭಾವನಾ ರಾವ್!

Actress Bhavana Rao

ಬೆಂಗಳೂರು: ‘ಗಾಳಿಪಟ’ ಸಿನಿಮಾದ (Actress Bhavana Rao) ಮೂಲಕ ಪ್ರೇಕ್ಷಕರ ಮನದಲ್ಲಿ ನೆಲೆಯೂರಿದ ಕನ್ನಡತಿ ಭಾವನಾ ರಾವ್ ಚಂದನವನದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ತಮಿಳು ಸಿನಿಮಾಗಳಲ್ಲೂ ಮಿಂಚಿದ್ದಾರೆ. ಇದೀಗ ಭಾವನಾ ರಾವ್‌ ಬಾಲಿವುಡ್ ಬಹು ನಿರೀಕ್ಷಿತ ವೆಬ್ ಸಿರೀಸ್‌ನಲ್ಲಿ ಬಿಟೌನ್ ದಿಗ್ಗಜರ ಜತೆ ಸ್ಕ್ರೀನ್‌ ಶೇರ್‌ ಮಾಡಿದ್ದಾರೆ.

ಬಾಲಿವುಡ್‌ನಲ್ಲಿ ಬಿಡುಗಡೆಗೆ ಸಜ್ಜಾಗಿರುವ ‘ಧಾರಾವಿ ಬ್ಯಾಂಕ್’ ವೆಬ್ ಸಿರೀಸ್‌ನಲ್ಲಿ ಭಾವನಾ ರಾವ್ ನಟಿಸಿದ್ದಾರೆ. ಇದರಲ್ಲಿ ಬಾಲಿವುಡ್‌ ಸ್ಟಾರ್ ನಟ ಸುನೀಲ್ ಶೆಟ್ಟಿ ಜತೆ ಭಾವನಾ ರಾವ್ ಅಭಿನಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾವನಾ ರಾವ್ ʻʻಹಿಂದಿಯಲ್ಲಿ ಇದು ನನ್ನ ಮೊದಲ ವೆಬ್ ಸಿರೀಸ್. ಇದರಲ್ಲಿ ಸುನೀಲ್ ಶೆಟ್ಟಿ ಮಗಳಾಗಿ ನಟಿಸಿದ್ದು, ಲಾಯರ್ ಪಾತ್ರ ನಿರ್ವಹಿಸಿದ್ದೇನೆ. ಒಟ್ಟು ಹತ್ತು ಸಂಚಿಕೆಗಳಿದ್ದು, ತುಂಬಾನೆ ಚೆನ್ನಾಗಿ ಮೂಡಿ ಬಂದಿದೆ. ನವೆಂಬರ್ 19ರಂದು ಈ ವೆಬ್ ಸಿರೀಸ್ ಬಿಡುಗಡೆಯಾಗುತ್ತಿದೆʼʼ ಎಂದು ಸಂತಸ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಭಾವನಾ ರಾವ್ ನಟನೆಯ ʻಹೊಂದಿಸಿ ಬರೆಯಿರಿʼ,ʻ ಗ್ರೇ ಗೇಮ್ಸ್ʼ ಬಿಡುಗಡೆಗೆ ರೆಡಿಯಾಗಿದ್ದು, ಇವುಗಳ ಜತೆ ಇನ್ನೂ ಮುರ್ನಾಲ್ಕು ಸಿನಿಮಾಗಳು ಕೈಯಲ್ಲಿವೆ.

ಇದನ್ನೂ ಓದಿ | KL Rahul | ಮತ್ತೆ ಬ್ಯಾಟಿಂಗ್​ ವೈಫಲ್ಯ; ಸಿಕ್ಕಾಪಟ್ಟೆ ಟ್ರೋಲ್​ ಆದ ಕೆ.ಎಲ್​. ರಾಹುಲ್

ʻಇಂದೋರಿ ಇಶ್ಕ್‌ʼ, ʻಹಾಫ್‌ ಟಿಕೆಟ್‌ʼ ಸಿನಿಮಾ ಖ್ಯಾತಿಯ ಸಮಿತ್ ಕಕ್ಕಡ್ ‘ಧಾರಾವಿ ಬ್ಯಾಂಕ್’ ವೆಬ್ ಸೀರೀಸ್ ನಿರ್ದೇಶನ ಮಾಡಿದ್ದಾರೆ. ಚಿತ್ರದ ಲೀಡ್ ರೋಲ್‌ಗಳಲ್ಲಿ ಸುನೀಲ್ ಶೆಟ್ಟಿ ಹಾಗೂ ವಿವೇಕ್ ಒಬೇರಾಯ್ ನಟಿಸಿದ್ದಾರೆ. ಟ್ರೈಲರ್‌ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದ್ದು ನವೆಂಬರ್ 19ರಂದು ಎಮ್‌ಎಕ್ಸ್‌ ಪ್ಲೇಯರ್‌ (MX Player)ನಲ್ಲಿವೆಬ್ ಸಿರೀಸ್ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ | Athiya Shetty and KL Rahul | ನಟಿ ಅಥಿಯಾ ಶೆಟ್ಟಿ ಮತ್ತು ಕೆಎಲ್‌ ರಾಹುಲ್‌ ಕಲ್ಯಾಣವಂತೆ : ಸುನೀಲ್‌ ಶೆಟ್ಟಿ ಹೇಳಿದ್ದೇನು?

Exit mobile version